ಬೆಂಗಳೂರು: ನೀರಿನ ರಾಜಕಾರಣ ಮಾಡಿ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಗೆ ಬಿಜೆಪಿ ಟಾಂಗ್ ನೀಡಿದೆ. ಮೇಕೆದಾಟು ಯೋಜನೆ ವಿಚಾರವಾಗಿ ಮಂಗಳವಾರ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
‘ಮೇಕೆದಾಟು ಯೋಜನೆ(Mekedatu Project)ಯನ್ನು ಜಾರಿಗೊಳಿಸಲು ಬಿಡುವುದಿಲ್ಲವೆಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು?’ ಅಂತಾ ಪ್ರಶ್ನಿಸಿದೆ.
ಕುಡಿಯುವ ನೀರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದೆ.
ಡಿಕೆಶಿ ಅವರಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ?
ನೀರಿನ ರಾಜಕಾರಣ ಮಾಡಿ ಸಿಎಂ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ.#ಮೇಕೆದಾಟು
— BJP Karnataka (@BJP4Karnataka) March 22, 2022
‘ರಾಹುಲ್ ಗಾಂಧಿ(Rahul Gandhi)ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ(Mekedatu Padayatre) ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ?’ ಅಂತಾ ಟೀಕಿಸಿದೆ.
ಮಹದಾಯಿ ಆಗಲಿ ಮೇಕೆದಾಟು ಆಗಲಿ ಕಾಂಗ್ರೆಸ್ ನಾಯಕರದು ಸದಾ ಇಬ್ಬಗೆಯ ನಿಲುವು.
ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ.
ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಒಂದು ಸಾತ್ವಿಕ ಪ್ರತಿರೋಧ ತೋರುವ ಧೈರ್ಯವಾದರೂ @DKShivakumar ಅವರಿಗೆ ಇದೆಯೇ?#ಮೇಕೆದಾಟು
— BJP Karnataka (@BJP4Karnataka) March 22, 2022
ಇದನ್ನೂ ಓದಿ: Cyber Security Policy: ಸರಕಾರದಿಂದ ಸದ್ಯದಲ್ಲೇ ಸೈಬರ್ ಭದ್ರತಾ ನೀತಿ ಜಾರಿ: ಅಶ್ವತ್ಥನಾರಾಯಣ
‘ರಾಜಕೀಯ ಲಾಭಕ್ಕಾಗಿ ಡಿಕೆಶಿ(DK Shivakumar)ಯವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ #ಸುಳ್ಳಿನಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಿಲ್ಲ. ಮೂರನೇ ಬಾರಿ ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ನಿರೀಕ್ಷಿಸಬಹುದೇ? ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿಕೆಶಿಯವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ’ ಅಂತಾ ಬಿಜೆಪಿ ಕುಟುಕಿದೆ.
ಮೇಕೆದಾಟು ಹೋರಾಟದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ @DKShivakumar ಅವರ ಉದ್ದೇಶವಾಗಿತ್ತು.
ಆದರೆ ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ.
ಡಿಕೆಶಿ ಅವರೇ, ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ. #ಮೇಕೆದಾಟು
— BJP Karnataka (@BJP4Karnataka) March 22, 2022
‘ಕುಡಿಯುವ ನೀರಿಗಾಗಿ ರಾಜ್ಯ ಬಿಜೆಪಿ ಸರ್ಕಾರ(BJP Government) ಮಾಡುತ್ತಿರುವ ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಡಿಕೆಶಿ ಅವರಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ? ನೀರಿನ ರಾಜಕಾರಣ ಮಾಡಿ ಸಿಎಂ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ. ಮಹದಾಯಿ ಆಗಲಿ ಮೇಕೆದಾಟು ಆಗಲಿ ಕಾಂಗ್ರೆಸ್ ನಾಯಕರದು ಸದಾ ಇಬ್ಬಗೆಯ ನಿಲುವು. ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ. ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಒಂದು ಸಾತ್ವಿಕ ಪ್ರತಿರೋಧ ತೋರುವ ಧೈರ್ಯವಾದರೂ ಡಿಕೆಶಿಯವರಿಗೆ ಇದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: CLP Meeting : ಕಾಂಗ್ರೆಸ್ ಶಾಸಕಾಂಗ ಸಭೆಗೆ ಪಕ್ಷದ ಪ್ರಮುಖರೆ ಗೈರು!
‘ಮೇಕೆದಾಟು ಹೋರಾಟ(Mekedatu Project)ದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ ಡಿಕೆಶಿಯವರ ಉದ್ದೇಶವಾಗಿತ್ತು. ಆದರೆ ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ. ಡಿಕೆಶಿಯವರೇ ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ’ ಅಂತಾ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.