Supreme Court : ಕೊರೋನಾದಿಂದ ಮೃತ ಪಟ್ಟವರಿಗೆ ಪರಿಹಾರದ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಕೆಲ ಜನ ಹಣ(Money)ದ ಆಸೆಗೆ ಸುಳ್ಳು ಮಾಹಿತಿ ನೀಡಲು ಪ್ರಾರಂಭಿಸಿದ್ದಾರೆ. ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.

Written by - Channabasava A Kashinakunti | Last Updated : Mar 24, 2022, 12:57 PM IST
  • ಕೊರೋನಾ ಪರಿಹಾರದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
  • ಸುಳ್ಳು ಆರೋಪಗಳಿಗಾಗಿ ಕೇಂದ್ರ ಸರ್ಕಾರ ತನಿಖೆಗೆ ಅವಕಾಶ
  • 4 ರಾಜ್ಯಗಳಲ್ಲಿ ಸಾವುಗಳಿಗಿಂತ ಹೆಚ್ಚಿನ ಪರಿಹಾರ
Supreme Court : ಕೊರೋನಾದಿಂದ ಮೃತ ಪಟ್ಟವರಿಗೆ ಪರಿಹಾರದ ಕುರಿತು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ title=

ನವದೆಹಲಿ : ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ಪರಿಹಾರವನ್ನು ನೀಡುವುದಾಗಿ ಹೇಳಲಾಗಿದೆ. ಈ ಮೂಲಕ ಮೃತ ಕುಟುಂಬಗಳಿಗೆ ಪರಿಹಾರವೂ ಸಿಗುತ್ತಿದೆ. ಆದ್ರೆ, ಕೆಲ ಜನ ಹಣ(Money)ದ ಆಸೆಗೆ ಸುಳ್ಳು ಮಾಹಿತಿ ನೀಡಲು ಪ್ರಾರಂಭಿಸಿದ್ದಾರೆ. ಇಂತಹ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಕೇಂದ್ರದ ಅನುಮತಿ ಸಿಕ್ಕಿದೆ

ಕೊರೋನಾ ಮರಣ ಪರಿಹಾರ(Corona Death Compensation)ವನ್ನು ಪಡೆಯಲು ಸುಳ್ಳು ದೂರುಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ಇದರ ಅಡಿಯಲ್ಲಿ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸಲ್ಲಿಸಲಾದ 5% ಕ್ಲೈಮ್‌ಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ : Vultures Emergency Meeting: ರಣಹದ್ದುಗಳು ತುರ್ತು ಸಭೆ; ವಿಡಿಯೋ ವೈರಲ್

60 ದಿನಗಳಲ್ಲಿ ಕ್ಲೈಮ್ ಮಾಡಿ

ಕೊರೋನಾ(Corona) ಮೃತ ಪಟ್ಟವರ ಪರಿಹಾರವನ್ನು ಪಡೆಯಲು ಸುಪ್ರೀಂ ಕೋರ್ಟ್ ಮಾರ್ಚ್ 28 ರವರೆಗೆ 60 ದಿನಗಳನ್ನು ನಿಗದಿಪಡಿಸಿದೆ. ಭವಿಷ್ಯದ ಸಾವಿಗೆ ಪರಿಹಾರವನ್ನು ಪಡೆಯಲು, 90 ದಿನಗಳಲ್ಲಿ ಕ್ಲೈಮ್ ಮಾಡಬೇಕಾಗಿದೆ.

4 ರಾಜ್ಯಗಳಲ್ಲಿ ತನಿಖೆ ನಡೆಸಲಾಗುವುದು

ಸುಪ್ರೀಂ ಕೋರ್ಟ್‌(Supreme Court)ನ ಅನುಮತಿಯ ನಂತರ, ಕೇಂದ್ರ ಸರ್ಕಾರವು 4 ರಾಜ್ಯಗಳಲ್ಲಿ 5% ಪರಿಹಾರದ ರೈಟ್ ಪರಿಶೀಲಿಸಬಹುದು. ಈ ರೈಟ್ ಸಂಖ್ಯೆ ಮತ್ತು ವರದಿಯಾದ ಸಾವಿನ ಸಂಖ್ಯೆಯ ನಡುವೆ ವ್ಯಾಪಕ ಅಂತರವಿದೆ. ಹೀಗಾಗಿ ಕೊರೋನಾ ಪರಿಹಾರಕ್ಕಾಗಿ ಸುಳ್ಳು ಮಾಹಿತಿ ಸಲ್ಲಿಸುವ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಅನುಮತಿ ನೀಡಿದೆ.

ಇದನ್ನೂ ಓದಿ : ಅಪಾಯ ಹೆಚ್ಚಿಸುತ್ತಿದೆ ಕರೋನಾ ಹೊಸ ರೂಪಾಂತರ WHO ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News