SBI Offer: ಎಸ್‌ಬಿಐ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ.ಗಳ ಲಾಭ, ಕೇವಲ ಈ ಕೆಲಸ ಮಾಡಿ

SBI Insurance Cover: ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿಯಿದೆ. ಜನ್ ಧನ್ ಖಾತೆದಾರರು 2 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನೂ ಪಡೆಯುತ್ತಾರೆ. ಇದರ ಲಾಭ ಕೋಟ್ಯಂತರ ದುರ್ಬಲ ವರ್ಗದ ಜನರನ್ನು ತಲುಪುತ್ತದೆ.

Written by - Yashaswini V | Last Updated : Mar 9, 2022, 10:07 AM IST
  • ಎಸ್‌ಬಿಐ ಜನ್ ಧನ್ ಖಾತೆದಾರರು ಉಚಿತ ವಿಮಾ ರಕ್ಷಣೆ
  • 2 ಲಕ್ಷದ ಉಚಿತ ಆಕಸ್ಮಿಕ ವಿಮಾ ಕವರ್
  • ರುಪೇ ಡೆಬಿಟ್ ಕಾರ್ಡ್ ಬಳಸುವವರಿಗೆ ಪ್ರಯೋಜನಗಳು
SBI Offer: ಎಸ್‌ಬಿಐ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ.ಗಳ ಲಾಭ, ಕೇವಲ ಈ ಕೆಲಸ ಮಾಡಿ  title=
State Bank of India Insurance

SBI Insurance Cover: ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿಗಳ ಲಾಭವನ್ನು ಉಚಿತವಾಗಿ ನೀಡುತ್ತಿದೆ. ನೀವೂ ಎಸ್‌ಬಿಐ (SBI) ಗ್ರಾಹಕರಾಗಿದ್ದರೆ ಖಂಡಿತಾ ಈ ಸುದ್ದಿ ಓದಿ. ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 2 ಲಕ್ಷದವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ಅನ್ನು ನೀಡುತ್ತಿದೆ. ಇದರ ಲಾಭವನ್ನು ಹೇಗೆ ಪಡೆಯಬಹುದು ಎಂದು ತಿಳಿಯೋಣ. 

ಈ ರೀತಿ ನಿಮಗೆ 2 ಲಕ್ಷದ ವಿಮಾ ಸೌಲಭ್ಯ ಸಿಗಲಿದೆ:
ಗ್ರಾಹಕರಿಗೆ ಅವರ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ ಅನುಗುಣವಾಗಿ ವಿಮೆಯ ಮೊತ್ತವನ್ನು ಎಸ್‌ಬಿಐ ನಿರ್ಧರಿಸುತ್ತದೆ. ಆಗಸ್ಟ್ 28, 2018 ರವರೆಗೆ  ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಯನ್ನು ತೆರೆದಿರುವ ಗ್ರಾಹಕರು ಅವರಿಗೆ ನೀಡಲಾದ RuPay PMJDY ಕಾರ್ಡ್‌ನಲ್ಲಿ ರೂ. 1 ಲಕ್ಷದವರೆಗೆ ವಿಮಾ ಸೌಲಭ್ಯವನ್ನು ಪಡೆಯುತ್ತಾರೆ. ಆಗಸ್ಟ್ 28, 2018 ರ ನಂತರ ನೀಡಲಾದ ರುಪೇ ಕಾರ್ಡ್‌ಗಳಲ್ಲಿ, ರೂ 2 ಲಕ್ಷದವರೆಗಿನ ಆಕ್ಸಿಡೆಂಟಲ್ ಕವರ್ ಪ್ರಯೋಜನವು ಲಭ್ಯವಿರುತ್ತದೆ.

ಈ ಜನರು ಪ್ರಯೋಜನ ಪಡೆಯುತ್ತಾರೆ: 
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು (Prandhan Mantri Jan-Dhan Yojana) ದೇಶದ ಬಡ ಜನರೂ ಕೂಡ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆಯನ್ನು ತೆರೆಯಲು ಅನುಕೂಲ ಕಲ್ಪಿಸುವ ಯೋಜನೆಯಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಲ್ಲಿ, ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಅಥವಾ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಜನ್ ಧನ್ ಖಾತೆಯನ್ನು ತೆರೆಯಬಹುದು. ಇಷ್ಟೇ ಅಲ್ಲ, ಯಾರಾದರೂ ತಮ್ಮ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ್ ಧನ್ ಆಗಿ ಪರಿವರ್ತಿಸಬಹುದು. ಇದರಲ್ಲಿ, ರೂಪೇ ಡೆಬಿಟ್ ಕಾರ್ಡ್ ಸೌಲಭ್ಯವನ್ನೂ ಸಹ ಬ್ಯಾಂಕ್ ನೀಡುತ್ತದೆ. 

