Smartphone-Internet ಇಲ್ಲದೆಯೇ UPI Payment ಮಾಡಿ, ಜಬರ್ದಸ್ತ್ ಸೇವೆ ಆರಂಭಿಸಿದ RBI

Feature Phone Users Now Make UPI Payment : RBI ಇಂದು ಫೀಚರ್ ಫೋನ್ ಬಳಕೆದಾರರಿಗೆ UPI ಆಧಾರಿತ ಪಾವತಿ ಉತ್ಪನ್ನವನ್ನು  (UPI Based Payment Product) ಪ್ರಾರಂಭಿಸುತ್ತದೆ. ಇದರಿಂದ ದೇಶದ 44 ಕೋಟಿ ಫೀಚರ್ ಫೋನ್ (Feature Phone Users) ಬಳಕೆದಾರರಿಗೆ ಅನುಕೂಲವಾಗಲಿದೆ.  

Written by - Nitin Tabib | Last Updated : Mar 8, 2022, 05:44 PM IST
  • ಫೀಚರ್ ಫೋನ್ ಬಳಕೆದಾರರಿಗೆ ಜಬರ್ದಸ್ತ್ ಸೇವೆ ಆರಂಭಿಸಿದ RBI,
  • UPI '123pay ಸೇವೆಯನ್ನು ಆರಂಭಿಸಿದ RBI ಗವರ್ನರ್ ಶಕ್ತಿಕಾಂತ್ ದಾಸ್

    ಜೊತೆಗೆ Digital Payment Helpline ಸೇವೆಗೂ ಕೂಡ ಅವರು ಚಾಲನೆ ನೀಡಿದ್ದಾರೆ.
Smartphone-Internet ಇಲ್ಲದೆಯೇ UPI Payment ಮಾಡಿ, ಜಬರ್ದಸ್ತ್ ಸೇವೆ ಆರಂಭಿಸಿದ RBI title=
Feature Phone Users Now Make UPI Payment

ನವದೆಹಲಿ: Feature Phone Users Now Make UPI Payment  - ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das) ಅವರು ಮಂಗಳವಾರ ಹೊಸ ಸೇವೆಯೊಂದನ್ನು ಪ್ರಾರಂಭಿಸಿದ್ದು, ಇದು 400 ಮಿಲಿಯನ್ ಫೀಚರ್ ಫೋನ್ ಅಥವಾ ಸಾಮಾನ್ಯ ಮೊಬೈಲ್ ಫೋನ್ ಬಳಕೆದಾರರಿಗೆ ಸುರಕ್ಷಿತ ರೀತಿಯಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡಲಿದೆ. UPI '123pay' ಎಂಬ ಈ ಸೇವೆಯ ಮೂಲಕ ಇಂಟರ್ನೆಟ್ ಸಂಪರ್ಕವನ್ನು ಹೊಂದಿರದ ಜನರು ಡಿಜಿಟಲ್ ಪಾವತಿಗಳನ್ನು ಮಾಡಬಹುದು ಮತ್ತು ಈ ಸೇವೆಯು ಸಾಮಾನ್ಯ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಇದುವರೆಗೆ ಯುಪಿಐ ಸೇವೆಗಳು ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು, ಇದರಿಂದಾಗಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರು ಅವುಗಳನ್ನು ಬಳಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚು ಎಂದು ಅವರು ಉಲ್ಲೇಖಿಸಿದ್ದಾರೆ. 2021-22ರ ಆರ್ಥಿಕ ವರ್ಷದಲ್ಲಿ ಇದುವರೆಗೆ ಯುಪಿಐ ವಹಿವಾಟು 76 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ಇದು 41 ಲಕ್ಷ ಕೋಟಿ ರೂ.ಗಳಷ್ಟಿತ್ತು.  ಒಟ್ಟಾರೆ ವಹಿವಾಟಿನ ಸಂಖ್ಯೆ 100 ಲಕ್ಷ ಕೋಟಿ ತಲುಪುವ ದಿನ ದೂರವಿಲ್ಲ ಎಂದು ಅವರು ಹೇಳಿದ್ದಾರೆ. 

