Jio-Airtel ಬೆವರಿಳಿಸಿದ BSNL ಪ್ಲಾನ್! ಈ ಅದ್ಭುತ ಲಾಭಗಳು ಯಾವ ಯೋಜನೆಯಲ್ಲೂ ಸಿಗುತ್ತಿಲ್ಲ

ಇಂದು ನಾವು ನಿಮಗೆ ಸರ್ಕಾರಿ ಸ್ವಾಮ್ಯದ BSNL ಕಂಪನಿಯ ಯೋಜನೆಯೊಂದರ ಕುರಿತು ಮಾಹಿತಿ ನೀಡುತ್ತಿದ್ದು, ಇದರಲ್ಲಿ ನಿಮಗೆ ಕಡಿಮೆ ವೆಚ್ಚದಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು ಜಿಯೋ-ಏರ್‌ಟೆಲ್‌ನ ಯೋಜನೆಗಿಂತ ಉತ್ತಮವಾಗಿದೆ ಎಂಬುದು ಇಲ್ಲಿ ಗಮನಾರ್ಹ.

Written by - Nitin Tabib | Last Updated : Apr 8, 2022, 09:28 PM IST
  • Jio-Airtel ಬೆವರಿಳಿಸಿದ BSNL ಯೋಜನೆ
  • ಕಡಿಮೆ ವೆಚ್ಚದಲ್ಲಿ ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
  • ಯೋಜನೆಯ ಮಾನ್ಯತೆ 110 ದಿನಗಳು
Jio-Airtel ಬೆವರಿಳಿಸಿದ BSNL ಪ್ಲಾನ್! ಈ ಅದ್ಭುತ ಲಾಭಗಳು ಯಾವ ಯೋಜನೆಯಲ್ಲೂ ಸಿಗುತ್ತಿಲ್ಲ title=
BSNL Prepaid Scheme

ನವದೆಹಲಿ: BSNL ದೇಶದ ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು, ಇದು ತನ್ನ ಅತ್ಯುತ್ತಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ Jio, Airtel ಮತ್ತು Vi ನಂತಹ ಖಾಸಗಿ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇಂದು ನಾವು ನಿಮಗೆ BSNL ನ ಒಂದು ಪ್ಲಾನ್ ಬಗ್ಗೆ ಮಾಹಿತಿ (Tech News In Kannada) ನೀಡಲಿದ್ದೇವೆ, ಇದರಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ 110 ದಿನಗಳವರೆಗೆ ಆಕರ್ಷಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳು ಜಿಯೋ ಮತ್ತು ಏರ್‌ಟೆಲ್‌ನ ಅದೇ ಬೆಲೆಯ ಯೋಜನೆಗಳಲ್ಲಿ ನೀಡಲಾಗುತ್ತಿಲ್ಲ ಎಂಬುದು ಇಲ್ಲಿ ವಿಶೇಷ.

BSNL ನ ಅತ್ಯುತ್ತಮ ಯೋಜನೆ
BSNL ನ ಈ ಯೋಜನೆಯ ಬೆಲೆ 666 ರೂ. ಆಗಿದೆ. ಈ ಯೋಜನೆಯಲ್ಲಿ, ನಿಮಗೆ 110 ದಿನಗಳವರೆಗೆ 2GB ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ, ಅಂದರೆ, ಒಟ್ಟಾರೆಯಾಗಿ, ಈ ಯೋಜನೆಯಲ್ಲಿ ನಿಮಗೆ 220GB ಇಂಟರ್ನೆಟ್ ಅನ್ನು ನೀಡಲಾಗುತ್ತಿದೆ. ನಿಮ್ಮ ಡೇಟಾ ಖಾಲಿಯಾದಾಗ, ಇಂಟರ್ನೆಟ್ ವೇಗವು 40Kbps ಗೆ ಇಳಿಕೆಯಾಗಲಿದೆ. ಈ ಯೋಜನೆಯಲ್ಲಿ, ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ನೀಡಲಾಗುತ್ತದೆ. ಇದರ ಹೊರತಾಗಿ, ನಿಮಗೆ ಉಚಿತ ಕಾಲರ್‌ಟ್ಯೂನ್‌ಗಳು ಮತ್ತು ಲೋಕಧುನ್ ಕಂಟೆಂಟ್ ಸದಸ್ಯತ್ವವನ್ನು ಸಹ ನೀಡಲಾಗುತ್ತಿದೆ.

ಇದನ್ನೂ ಓದಿ-Good News: ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ, ಈ ವರದಿ ಓದಿ

ಜಿಯೋದ ರೂ 666 ಯೋಜನೆ
ರಿಲಯನ್ಸ್ ಜಿಯೋದ ರೂ 666 ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ, ನಿಮಗೆ ಪ್ರತಿದಿನ 1.5GB ಡೇಟಾವನ್ನು ನೀಡಲಾಗುತ್ತದೆ ಅಂದರೆ ಒಟ್ಟಾರೆಯಾಗಿ ನೀವು 126GB ಡೇಟಾ ಸೌಲಭ್ಯ ಪಡೆಯುವಿರಿ. ಯೋಜನೆಯು ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ.

ಇದನ್ನೂ ಓದಿ-Honda: 1 ಕೋಟಿಗೂ ಅಧಿಕ ಭಾರತೀಯರ ಈ ಅಚ್ಚುಮೆಚ್ಚಿನ ಬೈಕ್ ಅನ್ನು ಕೇವಲ 5999 ಪಾವತಿಸಿ ಮನೆಗೆ ಕೊಂಡೊಯ್ಯಿರಿ!

ಏರ್‌ಟೆಲ್ ರೂ 666 ಯೋಜನೆ
ಏರ್‌ಟೆಲ್‌ನ ಈ ಯೋಜನೆಯಲ್ಲಿ, ನಿಮಗೆ ದಿನಕ್ಕೆ 1.5GB ಡೇಟಾವನ್ನು 77 ದಿನಗಳವರೆಗೆ ನೀಡುತ್ತದೆ, ಹೀಗಾಗಿ ಒಟ್ಟು ಡೇಟಾವನ್ನು 115.5GB ಇರಲಿದೆ. ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತದೆ. Vi ನ 666 ರೂಗಳ ಯೋಜನೆಯು ಕೂಡ ಇದೆ ರೀತಿಯ ಪ್ರಯೋಜನಗಳೊಂದಿಗೆ ಬರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News