ಇದನ್ನೂ ಓದಿ- 7th Pay Commission:DA Arrear ಬಗ್ಗೆ ಬಂದಿದೆ ಹೊಸ ಅಪ್ಡೇಟ್ , ಸರ್ಕಾರಿ ನೌಕರರ ಖಾತೆಗೆ ಬರಲಿದೆ 2 ಲಕ್ಷ ರೂಪಾಯಿ

ಈ ಯೋಜನೆಯ ಲಾಭ ಯಾರಿಗೆ ಸಿಗಲಿದೆ ?
ಅಪಘಾತದ ದಿನಾಂಕದಿಂದ 90 ದಿನಗಳ ಒಳಗಾಗಿ ವಿಮೆದಾರರು ಯಾವುದೇ ಚಾನಲ್‌ನಲ್ಲಿ ಯಾವುದೇ ಯಶಸ್ವಿ ಹಣಕಾಸು ಅಥವಾ ಆರ್ಥಿಕೇತರ ವಹಿವಾಟು ನಡೆಸಿದ್ದಾಗ ಮಾತ್ರ ಜನ್ ಧನ್ ಖಾತೆದಾರರು (Jan-Dhan Account) ಅಪಘಾತ ಮರಣ ವಿಮೆಯ ಲಾಭವನ್ನು ಪಡೆಯಬಹುದಾಗಿದೆ. ಅಂತಹ ಸಂದರ್ಭದಲ್ಲಿ ಮಾತ್ರ ಮೊತ್ತವನ್ನು ಪಾವತಿಸಲಾಗುತ್ತದೆ.

ಈ ಯೋಜನೆಯ ಲಾಭ ಪಡೆಯುವುದು ಹೇಗೆ?
ಕ್ಲೈಮ್ ಪಡೆಯಲು, ನೀವು ಮೊದಲು ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇದರೊಂದಿಗೆ ಮೂಲ ಮರಣ ಪ್ರಮಾಣ ಪತ್ರ ಅಥವಾ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು. ಎಫ್‌ಐಆರ್‌ನ ಮೂಲ ಅಥವಾ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿಸಿ. ಇದರೊಂದಿಗೆ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್‌ಎಸ್‌ಎಲ್ ವರದಿಯೂ ಇರಬೇಕು. ಆಧಾರ್ ಕಾರ್ಡ್ ನಕಲು, ಕಾರ್ಡುದಾರರ ಬಳಿ ರುಪೇ ಕಾರ್ಡ್ ಹೊಂದಿರುವ ಅಫಿಡವಿಟ್ ಅನ್ನು ಬ್ಯಾಂಕ್ ಸ್ಟಾಂಪ್ ಪೇಪರ್‌ನಲ್ಲಿ ನೀಡಬೇಕು. ಎಲ್ಲಾ ದಾಖಲೆಗಳನ್ನು 90 ದಿನಗಳಲ್ಲಿ ಸಲ್ಲಿಸಬೇಕು. ಪಾಸ್‌ಬುಕ್‌ನ ಪ್ರತಿಯೊಂದಿಗೆ ನಾಮಿನಿಯ ಹೆಸರು ಮತ್ತು ಬ್ಯಾಂಕ್ ವಿವರಗಳನ್ನು ಸಹ ಸಲ್ಲಿಸಬೇಕು.

ಇದನ್ನೂ ಓದಿ- ಇಂಟರ್ನೆಟ್, ಸ್ಮಾರ್ಟ್‌ಫೋನ್ ಇಲ್ಲದೆ UPI ಪಾವತಿ ಮಾಡುವುದು ಹೇಗೆ?

ಅಗತ್ಯ ದಾಖಲೆಗಳು:
1. ವಿಮಾ ಹಕ್ಕು ನಮೂನೆ.
2. ಮರಣ ಪ್ರಮಾಣಪತ್ರದ ಪ್ರತಿ.
3. ಕಾರ್ಡುದಾರರ ಮತ್ತು ನಾಮಿನಿಯ ಆಧಾರ್ ಪ್ರತಿ.
4. ಇತರ ಕಾರಣಗಳಿಂದ ಸಾವು ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ರಾಸಾಯನಿಕ ವಿಶ್ಲೇಷಣೆ ಅಥವಾ ಎಫ್‌ಎಸ್‌ಎಲ್ ವರದಿಯೊಂದಿಗೆ ಸಲ್ಲಿಸಬೇಕು.
5. ಅಪಘಾತದ ವಿವರಗಳನ್ನು ನೀಡುವ ಎಫ್‌ಐಆರ್ ಅಥವಾ ಪೊಲೀಸ್ ವರದಿಯ ಮೂಲ ಅಥವಾ ಪ್ರಮಾಣೀಕೃತ ಪ್ರತಿ.
6. ಕಾರ್ಡ್ ನೀಡುವ ಬ್ಯಾಂಕ್ ಪರವಾಗಿ ಅಧಿಕೃತ ಸಹಿ ಮತ್ತು ಬ್ಯಾಂಕ್ ಸ್ಟಾಂಪ್ ಮೂಲಕ ಸರಿಯಾಗಿ ಸಹಿ ಮಾಡಿದ ಘೋಷಣೆಯ ನಮೂನೆ.
7. ಇದರಲ್ಲಿ ಬ್ಯಾಂಕ್ ಅಧಿಕಾರಿಯ ಹೆಸರು ಮತ್ತು ಇಮೇಲ್ ಐಡಿಯೊಂದಿಗೆ ಸಂಪರ್ಕ ವಿವರಗಳನ್ನು ನೀಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News