ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ

ಮಾರ್ಚ್ 10 ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪಕ್ಷದ ನೂತನ ರಾಜ್ಯ ಸಮಿತಿಯನ್ನು ರಚಿಸಿದ್ದಾರೆ.

Written by - Zee Kannada News Desk | Last Updated : Mar 8, 2022, 05:04 PM IST
  • ಮಮತಾ ಅವರ ವಿಸ್ತೃತ ರಾಜ್ಯ ಸಮಿತಿ ಸಭೆಯಲ್ಲಿ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಕೂಡ ಉಪಸ್ಥಿತರಿದ್ದರು.
ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ  title=

ಕೋಲ್ಕತ್ತಾ: ಮಾರ್ಚ್ 10 ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅವರು ಪಕ್ಷದ ನೂತನ ರಾಜ್ಯ ಸಮಿತಿಯನ್ನು ರಚಿಸಿದ್ದಾರೆ.

ಇದೇ ವೇಳೆ ರಾಜ್ಯ ಸಮಿತಿ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೀದಿ (Mamata Banerjee) 'ನಾವು ಸಕ್ರಿಯರಾಗಿರಬೇಕು....ಬಿಜೆಪಿಯನ್ನು ತೊಡೆದುಹಾಕಲು ನಾವು 2024 ರ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಬೇಕಾಗಿದೆ' ಎಂದು ಹೇಳಿದರು. ಮಮತಾ ಅವರ ವಿಸ್ತೃತ ರಾಜ್ಯ ಸಮಿತಿ ಸಭೆಯಲ್ಲಿ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಕೂಡ ಉಪಸ್ಥಿತರಿದ್ದರು.

ಏತನ್ಮಧ್ಯೆ, ಬಜೆಟ್ ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಪಶ್ಚಿಮ ಬಂಗಾಳ ವಿಧಾನಸಭೆಯೊಳಗೆ ವಿರೋಧ ಪಕ್ಷಗಳು ರಾಜ್ಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ನಾಗರಿಕ ಚುನಾವಣೆಯಲ್ಲಿ ಹಿಂಸಾಚಾರದ ಬಗ್ಗೆ ಪ್ರತಿಭಟಿಸಿದಾಗ ಗದ್ದಲ ಉಂಟಾಯಿತು. ವಿಧಾನಸಭೆ ಅಧಿವೇಶನದಲ್ಲಿ ಗದ್ದಲದ ನಂತರ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಲು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಜೊತೆಗೆ ರಾಜಭವನದ ಕಡೆಗೆ ತೆರಳಿದರು.

ಇದನ್ನೂ ಓದಿ: ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ

ಉದ್ಘಾಟನಾ ಭಾಷಣ ಮಾಡಲು ವಿಧಾನಸಭೆಗೆ ಆಗಮಿಸಿದ ಧಂಖರ್, ನಾಗರಿಕ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದವರೆಂದು ಆರೋಪಿಸಲಾದ ಪೋಸ್ಟರ್‌ಗಳನ್ನು ಹಿಡಿದು ಬಿಜೆಪಿ ಶಾಸಕರು ಪ್ರತಿಭಟನೆ ಮುಂದಾದ ಹಿನ್ನಲೆಯಲ್ಲಿ ಆಗ ಅವರಿಗೆ ಭಾಷಣ ಮಾಡಲು ಸಾಧ್ಯವಾಗಲಿಲ್ಲ, ಒಂದೆಡೆ ಗದ್ದಲ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ತಮ್ಮ ಭಾಷಣವನ್ನು ಮುಂದುವರೆಸುವಂತೆ ರಾಜ್ಯಪಾಲರಿಗೆ ಕೋರಿದರು.ಆದರೆ ರಾಜ್ಯಪಾಲರು ಅವರ ಭಾಷಣವನ್ನು ಓದದೆ ಸದನದಿಂದ ಹೊರಹೋಗಲು ಪ್ರಯತ್ನಿಸಿದಾಗ, ಟಿಎಂಸಿ (TMC) ಶಾಸಕರು ಅವರ ಆಸನದ ಎದುರು ಜಮಾಯಿಸಿ ಸದನದಿಂದ ಹೊರಬರದಂತೆ ತಡೆದರು.

ಇದನ್ನೂ ಓದಿ: "ನಾವು ಒತ್ತಡ ಹಾಕಿದ್ದಕ್ಕೆ ನೀವು ನೇತಾಜಿ ಪ್ರತಿಮೆ ತಯಾರಿಸುತ್ತಿದ್ದೀರಿ"

ಮಮತಾ ಬ್ಯಾನರ್ಜಿ ಅವರು ಕೋಲಾಹಲವನ್ನು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಯೋಜಿತ ಪ್ರಯತ್ನ ಎಂದು ಹೇಳಿದರು. ಚುನಾವಣೆಯಲ್ಲಿ ಗೆಲ್ಲಲು ವಿಫಲವಾದ ಕಾರಣ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಅವರು ಆರೋಪಿದರು. "ಬಿಜೆಪಿ 'ದಂಗಾಬಾಜ್ '(ಗಲಭೆಕೋರ) ಮತ್ತು ಭ್ರಷ್ಟ ಪಕ್ಷವಾಗಿದೆ... ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಾರೆ... ನಿನ್ನೆ ವಿಧಾನಸೌಧದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ ಟಿಎಂಸಿಯ ಮಹಿಳಾ ಶಾಸಕರಿಗೆ ಧನ್ಯವಾದಗಳು" ಎಂದು ಮಮತಾ ಬ್ಯಾನರ್ಜೀ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News