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ 400 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು ಸಾಮಾನ್ಯ ಫೀಚರ್ ಫೋನ್‌ಗಳನ್ನು (Feature Phones) ಹೊಂದಿದ್ದಾರೆ. ಪ್ರಸ್ತುತ, USSD ಆಧಾರಿತ ಸೇವೆಗಳ ಮೂಲಕ UPI ಸೇವೆಗಳು ಈ ಬಳಕೆದಾರರಿಗೆ ಲಭ್ಯವಿವೆ, ಆದರೆ ಇದು ತುಂಬಾ ತೊಡಕಾದ ವ್ಯವಸ್ಥೆಯಾಗಿತ್ತು ಮತ್ತು ಎಲ್ಲಾ ಮೊಬೈಲ್ ಆಪರೇಟರ್ಗಳು ಇಂತಹ ಸೇವೆಗಳನ್ನು ಅನುಮತಿಸುತ್ತಿರಲಿಲ್ಲ ಎಂದು ಡೆಪ್ಯುಟಿ ಗವರ್ನರ್ ಟಿ ರವಿಶಂಕರ್ ಹೇಳಿದ್ದಾರೆ.

ಇದನ್ನ ಓದಿ-Good News: ಅಗ್ಗದ ದರದಲ್ಲಿ ನಾಳೆಯಿಂದ ಚಿನ್ನ ಖರೀದಿಸಲು ಸರ್ಕಾರ ನೀಡುತ್ತದೆ ಈ ಸುವರ್ಣಾವಕಾಶ, ಬೆಲೆ ಇಲ್ಲಿ ತಿಳಿದುಕೊಳ್ಳಿ

ಫೀಚರ್ ಫೋನ್ ಬಳಕೆದಾರರು ಈಗ ನಾಲ್ಕು ತಾಂತ್ರಿಕ ಆಯ್ಕೆಗಳ ಆಧಾರದ ಮೇಲೆ ವ್ಯಾಪಕ ಶ್ರೇಣಿಯ ವಹಿವಾಟುಗಳನ್ನು ನಡೆಸಬಹುದು ಎಂದು RBI  ಹೇಳಿದೆ. ಇವುಗಳಲ್ಲಿ 1) ಕರೆ ಮಾಡುವ IVR (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಸಂಖ್ಯೆಗಳು, 2) ಫೀಚರ್ ಫೋನ್‌ಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಣೆ ವಿಧಾನ 3) ಮಿಸ್ಡ್ ಕಾಲ್ ಆಧಾರಿತ ವಿಧಾನ ಮತ್ತು 4) ಸಾಮೀಪ್ಯ ಧ್ವನಿ ಆಧಾರಿತ ಪಾವತಿ ವಿಧಾನಗಳು ಶಾಮೀಲಾಗಿವೆ.

ಇದನ್ನೂ ಓದಿ-ಇ-ರೂಪಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪ

ಈ ಸೇವೆಯ ಮೂಲಕ ಬಳಕೆದಾರರು ಸ್ನೇಹಿತರು ಮತ್ತು ಕುಟುಂಬಕ್ಕೆ ಹಣವನ್ನು ಕಳುಹಿಸಬಹುದು, ವಿವಿಧ ಯುಟಿಲಿಟಿ ಬಿಲ್‌ಗಳನ್ನು (Utility Bills) ಪಾವತಿಸಬಹುದು ಮತ್ತು ವಾಹನಗಳ ಫಾಸ್ಟ್ ಟ್ಯಾಗ್‌ಗಳನ್ನು ರೀಚಾರ್ಜ್ (Fast Tag Recharge) ಮಾಡುವ ಮತ್ತು ಮೊಬೈಲ್ ಬಿಲ್‌ಗಳನ್ನು ಪಾವತಿಸುವ (Mobile Bill Payment) ಸೌಲಭ್ಯವನ್ನು ಸಹ ಪಡೆಯಲಿದ್ದಾರೆ. ದಾಸ್ ಮಂಗಳವಾರ ಡಿಜಿಟಲ್ ಪಾವತಿಗಾಗಿ ಸಹಾಯವಾಣಿಗೂ (Digital Payment Helpline) ಕೂಡ ಚಾಲನೆ ನೀಡಿದ್ದಾರೆ, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಿದ್ಧಪಡಿಸಿದೆ.

ಇದನ್ನೂ ಓದಿ-NBFC ಗಳೂ ಕೂಡ ಇನ್ಮುಂದೆ ಗ್ರಾಹಕರಿಗೆ Credit Card ನೀಡಬಹುದು, ಅನುಮತಿ ನೀಡಲು RBI ಚಿಂತನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News