Ram Navami 2022: ರಾಮನವಮಿಯಂದು ಮಾಡಲಾಗುವ ಈ ಉಪಾಯಗಳಿಂದ ಮನೆ ಸುಖ-ಸಂಪತ್ತಿನಿಂದ ತುಂಬಿ ತುಳುಕಲಿದೆ

Ram Navami 2022 Remedies: ರಾಮ ನವಮಿಯ ದಿನ ಶ್ರೀರಾಮನ ಜನ್ಮದಿನವಾಗಿದೆ. ಈ ವರ್ಷ ಏಪ್ರಿಲ್ 10, ಭಾನುವಾರದಂದು ರಾಮನವಮಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಮಾಡಲಾಗುವ ಕೆಲ ಉಪಾಯಗಳಿಂದ ಜೀವನದಲ್ಲಿನ ದುಃಖಗಳು ನಿವಾರಣೆಯಾಗಿ ಜೀವನ ಖುಷಿಯಿಂದ ತುಂಬುತ್ತದೆ. 

Written by - Nitin Tabib | Last Updated : Apr 8, 2022, 03:50 PM IST
  • ಏಪ್ರಿಲ್ 10ರಂದು ರಾಮನವಮಿ ಉತ್ಸವ ಆಚರಿಸಲಾಗುತ್ತಿದೆ
  • ಇಡೀ ದೇಶಾದ್ಯಂತ ರಾಮನವಮಿ ಆಚರಿಸಲಾಗುತ್ತದೆ.
  • ಈ ಉಪಾಯಗಳು ಪ್ರತಿಯೊಂದು ದುಃಖಗಳನ್ನು ನಿವಾರಿಸುತ್ತವೆ
Ram Navami 2022: ರಾಮನವಮಿಯಂದು ಮಾಡಲಾಗುವ ಈ ಉಪಾಯಗಳಿಂದ ಮನೆ ಸುಖ-ಸಂಪತ್ತಿನಿಂದ ತುಂಬಿ ತುಳುಕಲಿದೆ title=
Ram Navami 2022

Ram Navami 2022: ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಶ್ರೀರಾಮ (Lord Shri Ram) ಜನ್ಮೊತ್ಸವವನ್ನು ಆಚರಿಸಲಾಗುತ್ತದೆ. ಇದನ್ನೇ ರಾಮ ನವಮಿ ಎಂದೂ ಕೂಡ ಕರೆಯಲಾಗುತ್ತದೆ.  ಚೈತ್ರ ನವರಾತ್ರಿಯ ಕೊನೆಯ ದಿನವೂ ಹೌದು. ಈ ವರ್ಷ ರಾಮ ನವಮಿ ಏಪ್ರಿಲ್ 10, ಭಾನುವಾರದಂದು ಆಚರಿಸಲಾಗುತ್ತಿದೆ. ಈ ಬಾರಿ ನವಮಿ ತಿಥಿಯು ಏಪ್ರಿಲ್ 9 ರ ತಡರಾತ್ರಿ ಅಂದರೆ 01:23 ರಿಂದ ಆರಂಭವಾಗುತ್ತಿದೆ ಮತ್ತು ಏಪ್ರಿಲ್ 11 ರಂದು ಮಧ್ಯಾಹ್ನ 03:15 ರವರೆಗೆ ಇರಲಿದೆ. ರಾಮ ನವಮಿಯ ದಿನದಂದು ದೇಶಾದ್ಯಂತ ರಾಮಮಂದಿರಗಳಲ್ಲಿ ಭಗವಾನ್ ಶ್ರೀರಾಮನನ್ನು ಪೂಜಿಸಲಾಗುತ್ತದೆ. ಈ ದಿನದಂದು ಕೈಗೊಂಡ ಕೆಲವು ವಿಶೇಷ ಉಪಾಯಗಳು ನಮ್ಮೆ ಜೀವನವನ್ನು ಸುಖ-ಸಂತೋಷದಿಂದ ತುಂಬುತ್ತವೆ. 

ರಾಮನವಮಿಯ ಶುಭ ಮುಹೂರ್ತ (Ram Navami 2022 Shubh Muhurat)
ರಾಮನವಮಿಯ ಪೂಜೆಯ ಶುಭ ಸಮಯವು ಏಪ್ರಿಲ್ 10 ರಂದು ಬೆಳಗ್ಗೆ 11:06 ರಿಂದ ಮಧ್ಯಾಹ್ನ 01:39 ರವರೆಗೆ ಇರಲಿದೆ. ಈ ಮುಹೂರ್ತದಲ್ಲಿ ದೇವಸ್ಥಾನಗಳಲ್ಲಿ ರಾಮಜನ್ಮೋತ್ಸವ ಕಾರ್ಯಕ್ರಮ ನಡೆಯುತ್ತದೆ. ಮತ್ತೊಂದೆಡೆ, ಅಭಿಜಿತ್ ಮುಹೂರ್ತವು 12:04 ರಿಂದ 12:53 ರವರೆಗೆ ಕೇವಲ 49 ನಿಮಿಷಗಳವರೆಗೆ ಇರಲಿದೆ.

