KGF Chapter 2 First review: ಭಾರತೀಯ ಚಿತ್ರರಂಗದ ಕಿರೀಟ ಎಂದ ಚಿತ್ರ ವಿಮರ್ಶಕ..!

Written by - Malathesha M | Last Updated : Apr 10, 2022, 04:03 PM IST
  • ಇನ್ನೂ ಕೆಜಿಎಫ್-2 ಡೈಲಾಗ್ಸ್ ಶಾರ್ಪ್ ಆಗಿವೆ. ಹಾಗೇ ಮ್ಯೂಸಿಕ್ ಕೂಡ ಚೆನ್ನಾಗಿದೆ.
  • ಒಟ್ಟಾರೆ ಕೆಜಿಎಫ್-2 ಸಿನಿಮಾ ಅದ್ಭುತ. ಸ್ಯಾಂಡಲ್‌ವುಡ್ ಮಟ್ಟಿಗೆ ಮಾತ್ರ ಕೆಜಿಎಫ್-2 ಬ್ಲಾಕ್ ಬಸ್ಟರ್ ಅಲ್ಲ.
 KGF Chapter 2 First review: ಭಾರತೀಯ ಚಿತ್ರರಂಗದ ಕಿರೀಟ ಎಂದ ಚಿತ್ರ ವಿಮರ್ಶಕ..!  title=
file photo

'ಕೆಜಿಎಫ್-2' ಅನ್ನೋ ಹೆಸರಲ್ಲೇ ಸಂಚಲನ ಇದೆ. 'ಕೆಜಿಎಫ್-2' ಹೆಸರಲ್ಲೇ ಹೈವೋಲ್ಟೇಜ್‌ ಕರೆಂಟ್‌ ಇದೆ. 'ಕೆಜಿಎಫ್-2' ಅಂದ್ರೆನೆ ಹಾಗೆ, ಕನ್ನಡ ಸಿನಿ ರಂಗವನ್ನು ಇಡೀ ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಮಾಡಿರುವ ಈ ಸಿನಿಮಾ ಜಾಗತಿಕ ಸಿನಿಮಾ ಮಾರುಕಟ್ಟೆಯನ್ನೇ ನಡುಗಿಸಿದೆ. 'ಕೆಜಿಎಫ್-2' ಸೆನ್ಸಾರ್‌ ಪ್ರದರ್ಶನದಲ್ಲಿ ಸಿನಿಮಾ ಕಣ್ತುಂಬಿಕೊಂಡಿರುವ  ಓವರ್‌ಸೀಸ್ ಸೆನ್ಸಾರ್‌ ಮಂಡಳಿ ಮೆಂಬರ್ ಒಬ್ಬರು, 'ಕೆಜಿಎಫ್-2'ಗೆ ನೀಡಿರುವ ರಿಯಾಕ್ಷನ್‌ ಅಭಿಮಾನಿಗಳನ್ನು ಮತ್ತಷ್ಟು ರೋಮಾಂಚನಗೊಳಿಸಿದೆ.

ಇದನ್ನೂ ಓದಿ : Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ

'ಕೆಜಿಎಫ್-2' ಬರೀ ನಿರೀಕ್ಷಿತ ಸಿನಿಮಾ ಅಲ್ಲ, ಅದು ಬಹು ನಿರೀಕ್ಷಿತ ಸಿನಿಮಾ. ಸುಮಾರು 4 ವರ್ಷದಿಂದ ಅಭಿಮಾನಿಗಳು ಉಸಿರು ಬಿಗಿ ಹಿಡಿದು 'ಕೆಜಿಎಫ್-2' ನೋಡಲು ಕಾದು ಕುಳಿತಿದ್ದರು. ಯಾವಾಗ 'ಕೆಜಿಎಫ್-2' ರಿಲೀಸ್‌ ಆಗುತ್ತೆ, ರಾಕಿ ಭಾಯ್‌ ಕಥೆ ಏನಾಗುತ್ತೆ ಅಂತಾ ಕಾಯುತ್ತಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಏಪ್ರಿಲ್‌ 14ರಂದು ಉತ್ತರ ಸಿಗಲಿದೆ. ಅದಕ್ಕೂ ಮೊದಲು ಸೆನ್ಸಾರ್‌ ಯುದ್ಧ ಗೆದ್ದಿರುವ 'ಕೆಜಿಎಫ್-2' ಯಾರೂ ಊಹಿಸದಿರುವ ರಿವ್ಯೂವ್‌ ಹಾಗೂ ರೇಟಿಂಗ್ ಪಡೆದಿದೆ.‌ ಈ ಮೂಲಕ ಕನ್ನಡ ಸಿನಿಮಾ 'ಕೆಜಿಎಫ್-2' ಮತ್ತೊಂದು ಇತಿಹಾಸ ಬರೆದಿದೆ.

