ಬೆಂಗಳೂರು: ಯಾರೋ ಮಾಡಿದ್ದಕ್ಕೆ ನೀವು ಸರ್ಟಿಫಿಕೇಟ್ ತಗೋತೀರಾ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭೋಜನ ವಿರಾಮ ನಂತರ ಬಜೆಟ್ ಚರ್ಚೆಯನ್ನು ಮುಂದುವರೆಸಿದ ಅವರು ಬೇರೆಯವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾವು ಮಾಡಿದ್ದೇವೆಂದು ಏಕೆ ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ನಾವು 27 ಅಣೆಕಟ್ಟು ಕಟ್ಟಿದ್ದೀವಿ ಅಂತಾ ಕಾಂಗ್ರೆಸ್ ನಾಯಕರು(Congress Leaders) ಹೇಳುತ್ತಾರೆ. ಎಲ್ಲಿ ಕಟ್ಟೀದರಪ್ಪ..? ಯಾರೋ ಮಾಡಿದ್ದಕ್ಕೆ ನೀವು ಸರ್ಟಿಫಿಕೇಟ್ ತಗೋತೀರಾ? ಅಂತಾ ಎಚ್ ಡಿಕೆ ‘ಕೈ’ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ನೀರಾವರಿ ವಿಚಾರವಾಗಿ ಎಚ್‌ಡಿಕೆ ಮಾತು
ಕೃಷ್ಣಾ ನದಿಯು ಆಲಮಟ್ಟಿ ಜಲಾಶಯ(Karnataka Irrigation Project) ಪೂರ್ಣಗೊಳಿಸಲು ಜನತಾ ದಳ ಬೇಕಿತ್ತು. ನೀವು ಏನ್ ಮಾಡಿದ್ರಿ, ಬರೀ ನಿದ್ರೆ ಮಾಡ್ಕೊಂಡು ಇದ್ರಿ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 200 ಕೋಟಿ, ಕಾವೇರಿಗೆ 100 ಕೋಟಿ ರೂ. ಬೇಕೆಂದು ಎಚ್.ಡಿ.ದೇವೇಗೌಡ ಕೇಳಿದ್ರು. ಆದರೆ ಮರದಲ್ಲಿ ದುಡ್ಡು ಬೆಳೆಯಲ್ಲ ಅಂತಾ ಹೇಳಿಬಿಟ್ರು. ಅದಕ್ಕೆ ದೇವೇಗೌಡರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಮಾತೆತ್ತಿದ್ರೆ ಸಾಕು 27 ಅಣೆಕಟ್ಟು ನಾವೇ ಕಟ್ಟಿದ್ದು ಅಂತಾ ಕಾಂಗ್ರಸ್ಸಿಗರು ಹೇಳ್ತಾರೆ. ಒಂದು ತಿಂಗಳಿನಿಂದ ಹೇಳಿಕೊಂಡು ಓಡಾಡುತ್ತಿದ್ದಾರೆ. ಹಾಗಾದ್ರೆ ಆಲಮಟ್ಟಿ ಅಣಕಟ್ಟು ಪೂರ್ಣಗೊಳಿಸಿದ್ದು ಯಾರು? ಎಂದು ಪ್ರಶ್ನಿಸಿ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟಕ್ಕೆ ಅಯೋಧ್ಯದಿಂದ ವಿಮಾನಯಾನ, ರೈಲು ಸೇವೆ: ಸಚಿವೆ ಶಶಿಕಲಾ ಜೊಲ್ಲೆ
ಸಿಬಿಐ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. Who owns CBI? ಎಂದು ಪ್ರಶ್ನಿಸಿದ ಅವರು ನಾನೂ ಸಿಬಿಐ(CBI)ಯನ್ನು ಹತ್ತಿರದಿಂದ ನೋಡಿದ್ದೇನೆ ಅಂತಾ ಹೇಳಿ ‘The Naked Truth’ ಕೃತಿ ಉಲ್ಲೇಖಿಸಿದರು. ಹಾಸನ- ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 26 ಕೋಟಿ ರೂ. ಹಣ ದುರ್ಬಳಕೆ ಮಾಡಲಾಗಿದೆ ಅಂತಾ ಇದೇ ವೇಳೆ ಗುಡುಗಿದರು.
ನನ್ನ ವಾಸ್ತವ್ಯ ಏನಿದ್ರು ನನ್ನ ಜಮೀನಿನಲ್ಲಿ, ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಅಲ್ಲ. ಮುಂದೆ ಹೊಟೇಲ್ ಗೆ ಹೋಗುವುದಿಲ್ಲ, ಏನಾದರೂ ಕೆಲಸವಿದ್ದರೆ ಬೆಂಗಳೂರಿಗೆ ಬರುತ್ತೇನೆ. ಕರ್ಮಭೂಮಿ ವಾಸ್ತವ್ಯ ಏನಿದ್ರು ಕೇತಗಾನಹಳ್ಳಿಯಲ್ಲಿ ಅಂತಾ ಎಚ್‌ಡಿಕೆ ಹೇಳಿದರು.
ಇದನ್ನೂ ಓದಿ: ಮೃತ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ಮೃತದೇಹ ತರಿಸಲು ಪ್ರಧಾನಿ ಮೋದಿಗೆ ಪತ್ರ
ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಮಂಡಿಸಿದ ಚೊಚ್ಚಲ ಬಜೆಟ್ ಕುರಿತ ಚರ್ಚೆಯಲ್ಲಿ ಕುಮಾರಸ್ವಾಮಿ ಬಿಜೆಪಿ ಸರ್ಕಾರವನ್ನು ಪ್ರಶ್ನಿಸುವ ಬದಲು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.ಇದರಿಂದ ಜೆಡಿಎಸ್(JDS) ಪಕ್ಷವು ಬಿಜೆಪಿಯ ‘ಬಿ’ ಟೀಂ ಅನ್ನೋ ವಾದಕ್ಕೆ ಮತ್ತಷ್ಟು ಪೃಷ್ಠಿ ನೀಡಿದಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.