ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ

ನೀವು PNB ಗ್ರಾಹಕರಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯ ಎದುರಾದರೆ ಈಗ ನೀವು ಚಿಂತಿಸಬೇಕಾಗಿಲ್ಲ. PNB ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ನೀಡುತ್ತಿದೆ. PNBಯ Insta ಸಾಲದ ಲಾಭವನ್ನು ನೀವು ಹೇಗೆ ಪಡೆಯಬಹುದು ನೋಡೋಣ. 

Written by - Ranjitha R K | Last Updated : Mar 15, 2022, 10:00 AM IST
  • PNB ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಸೌಲಭ್ಯ
  • ಮೊಬೈಲ್ ಸಂಖ್ಯೆಯ ಮೂಲಕ ಸಾಲ ಪಡೆಯಬಹುದು
  • ಟ್ವೀಟ್ ಮೂಲಕ ಮಾಹಿತಿ ನೀಡಿರುವ ಬ್ಯಾಂಕ್
ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ ಗ್ರಾಹಕರಿಗೆ ಸಿಗಲಿದೆ 8 ಲಕ್ಷ ರೂಪಾಯಿಗಳ ಲಾಭ  title=
PNB ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಸೌಲಭ್ಯ (file photo)

ನವದೆಹಲಿ : PNB Instant Loan: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಿಗೆ ಸಿಹಿಸುದ್ದಿಯೊಂದಿದೆ. ಬ್ಯಾಂಕ್ (Bank)ತನ್ನ ಗ್ರಾಹಕರಿಗೆ ದೊಡ್ಡ ಮಟ್ಟದ ಲಾಭವನ್ನು ನೀಡುತ್ತಿದೆ. ನೀವು ಕೂಡ ಪಿಎನ್‌ಬಿ ಬ್ಯಾಂಕ್‌ನ (PNB Bank) ಗ್ರಾಹಕರಾಗಿದ್ದು, ತುರ್ತು ಹಣದ ಅಗತ್ಯವಿದ್ದರೆ, ಚಿಂತಿಸಬೇಕಾಗಿಲ್ಲ. ಬ್ಯಾಂಕ್ ನಿಮಗಾಗಿ ವಿಶೇಷ ಸೌಲಭ್ಯವನ್ನು ತಂದಿದೆ. ಈಗ ಬ್ಯಾಂಕ್ ತನ್ನ ಗ್ರಾಹಕರಿಗೆ ಸುಲಭವಾಗಿ 8 ಲಕ್ಷ ರೂಪಾಯಿ ಸೌಲಭ್ಯವನ್ನು ನೀಡುತ್ತಿದೆ. ನಿಮಗೂ ಹಣದ ಅಗತ್ಯವಿದ್ದರೆ, ಈ ವಿಶೇಷ ಸೌಲಭ್ಯದ ಅಡಿಯಲ್ಲಿ ಬ್ಯಾಂಕ್‌ನಿಂದ ಹಣವನ್ನು ಪಡೆಯಬಹುದು.  

ಮೊಬೈಲ್ ಸಂಖ್ಯೆಯಿಂದ ಸಾಲ ಪಡೆಯಬಹುದು :
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ತನ್ನ ಗ್ರಾಹಕರಿಗೆ Insta ಲೋನ್ ಮೂಲಕ  8 ಲಕ್ಷದವರೆಗೆ ಪ್ರಯೋಜನಗಳನ್ನು ನೀಡುತ್ತಿದೆ. ಈ ಸೌಲಭ್ಯದ ಅಡಿಯಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವುದಾದರೆ, ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ.. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು (Aadhaara Number)ನಮೂದಿಸಬೇಕು. ಇದರ ನಂತರ ಸುಲಭವಾಗಿ ಸಾಲವನ್ನು  ಪಡೆಯಬಹುದು. ಸಾಲ ಪಡೆಯುವ ಪ್ರಕ್ರಿಯೆಯನ್ನು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ವಿವರಿಸಿದೆ. 

ಇದನ್ನೂ ಓದಿ : SBI Latest Rule: ಎಟಿಎಂನಿಂದ ಹಣ ವಿತ್ ಡ್ರಾ ನಿಯಮಗಳಲ್ಲಿ ಬದಲಾವಣೆ

 ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪಿಎನ್‌ಬಿ  :
 'ಈಗ ಬ್ಯಾಂಕ್ ನಿಂದ ಸಾಲ (Bank loan) ಪಡೆಯುವುದು ಆಹಾರಕ್ಕೆ ಆರ್ಡರ್ ಮಾಡಿದಷ್ಟೇ ಸುಲಭ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National bank)ಟ್ವೀಟ್ ನಲ್ಲಿ ಹೇಳಿದೆ. ಕಡಿಮೆ ಬಡ್ಡಿ ದರಗಳೊಂದಿಗೆ ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ Insta ಲೋನ್‌ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ,  tinyurl.com/t3u6dcnd ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದರ ಲಾಭವನ್ನು ಯಾರು ಪಡೆಯಬಹುದು ?
1.PNB ಯ ಈ ಲಾಭವನ್ನು ಪಡೆಯಲು, ಗ್ರಾಹಕರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ PSU ಉದ್ಯೋಗಿಯಾಗಿರಬೇಕು.
2.ಈ ಸಾಲವನ್ನು ನಿಮಿಷಗಳಲ್ಲಿ ವಿತರಿಸಲಾಗುತ್ತದೆ.
3.ಈ ಸಾಲದ ಸೌಲಭ್ಯವು 24*7 ಲಭ್ಯವಿದೆ.
4.ಇದರ ಅಡಿಯಲ್ಲಿ, ಗ್ರಾಹಕರು 8 ಲಕ್ಷದವರೆಗೆ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ. 
5. ಇದರಲ್ಲಿ ಪ್ರೊಸೆಸಿಂಗ್ ಚಾರ್ಜ್ ಇರುವುದಿಲ್ಲ  

ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಕೇವಲ 5 ವರ್ಷದಲ್ಲಿ ₹14 ಲಕ್ಷ ಲಾಭ ಪಡೆಯಿರಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News