Health Tips: ಉತ್ತಮ ಆರೋಗ್ಯಕ್ಕೆ ಪ್ರತಿದಿನ ಎಷ್ಟು ನೀರು ಕುಡಿಯಬೇಕು?

ನೀರಿನ ಕೊರತೆಯು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್‌ ಸಮಸ್ಯೆ ಸಂಭವಿಸುತ್ತದೆ. ಇದರಿಂದ ದೇಹವು ಆಯಾಸಗೊಳ್ಳುತ್ತದೆ.

Written by - Chetana Devarmani | Last Updated : Apr 13, 2022, 12:37 PM IST
  • ನೀರು ನಮ್ಮ ದೇಹದ ಪ್ರಮುಖ ರಾಸಾಯನಿಕ ಅಂಶವಾಗಿದೆ
  • ಉತ್ತಮ ಆರೋಗ್ಯಕ್ಕೆ ಪ್ರತಿದಿನ ಎಷ್ಟು ನೀರು ಕುಡಿಯಬೇಕು?
  • ನೀವು ಸಾಕಷ್ಟು ಕುಡಿಯುತ್ತಿದ್ದೀರೋ ಇಲ್ಲವೋ ತಿಳಿಯುವುದು ಹೇಗೆ?
Health Tips: ಉತ್ತಮ ಆರೋಗ್ಯಕ್ಕೆ ಪ್ರತಿದಿನ ಎಷ್ಟು ನೀರು ಕುಡಿಯಬೇಕು?  title=
ನೀರು

ನೀರು ನಮ್ಮ ದೇಹದ ಪ್ರಮುಖ ರಾಸಾಯನಿಕ ಅಂಶವಾಗಿದೆ. ದೇಹದ ತೂಕದ 50% ರಿಂದ 70% ರಷ್ಟು ನೀರಿದೆ. ದೇಹದಲ್ಲಿನ ಪ್ರತಿಯೊಂದು ಜೀವಕೋಶ, ಅಂಗಾಂಶ ಮತ್ತು ಅಂಗವು ಸರಿಯಾಗಿ ಕೆಲಸ ಮಾಡಲು ನೀರಿನ ಅಗತ್ಯವಿದೆ. 

ಮೂತ್ರ ವಿಸರ್ಜನೆ, ಬೆವರು ಮತ್ತು ಕರುಳಿನ ಚಲನೆಯ ಮೂಲಕ ತ್ಯಾಜ್ಯವನ್ನು ಹೊರಹಾಕಲು ನೀರು ಅತ್ಯಗತ್ಯ. ದೇಹದ ತಾಪಮಾನವನ್ನು ಸರಿದೂಗಿಸಲು ನೀರು ಅವಶ್ಯಕ. ನೀರು ದೇಹದ ಸೂಕ್ಷ್ಮ ಅಂಗಾಂಶಗಳನ್ನು ರಕ್ಷಿಸಲು ಸಹಾಯಕ. 

ಇದನ್ನೂ ಓದಿ: Blood Pressure Control Tips: ಬೆಳಗಿನ ಉಪಹಾರದಲ್ಲಿ ಇವುಗಳನ್ನು ಶಾಮೀಲುಗೊಳಿಸಿ, BP ನಿಯಂತ್ರಣದಲ್ಲಿರುತ್ತದೆ

ನೀರಿನ ಕೊರತೆಯು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್‌ ಸಮಸ್ಯೆ ಸಂಭವಿಸುತ್ತದೆ. ಇದರಿಂದ ದೇಹವು ಆಯಾಸಗೊಳ್ಳುತ್ತದೆ.

ಪ್ರತಿದಿನ ಎಷ್ಟು ನೀರು ಕುಡಿಯಬೇಕು?