ರಾಮನವಮಿಯ ದಿನ ಈ ಉಪಾಯಗಳನ್ನು ಮಾಡಿ 
ಸಂಕಷ್ಟಗಳಿಂದ ಪಾರಾಗುವ ಉಪಾಯ - ನೀವೂ ಕೂಡ ಜೀವನದಲ್ಲಿ ಯಾವುದೇ ಬಿಕ್ಕಟ್ಟಿನಿಂದ ಸುತ್ತುವರೆದಿದ್ದರೆ, ರಾಮ ನವಮಿಯ ದಿನದಂದು ರಾಮ ರಕ್ಷಾ ಸ್ತೋತ್ರ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿನ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ.
ದುಃಖಗಳಿಂದ ಮುಕ್ತಿಪಡೆಯಲು ಈ ಉಪಾಯ ಅನುಸರಿಸಿ - ದುಃಖದ ಸಮಯದಲ್ಲಿ ಭಗವಂತನ ಆರಾಧನೆ ವ್ಯಕ್ತಿಗೆ ಒಂದು ಸಕಾರಾತ್ಮಕತೆ ಮತ್ತು ತಾಳ್ಮೆಯ ಅನುಭವ ನೀಡುತ್ತದೆ. ರಾಮನವಮಿಯ ದಿನದಂದು ಶುಭ ಮುಹೂರ್ತದಲ್ಲಿ ಭಗವಾನ್ ಶ್ರೀ ರಾಮನನ್ನು ಪೂಜಿಸುವುದು ಮತ್ತು ರಾಮ ಸ್ತುತಿಯಾಗಿರುವ 'ಶ್ರೀ ರಾಮಚಂದ್ರ ಕೃಪಾಲು ಭಜ್ ಮನ...' ಹಾಡುವುದರಿಂದ ದುಃಖಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು.

ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ - ರಾಮನವಮಿಯ ದಿನ ಭಗವಾನ್ ಶ್ರೀರಾಮನ ಪರಮ ಭಕ್ತ ಹನುಮನನ್ನು ಆರಾಧಿಸುವ ಮೂಲಕ ರಾಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಆದ್ದರಿಂದ ರಾಮನವಮಿಯ ದಿನದಂದು ಹನುಮಾನ್ ಚಾಲೀಸವನ್ನು ಸಂಪೂರ್ಣವಾಗಿ ಪಠಿಸಿ, ಈ ರೀತಿ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ.

ಸುಖ-ಸಮೃದ್ಧಿ ಪ್ರಾಪ್ತಿಯ ಉಪಾಯ - ರಾಮನಾಮದಲ್ಲಿ ಅಪಾರ ಶಕ್ತಿ ಇದೆ. ರಾಮನವಮಿಯ ದಿನ ಶ್ರೀರಾಮನನ್ನು ಪೂಜಿಸುವುದು ಹಾಗೂ ಶ್ರೀರಾಮ ನಾಮ ಜಪಿಸುವುದರಿಂದ ಜೀವನದಲ್ಲಿ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Chia Seeds For Health: ಚಿಯಾ ಸೀಡ್ಸ್ ಸೇವನೆಯ ಈ ಆರೋಗ್ಯಕರ ಲಾಭ ನಿಮಗೆ ತಿಳಿದಿವೆಯೇ?

ಪುಣ್ಯಪ್ರಾಪ್ತಿಯ ಉಪಾಯ - ಪಾಪಗಳ ನಾಶ ಹಾಗೂ ಪುಣ್ಯ ಪ್ರಾಪ್ತಿಗಾಗಿ ರಾಮನವಮಿಯ ದಿನ ರಾಮಾಯಣ ಅಥವಾ ರಾಮಚರಿತಮಾನಸ ಪಠಿಸುವುದು ತುಂಬಾ ಶುಭಕರ ಎನ್ನಲಾಗಿದೆ.

ಇದನ್ನೂ ಓದಿ-Shadow Planet Ketu Transit 2022: ಇದೇ ತಿಂಗಳು ಸಂಭವಿಸಲಿದೆ ಛಾಯಾಗ್ರಹ ಕೇತು ಗೋಚರ, ಈ 3 ರಾಶಿಯ ಜನರಿಗೆ ನೌಕರಿಯಲ್ಲಿ ಪ್ರಮೋಶನ್ ಯೋಗ

(Disclaimer:ಈ ಲೇಖನನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News