ಬಜೆಟ್ ಅಧಿವೇಶನ: ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಜೊತೆಗೆ ಡಿಕೆಶಿಗೂ ಟಾಂಗ್ ನೀಡಿದ ಸಿದ್ದರಾಮಯ್ಯ?!

 ಮೇಕೆದಾಟು (Mekedatu) ಪಾದಯಾತ್ರೆಯಲ್ಲಿ ನಿಮ್ಮ ಫೋಟೋ ಇರಲಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ನನಗೆ ಫೋಟೋ ಹಾಕಿಸಿಕೊಂಡು ಹೆಸರು ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

Written by - Prashobh Devanahalli | Last Updated : Mar 7, 2022, 06:20 PM IST
  • ಸಚಿವ ಆರ್.ಅಶೋಕ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್
  • ನನಗೆ ಫೋಟೋ ಹಾಕಿಸಿಕೊಂಡು ಹೆಸರು ಹೇಳಿಕೊಳ್ಳುವ ಅಗತ್ಯವಿಲ್ಲ
  • ಬಿಜೆಪಿ ಜೊತೆ ಡಿ.ಕೆ.ಶಿವಕುಮಾರ್‌ ಅವರಿಗೂ ಟಾಂಗ್ ನೀಡಿದ ವಿಪಕ್ಷ ನಾಯಕ
ಬಜೆಟ್ ಅಧಿವೇಶನ: ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಜೊತೆಗೆ ಡಿಕೆಶಿಗೂ ಟಾಂಗ್ ನೀಡಿದ ಸಿದ್ದರಾಮಯ್ಯ?! title=
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಮೇಕೆದಾಟು (Mekedatu) ಪಾದಯಾತ್ರೆಯಲ್ಲಿ ನಿಮ್ಮ ಫೋಟೋ ಇರಲಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ನನಗೆ ಫೋಟೋ ಹಾಕಿಸಿಕೊಂಡು ಹೆಸರು ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಉಜ್ವಲ ಭವಿಷ್ಯಕ್ಕೆ ನ್ಯಾನೋ ತಂತ್ರಜ್ಞಾನ ನಿರ್ಣಾಯಕ: ಬೊಮ್ಮಾಯಿ

ಮುಂದೆ ಸಿಎಂ (Cheif Minister) ಯಾರಾಗಬೇಕು ಅಂತ ಈಗಲೇ ನಿಮ್ಮಲ್ಲಿ ಜಗಳ ಶುರುವಾಗಿದೆ. ನಿಮ್ಮ ಫೋಟೋ ಹಾಕೋದನ್ನೇ ಮರೆತಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ (Siddaramaiah), ಫೋಟೋ ಹಾಕಿಕೊಂಡು ಪ್ರಚಾರ ಮಾಡಿಸಿಕೊಳ್ಳ ಬೇಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೂ ಟಾಂಗ್ ನೀಡಿದರು.

ಸಿದ್ದರಾಮಯ್ಯ ಮಾತಿಗೆ ದ್ವನಿಗೂಡಿಸಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಸಿದ್ದರಾಮಯ್ಯ ಅವರು ಎಲ್ಲರ ಹೃದಯದಲ್ಲಿ ಇದ್ದಾರೆ ಎಂದರು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪರಿಹಾರ ರೀತಿ ಶಮೀರ್ ಶಹಾಪುರ್ ಗೂ ಪರಿಹಾರ ನೀಡಿ: ಸಲೀಮ್ ಅಹ್ಮದ್

ಮೇಕೆದಾಟು ಪಾದಯಾತ್ರೆಯಲ್ಲಿ ಕ್ರೆಡಿಟ್ ಪಡೆಯಲು ಡಿಕೆಶಿ (DK Shivakumar) ಕಸರತ್ತು ನಡೆಸುತ್ತಿದ್ದಾರೆ ಎಂದು ಕಂಡುಬಂದಿತ್ತು. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುನಿಸಿಕೊಂಡು ಏಕಾಂಗಿಯಾಗಿ ಹೆಜ್ಜೆ ಹಾಕಿದರು. ಇದಲ್ಲದೆ ಬೆಂಗಳೂರಿನಲ್ಲಿ ಸೇರಿದಂತೆ ಹಲವು ಬಾಗದಲ್ಲಿ ಹೂವಿನ ಹಾರ ಹಾಕುವಲ್ಲಿ ಕೂಡ ತಾರತಮ್ಯ ಆಗಿತ್ತು. ಇದು ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇನ್ನು ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಕೊನೆಯಲ್ಲಿ ಭಾಷಣ ಅವಕಾಶ ನೀಡಲಾಯಿತು. ಜೊತೆಗೆ ಹಲವಾರು ಕಡೆ ವಿಪಕ್ಷ ನಾಯಕ ಫೋಟೋಗಳನ್ನ ಹಾಕಿರಲಿಲ್ಲ. ಈ ಎಲ್ಲಾ ವಿಚಾರಕ್ಕೆ ಸಿದ್ದರಾಮಯ್ಯಗೆ ಪ್ರಶ್ನಿಸಿದ ಸಚಿವ ಆರ್.ಅಶೋಕ್ ಗೆ (R.Ashok) ಸಿದ್ದರಾಮಯ್ಯ ಉತ್ತರಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News