ನವದೆಹಲಿ: WHO On New Covid-19 Variant - ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯಿಂದ (World Health Organization) ಆತಂಕದ ಸುದ್ದಿ ಪ್ರಕಟವಾಗಿದೆ. ಇತ್ತೀಚಿನ ಅಧ್ಯಯನದಲ್ಲಿ, ಕರೋನವೈರಸ್ನ ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು (Omicron) ಒಂದಾಗಿ ಹೊಸ ವೈರಸ್ ಆಗಿ ಮಾರ್ಪಟ್ಟಿವೆ ಎಂದು ಹೇಳಿದ್ದು, ಇದಕ್ಕೆ ಪುರಾವೆಗಳು ಕೂಡ ದೊರೆತಿವೆ ಎಂದು ಅದು ಹೇಳಿದೆ. ಡೆಲ್ಟಾ ಮತ್ತು ಓಮಿಕ್ರಾನ್ ವೇಗವಾಗಿ ಹರಡುವುದರಿಂದ ಈ ಭಯವು ಮೊದಲಿನಿಂದಲೇ ವ್ಯಕ್ತವಾಗುತ್ತಿತ್ತು ಎಂದು WHO ಹೇಳಿದೆ.
ಜನವರಿ 2022 ರಿಂದ ಈ ವೈರಸ್ ಹರಡುತ್ತಿದೆ
ಡೆಲ್ಟಾ ಮತ್ತು ಓಮಿಕ್ರಾನ್ ನಿಂದ ತಯಾರಾದ ಹೊಸ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಅನೇಕ ಅಧ್ಯಯನಗಳು ನಡೆಯುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಜನವರಿ 2022 ರಿಂದ ಫ್ರಾನ್ಸ್ ನಿಂದ ಈ ವೈರಸ್ ಹರಡಲು ಆರಂಭಿಸಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಕೊರೊನಾ ವೈರಸ್ ನ ಹಲವು ರೂಪಾಂತರಿಗಳು ಮುನ್ನಲೆಗೆ ಬರಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನೂ ಓದಿ-China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ
WHO ವಿಜ್ಞಾನಿ ನೀಡಿದ ಮಾಹಿತಿ ಏನು?
ಓಮಿಕ್ರಾನ್ ಮತ್ತು ಡೆಲ್ಟಾದ ಮರುಸಂಯೋಜಕ ವೈರಸ್ ಹರಡುತ್ತಿದೆ ಎಂದು WHO ಹೇಳುತ್ತಿದೆ. WHO ವಿಜ್ಞಾನಿ ಮಾರಿಯಾ ವ್ಯಾನ್ ಕಾರ್ಖೋವ್ ಪ್ರಕಾರ, SARSCov2 ನ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಿಗಳು ಒಂದಾಗಿ ಹರಡುವ ಸಾಧ್ಯತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಅದರ ಹರಡುವಿಕೆ ಕೂಡ ತುಂಬಾ ವೇಗವಾಗಿರಲಿದೆ. ನಾವು ಅದನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಮತ್ತು ಅದರ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ ಎಂದೂ ಕೂಡ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ-ಪಾಕಿಸ್ತಾನದತ್ತ ಸಿಡಿಯಿತಾ ಭಾರತದ ಕ್ಷಿಪಣಿ..! ವಾಸ್ತವ ಏನು ?
ಡೆಲ್ಟಾ-ಓಮಿಕ್ರಾನ್ನ ಮಿಶ್ರ ವೈರಸ್ ಕುರಿತು ದೊರೆತ ಬಲವಾದ ಪುರಾವೆ
ಈ ಕುರಿತಾದ ವೈರಾಲಜಿಸ್ಟ್ ಜೆರೆಮಿ ಕಾಮಿಲ್ ಅವರ ಟ್ವೀಟ್ ಅನ್ನು ಮಾರಿಯಾ ರಿಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನ ಪ್ರಕಾರ, ಡೆಲ್ಟಾ-ಓಮಿಕ್ರಾನ್ನ ಮಿಶ್ರ ವೈರಸ್ನ ಪಕ್ಕಾ ಪುರಾವೆಗಳು ಕಂಡುಬಂದಿವೆ. ಇದು ಜನವರಿ 2022 ರಿಂದ ಫ್ರಾನ್ಸ್ ನಿಂದ ಹರಡುತ್ತಿದೆ. ಇದರೊಂದಿಗೆ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ಅದೇ ಪ್ರೊಫೈಲ್ನ ವೈರಸ್ಗಳು ಕಂಡುಬಂದಿವೆ. ಆದಾಗ್ಯೂ, ವೈರಸ್ ಮಾರಣಾಂತಿಕವಾಗಿದೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆಗಳಿಲ್ಲ ಎಂದು WHO ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಇದನ್ನೂ ಓದಿ-Lost City: ಈಜಿಪ್ಟ್ ನಲ್ಲಿ 3000 ವರ್ಷಗಳಷ್ಟು ಹಳೆ ನಗರ ಪತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.