ಕಾಂಗ್ರೆಸ್ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿ: ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿ(Rahul Gandhi)ಯವರೇ ಈ ಶ್ರೇಯಾಂಕಗಳು ನಿಮ್ಮ ಕುಟುಂಬದ 48 ವರ್ಷಗಳ ಭ್ರಷ್ಟ ಆಡಳಿತದ ಫಲಿತಾಂಶವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Mar 20, 2022, 09:09 PM IST
  • ಶೀಘ್ರವೇ ಕೋಪ-ದ್ವೇಷದ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ ಎಂಬ ರಾಹುಲ್ ಹೇಳಿಕೆಗೆ ಬಿಜೆಪಿ ತಿರುಗೇಟು
  • ಕಾಂಗ್ರೆಸ್ ಪಕ್ಷದ ‘ಹಿರಿಯ’ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿಯಾಗಲಿದ್ದಾರೆ
  • ರಾಹುಲ್ ಗಾಂಧಿಯವರೇ ಈ ಶ್ರೇಯಾಂಕಗಳು ನಿಮ್ಮ ಕುಟುಂಬದ 48 ವರ್ಷಗಳ ಭ್ರಷ್ಟ ಆಡಳಿತದ ಫಲಿತಾಂಶ
ಕಾಂಗ್ರೆಸ್ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿ: ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ವ್ಯಂಗ್ಯ  title=
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ಶೀಘ್ರದಲ್ಲಿಯೇ ಕೋಪ-ದ್ವೇಷ(Hate and Anger)ದ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನಕ್ಕೇರಲಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಗೆ ಬಿಜೆಪಿ ತಿರುಗೇಟು ನೀಡಿದೆ. ‘ಕಾಂಗ್ರೆಸ್ ಪಕ್ಷದ ‘ಹಿರಿಯ’ ಯುವನಾಯಕ ಈಗ ಪೂರ್ಣಕಾಲಿಕ ನಿರುದ್ಯೋಗಿ’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.

‘ಅನೇಕ‌ ಹಿರಿಯ ನಾಯಕರು ಟ್ವೀಟ್ ಮಾಡುವುದರಿಂದ ಪಕ್ಷಕ್ಕೇನು ಲಾಭವಿಲ್ಲ ಎಂದು ರಾಹುಲ್ ಗಾಂಧಿ(Rahul Gandhi)ಗೆ ಪರೋಕ್ಷವಾಗಿ ತಿವಿದಿದ್ದಾರೆ. ಆದರೂ ರಾಹುಲ್‌ಗೆ ಬುದ್ಧಿ ಬಂದಿಲ್ಲ. ಕೋಪ ಮತ್ತು ದ್ವೇಷ(Hate and Anger)ದಲ್ಲಿ ಭಾರತ ಅಗ್ರಸ್ಥಾನ ಗಳಿಸಲಿದೆ ಎಂದು ಮಾತೃಭೂಮಿಯನ್ನೇ ಹೀಯಾಳಿಸಿದ್ದಾರೆ!’ ಎಂದು ಕುಟುಕಿದೆ.

ಇದನ್ನೂ ಓದಿ: Shamanur Shivashankarappa : 'ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ'

‘ರಾಹುಲ್ ಗಾಂಧಿ(Rahul Gandhi)ಯವರೇ ಈ ಶ್ರೇಯಾಂಕಗಳು ನಿಮ್ಮ ಕುಟುಂಬದ 48 ವರ್ಷಗಳ ಭ್ರಷ್ಟ ಆಡಳಿತದ ಫಲಿತಾಂಶವಾಗಿದೆ. ‘ಸರ್ಕಾರ ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ, ಉದ್ದೇಶಿತ ಫಲಾನುಭವಿಗೆ ತಲುಪುವುದು ಕೇವಲ 15 ಪೈಸೆ’ ಎಂಬ ನಿಮ್ಮ ತಂದೆ ರಾಜೀವ್ ಗಾಂಧಿ(Rajiv Gandhi)ಯವರ ಮಾತುಗಳನ್ನು ನೆನಪಿಸಿಕೊಳ್ಳಿ. ಜನರ ದ್ವೇಷ ಮತ್ತು ಕೋಪದ ಪರಿಣಾಮ ನಿಮ್ಮ ಪಕ್ಷ ಲೋಕಸಭೆಯಲ್ಲಿ ಕೇವಲ 53 ಸ್ಥಾನಗಳಿಗೆ ಇಳಿದಿದೆ’ ಎಂದು ಟೀಕಿಸಿದೆ.

‘ರಾಹುಲ್ ಗಾಂಧಿ(Rahul Gandhi) ಹೇಳಿದ ಕೋಪ ಮತ್ತು ದ್ವೇಷ(Hate and Anger) ವಿಷಯಗಳಿಗೆ ಅವರದೇ ಪಕ್ಷ ವಾರೀಸುದಾರರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮೇಲೆ ದ್ವೇಷ, ಹಿಂದೂ ಆಚರಣೆಗಳ ಮೇಲೆ ಕೋಪ, ಹಿಂದೂ ಸಂತರ ಮೇಲೆ ದ್ವೇಷ,  ಭಾರತದ ಮೇಲೆ ಕೋಪ ಮತ್ತು ಅಭಿವೃದ್ಧಿ ರಾಜಕಾರಣದ ಮೇಲೆ ದ್ವೇಷ. ಎಷ್ಟಾದರೂ ಇಟಲಿ ವಂಶಸ್ಥರಲ್ಲವೇ!?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜವಾದೀತು’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News