March 16 ರಿಂದ 12 ರಿಂದ 14 ವರ್ಷದ ಮಕ್ಕಳಿಗೆ Covid-19 ವ್ಯಾಕ್ಸೀನ್, ವೃದ್ಧರಿಗೆ Booster Dose

Vaccination For 12-14 Age Group - ಮಕ್ಕಳಿಗೆ ಮತ್ತು ವೃದ್ಧರಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡುವ ಮೂಲಕ ಮಹತ್ವದ ಮಾಹಿತಿ ನೀಡಿದ್ದಾರೆ.

Written by - Nitin Tabib | Last Updated : Mar 14, 2022, 04:56 PM IST
  • ಮಾರ್ಚ್ 16 ರಿಂದ 12 ರಿಂದ 14 ವರ್ಷ ಗುಂಪಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭ
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ
  • 60+ ವಯಸ್ಸಿನವರಿಗೆ ಬೂಸ್ತರ್ ಡೋಸ್ ನೀಡಲಾಗುವುದ
March 16  ರಿಂದ 12 ರಿಂದ 14 ವರ್ಷದ ಮಕ್ಕಳಿಗೆ Covid-19 ವ್ಯಾಕ್ಸೀನ್, ವೃದ್ಧರಿಗೆ Booster Dose title=
Vaccination For 12-14 Age Group (File Photo)

Covid-19 Vaccine For 12 To 14 Age Group - ಕೋವಿಡ್-19 ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇನ್ನೊಂದೆಡೆ ದೇಶದಲ್ಲಿ ಲಸಿಕಾ ಅಭಿಯಾನ ಕೂಡ ವೇಗವಾಗಿ ಸಾಗುತ್ತಿದ್ದು, ಲಸಿಕೆ (Covid-19 Vaccination) ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆಯೂ  ಕೂಡ ವೇಗವಾಗಿ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ  ಮತ್ತೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಮಾರ್ಚ್ 16 ರಿಂದ ದೇಶಾದ್ಯಂತ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ (Coronavirus Vaccination) ಕಾರ್ಯ ಆರಂಭವಾಗಲಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಇದೇ ವೇಳೆ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಈಗ ಬೂಸ್ಟರ್ ಡೋಸ್ (Booster Dose) ನೀಡಲಾಗುವುದು ಎಂದು ಹೇಳಿದ್ದಾರೆ. 

ಟ್ವೀಟ್ ಮಾಡುವ ಮೂಲಕ ಮಾಹಿತಿ
ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ತಮ್ಮ ಟ್ವೀಟ್ ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವರು, "ಮಕ್ಕಳು ಸುರಕ್ಷಿತವಾಗಿದ್ದರೆ, ದೇಶ ಸುರಕ್ಷಿತ! ಮಾರ್ಚ್ 16 ರಿಂದ 12 ರಿಂದ 13 ಮತ್ತು 13 ರಿಂದ 14 ವಯಸ್ಸಿನ ವರ್ಗದ ಮಕ್ಕಳಿಗೆ ಕೊವಿಡ್ ಲಸಿಕಾಕರಣ ಆರಂಭಗೊಳ್ಳುತ್ತಿದೆ ಎಂಬುದನ್ನು ತಿಳಿಸಲು ನನಗೆ ಸಂತಸವಾಗುತ್ತಿದೆ. ಜೊತೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಈಗ ಲಸಿಕೆಯ ಪ್ರಿಕಾಶನ್ ಡೋಸ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಮಕ್ಕಳ ಕುಟುಂಬಸ್ಥರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಲಸಿಕೆಯನ್ನು ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ" ಎಂದಿದ್ದಾರೆ.

ವೇಗದಿಂದ ಸಾಗುತ್ತಿರುವ ಲಸಿಕಾಕರಣ ಅಭಿಯಾನ
ಕಳೆದ ವರ್ಷ ಜನವರಿ 16 ರಿಂದ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭಗೊಂಡಿರುವುದು ಇಲ್ಲಿ ಗಮನಾರ್ಹ. ಭಾರತವು ಈ ವರ್ಷದ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು ಚುನಾವಣಾ ಕರ್ತವ್ಯದಲ್ಲಿರುವವರು ಸೇರಿದಂತೆ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಕೋವಿಡ್-19 (Covid-19) ವಿರೋಧಿ ಲಸಿಕೆಗಳ ಮುನ್ನೆಚ್ಚರಿಕೆಯ ಪ್ರಮಾಣವನ್ನು ನೀಡಲು ಪ್ರಾರಂಭಿಸಿದೆ. ಮಾಹಿತಿಯ ಪ್ರಕಾರ, ದೇಶದಲ್ಲಿ ಕೋವಿಡ್ -19 ಲಸಿಕಾಕರಣದ ಸಂಖ್ಯೆ 180.19 ಕೋಟಿ (1,80,19,45,779) ಮೀರಿದೆ.

 

ಇದನ್ನೂ ಓದಿ-Omicron ಹಾಗೂ Delta ಸೇರಿ ಹುಟ್ಟಿಕೊಂಡಿದೆ ಹೊಸ ವೈರಸ್, ಮೊದಲಿನಿಂದಲೇ ಭೀತಿ ಇತ್ತು ಎಂದ WHO

ಮಾಹಿತಿಯ ಪ್ರಕಾರ, 2,10,99,040 ಲಸಿಕೆಯ ಪ್ರಮಾಣಗಳನ್ನು ಹಾಕುವ ಮೂಲಕ ಈ ಸಾಧನೆಯನ್ನು ಸಾಧಿಸಲಾಗಿದೆ. ದೇಶಾದ್ಯಂತ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ ಮತ್ತು ಜನರು ಲಸಿಕೆ ಪಡೆಯುವ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ-Omicron ಇನ್ನೂ ಹೋಗಿಲ್ಲ! ಬ್ರಿಟನ್ ನಲ್ಲಿ ನಡೆಸಲಾದ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಕೋವಿಡ್-19 ಲಸಿಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು 21 ಜೂನ್ 2021 ರಿಂದ ಹೊಸ ಹಂತವನ್ನು ಪ್ರಾರಂಭಿಸಲಾಗಿದೆ. ಇದೇ ವೇಳೆ, ಓಮಿಕ್ರಾನ್ ಅಪಾಯದ ದೃಷ್ಟಿಯಿಂದ, 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕುವಿಕೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ-Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News