ವರ್ಲ್ಡ್‌ ಕ್ಲಾಸ್‌ ಸಿನಿಮಾ..!

ಅಷ್ಟಕ್ಕೂ ಈ ರಿವ್ಯೂವ್‌ ಕೊಟ್ಟಿರುವುದು ಬೇರೆ ಯಾರೂ ಅಲ್ಲ‌, ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯರಾದ ಉಮೈರ್ ಸಾಂಧು. 'ಕೆಜಿಎಫ್-2' ವೀಕ್ಷಿಸಿ ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ  ಉಮೈರ್ ಸಾಂಧು, 'ಕೆಜಿಎಫ್-2' ಸಿನಿಮಾಗೆ 5ಕ್ಕೆ 5 ರೇಟಿಂಗ್‌ ನೀಡಿದ್ದಾರೆ. ಅಲ್ಲದೆ ಈ ಸಿನಿಮಾ ಭಾರತ ಚಿತ್ರರಂಗದ ಕಿರೀಟ ಎಂದು ಬರೆದುಕೊಂಡಿದ್ದಾರೆ. ಇದು ಜಗತ್ತಿನಾದ್ಯಂತ ಸಂಚಲ ಸೃಷ್ಟಿಸುವ ಜೊತೆಗೆ, 'ಕೆಜಿಎಫ್-2' ಕೇಜ್‌ ಮತ್ತಷ್ಟು ಹೆಚ್ಚಾಗಿದೆ. ಯಾವಾಗ ಸಿನಿಮಾ ಕಣ್ತುಂಬಿಕೊಳ್ಳುತ್ತೀವಿ ಅಂತಾ 'ಕೆಜಿಎಫ್-2' ಅಭಿಮಾನಿ ಬಳಗ ಕಾಯುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್ ವಿರೋಧಿ ಬಿಜೆಪಿ ಅಲ್ಲ, ಆರ್ ಎಸ್ ಎಸ್..! -ಬಿ.ಕೆ. ಹರಿಪ್ರಸಾದ್

ಅಷ್ಟಕ್ಕೂ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಮೈರ್ ಸಾಂಧು ಏನೆಂದು ಬರೆದುಕೊಂಡಿದ್ದಾರೆ ಅನ್ನೋದನ್ನ ಡೀಟೇಲ್‌ ಆಗಿ ನೋಡುವುದಾದರೆ, 'ಕೆಜಿಎಫ್-2 ಭಾರತ ಚಿತ್ರರಂಗದ ಕಿರೀಟ. ಸಿನಿಮಾ ಆರಂಭದಿಂದ ಹಿಡಿದು ಕ್ಲೈಮ್ಯಾಕ್ಸ್‌ವರೆಗೂ ಭರ್ಜರಿ ಆಕ್ಷನ್ ಇದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಕೂಡ ಸಖತ್‌ ಇದೆ. ಇನ್ನೂ ಕೆಜಿಎಫ್-2 ಡೈಲಾಗ್ಸ್ ಶಾರ್ಪ್ ಆಗಿವೆ. ಹಾಗೇ ಮ್ಯೂಸಿಕ್ ಕೂಡ ಚೆನ್ನಾಗಿದೆ. ಒಟ್ಟಾರೆ ಕೆಜಿಎಫ್-2 ಸಿನಿಮಾ ಅದ್ಭುತ. ಸ್ಯಾಂಡಲ್‌ವುಡ್ ಮಟ್ಟಿಗೆ ಮಾತ್ರ ಕೆಜಿಎಫ್-2 ಬ್ಲಾಕ್ ಬಸ್ಟರ್ ಅಲ್ಲ. ಬದಲಾಗಿ ಪ್ರಶಾಂತ್ ನೀಲ್ ನಿರ್ದೇಶನದ ವರ್ಲ್ಡ್ ಕ್ಲಾಸ್ ಸಿನಿಮಾ. ಯಶ್ ಮತ್ತು ಸಂಜಯ್ ದತ್ ಎಲ್ಲರ ಮನ ಗೆಲ್ಲುತ್ತಾರೆ. ಸಿನಿಮಾದ ಕ್ಲೈಮ್ಯಾಕ್ಸ್ ನಿಮಗೆ ಶಾಕ್ ನೀಡುವುದು ಖಂಡಿತ' ಎಂದು ಬರೆದುಕೊಳ್ಳುವ ಮೂಲಕ ಉಮೈರ್ ಸಾಂಧು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News