Puneet Rajkumar: 102 ಕವಿಗಳು ಬರೆದರು ಅಪ್ಪು ಮೇಲೆ ಕವನ!

ಪುನೀತ್‌ (Puneeth) ಅಗಲಿಕೆ ಬಳಿಕೆ 102 ಕವಿಗಳು ಅಪ್ಪು ಮೇಲೆ ಕವನಗಳನ್ನು ಬರೆದಿದ್ದಾರೆ. 'ರಾಜರತ್ನ ಕವಿ ನಮನ ಕವನ ಸಂಕಲನ' ಹಾಗೂ 'ರಾಜರತ್ನ ಗೀತ ನಮನ' ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. 

Written by - Chetana Devarmani | Last Updated : Mar 30, 2022, 03:26 PM IST
  • ಪುನೀತ್ ರಾಜ್‌ಕುಮಾರ್ ಅಗಲಿ ಐದು ತಿಂಗಳು ಕಳೆದಿವೆ
  • ಕನ್ನಡ ಚಿತ್ರರಂಗ ಯುವರತ್ನನನ್ನು ಕಳೆದುಕೊಂಡ ನೋವಿನಲ್ಲೇ ಕೊರಗುತ್ತಿದೆ
  • ಅಪ್ಪು ಅಭಿಮಾನಿಗಳು ನೆಚ್ಚಿನ ನಟನಿಗೆ ವಿಶೇಷ ನಮನ ಸಲ್ಲಿಸಲು ಮುಂದಾಗಿದ್ದಾರೆ
Puneet Rajkumar: 102 ಕವಿಗಳು ಬರೆದರು ಅಪ್ಪು ಮೇಲೆ ಕವನ! title=
ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಐದು ತಿಂಗಳು ಕಳೆದರೂ ಆ ನೋವು ಮರೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕನ್ನಡ ಚಿತ್ರರಂಗ ಯುವರತ್ನನನ್ನು ಕಳೆದುಕೊಂಡ ನೋವಿನಲ್ಲೇ ಕೊರಗುತ್ತಿದೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಅಪ್ಪು ಅಭಿಮಾನಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷ ನಮನ ಸಲ್ಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:  ಕಾಶ್ಮೀರ್ ಫೈಲ್ಸ್ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್‌ನಿಂದ ಕರೆ : ಬ್ರಿಟಿಷ್ ಸಂಸತ್ತಿನಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಚರ್ಚೆ!

ಪುನೀತ್‌ (Puneeth) ಅಗಲಿಕೆ ಬಳಿಕೆ 102 ಕವಿಗಳು ಅಪ್ಪು ಮೇಲೆ ಕವನಗಳನ್ನು ಬರೆದಿದ್ದಾರೆ. 'ರಾಜರತ್ನ ಕವಿ ನಮನ ಕವನ ಸಂಕಲನ' ಹಾಗೂ 'ರಾಜರತ್ನ ಗೀತ ನಮನ' ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಅಪ್ಪಟ ಅಪ್ಪು ಅಭಿಮಾನಿ (Appu Fan) ಜೆ.ಡಿ.ದನ್ನೂರ್ ಹಾಗೂ ಅವರ ತಂಡ ಈ ಕಾರ್ಯಕ್ಕೆ ಮುಂದಾಗಿದೆ. ಮೈಸೂರು, ಕಲಬುರಗಿ, ಬೆಂಗಳೂರು, ಮಂಡ್ಯ, ಕಾರವಾರ, ಗದಗ, ರಾಯಚೂರ್, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿರುವ 102 ಕವಿಗಳಿಂದ ಪುನೀತ್ ರಾಜಕುಮಾರ್ ಬಗ್ಗೆ ಬರೆದ ಕವನಗಳನ್ನು ಇದಕ್ಕಾಗಿ ಸಂಗ್ರಹಿಸಿದ್ದಾರೆ. ಈ ಕವನಗಳನ್ನು ಸಂಗ್ರಹಿಸಿ, 5 ಸಾವಿರ ಪ್ರತಿಗಳನ್ನು ಮುದ್ರಿಸಿ ಅಭಿಮಾನಿಗಳಿಗೆ ಹಂಚಲಿದ್ದಾರೆ.

ಅಪ್ಪು ಅಭಿಮಾನಿಗಳು ಈ ಕವನ ಸಂಕಲನವನ್ನು ಅಭಿಮಾನಿಗಳಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಅಲ್ಲದೇ ನಾಡಿನ ಗ್ರಂಥಾಲಯಕ್ಕೆ (Library) ಉಚಿತವಾಗಿ ಈ ಕವನ ಸಂಕಲನ ನೀಡಲಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಕವನ ಸಂಕಲನ ಪ್ರತಿ ಪುಟದಲ್ಲೂ ಪುನೀತ್ ಅವರ ವಿಭಿನ್ನ ಭಾವಚಿತ್ರ ಬಳಸಲಿದ್ದಾರೆ.

ಇದಲ್ಲದೇ ಎಂಟು ಗೀತೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಮೃತ್ಯೂಂಜಯ ದೊಡವಾಡ ಈ ಹಾಡುಗಳಿಗೆ ಸಂಗೀತ ನಿರ್ದೇಶನ (Music Director) ಮಾಡಲಿದ್ದು, ಬೆಂಗಳೂರಿನ ಖ್ಯಾತ ಗಾಯಕರಾದ ಅಜಯ್‌ ವಾರಿಯರ್‌, ಪ್ರಭಾ ಇನಾಂದಾರ ಉಷಾ ಕಸ್ತೂರಿ ಶಂಕರ ಹಾಡಲಿದ್ದಾರೆ.  

ಇದನ್ನೂ ಓದಿ:  Rashmika Mandanna:ಅಬ್ಬಬ್ಬಾ.. ರಶ್ಮಿಕಾ ಮಂದಣ್ಣ ವರ್ಕ್‌ಔಟ್ ಕಂಡು ದಂಗಾದ ಫ್ಯಾನ್ಸ್‌!

ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಚ್ 30 ರಂದು (ಇಂದು) ರಾಜರತ್ನ ಕವಿ ನಮನ ಹಾಗೂ ಗೀತ ನಮನವನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಚಿತ್ರನಟಿ ಡಾ.ಜಯಮಾಲಾ (Jayamala) ಕವನ ಸಂಕಲನ ಹಾಗೂ ಹಾಡುಗಳನ್ನು ರಿಲೀಸ್ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ (Manu Baligar) ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News