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಪಾನೀಯಗಳು ಮತ್ತು ನೀರಿನಂಶ ಜಾಸ್ತಿಯಿರುವ ಆಹಾರವನ್ನು ಸೇವಿಸಬೇಕು. U.S ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಇಂಜಿನಿಯರಿಂಗ್ ಮತ್ತು ಮೆಡಿಸಿನ್ ಪ್ರಕಾರ, ಪುರುಷರಿಗೆ ದಿನಕ್ಕೆ ಸುಮಾರು 15.5 ಕಪ್ (3.7 ಲೀಟರ್) ನೀರು ಬೇಕು. ಮಹಿಳೆಯರಿಗೆ ದಿನಕ್ಕೆ ಸುಮಾರು 11.5 ಕಪ್ (2.7 ಲೀಟರ್) ನೀರು ಬೇಕು. ಈ ಶಿಫಾರಸುಗಳು ನೀರು, ಇತರ ಪಾನೀಯಗಳು ಮತ್ತು ಆಹಾರದಿಂದ ದ್ರವಗಳನ್ನು ಒಳಗೊಂಡಿರುತ್ತವೆ. 

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕೆಂಬ ಸಲಹೆಯನ್ನು ನೀವು ಬಹುಶಃ ಕೇಳಿರಬಹುದು. ಹೆಚ್ಚಿನ ಆರೋಗ್ಯವಂತ ಜನರು ಬಾಯಾರಿಕೆಯಾದಾಗ ನೀರು ಮತ್ತು ಇತರ ದ್ರವ ಪದಾರ್ಥವನ್ನು ಕುಡಿಯುತ್ತಾರೆ. ಹಲವಾರು ಅಂಶಗಳ ಆಧಾರದ ಮೇಲೆ ನಿಮ್ಮ ಒಟ್ಟು ದ್ರವ ಸೇವನೆಯನ್ನು ನೀವು ಮಾರ್ಪಡಿಸಬೇಕಾಗಬಹುದು.

ಇದನ್ನೂ ಓದಿ: Water After Food: ಆಹಾರ ಸೇವನೆ ಬಳಿಕ ತಕ್ಷಣ ನೀರು ಕುಡಿಯುವ ಅಭ್ಯಾಸ ನಿಮಗೂ ಇದೆಯೇ? ಇದನ್ನು ತಪ್ಪದೇ ಓದಿ

ನೀವು ಹೆಚ್ಚು ಬೆವರುವ ಯಾವುದೇ ಚಟುವಟಿಕೆಯನ್ನು ಮಾಡಿದರೆ, ಹೆಚ್ಚು ನೀರನ್ನು ಕುಡಿಯಬೇಕು. ವ್ಯಾಯಾಮದ ಮೊದಲು, ವ್ಯಾಯಾಮ ಮಾಡುವ ವೇಳೆ ಮತ್ತು ನಂತರ ನೀರನ್ನು ಕುಡಿಯುವುದು ಮುಖ್ಯ. ನೀವು ಜ್ವರ, ವಾಂತಿ ಅಥವಾ ಅತಿಸಾರವನ್ನು ಹೊಂದಿರುವಾಗ ನಿಮ್ಮ ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಹೆಚ್ಚು ನೀರು ಕುಡಿಯಿರಿ ಮತ್ತು ವೈದ್ಯರ ಶಿಫಾರಸುಗಳನ್ನು ಅನುಸರಿಸಿ. 

ನೀವು ಸಾಕಷ್ಟು ಕುಡಿಯುತ್ತಿದ್ದೀರೋ ಇಲ್ಲವೋ ತಿಳಿಯುವುದು ಹೇಗೆ?

  • ನೀವು ವಿರಳವಾಗಿ ಬಾಯಾರಿಕೆಯನ್ನು ಅನುಭವಿಸುತ್ತೀರಿ
  • ನಿಮ್ಮ ಮೂತ್ರವು ಬಣ್ಣರಹಿತ ಅಥವಾ ತಿಳಿ ಹಳದಿಯಾಗಿದೆ

ಪ್ರತಿದಿನ ನಿಮಗೆ ಸೂಕ್ತವಾದ ನೀರಿನ ಪ್ರಮಾಣವನ್ನು ನಿರ್ಧರಿಸಲು ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರು ನಿಮಗೆ ಸಹಾಯ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News