ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಯುಎಸ್ ನೌಕಾಪಡೆಯ ಶಾಂತಿ ಸೇಥಿ ಅವರನ್ನು, ಅಮೆರಿಕಾ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರ ಕಾರ್ಯಕಾರಿ ಕಾರ್ಯದರ್ಶಿ ಮತ್ತು ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಳಿಸಲಾಗಿದೆ. ಯುಎಸ್ ನೌಕಾಪಡೆಯ ಪ್ರಮುಖ ಯುದ್ಧ ನೌಕೆಯ ಮೊದಲ ಇಂಡೋ-ಅಮೆರಿಕನ್ ಕಮಾಂಡರ್ ಆಗಿರುವ ಶಾಂತಿ ಸೇಥಿ, ಇತ್ತೀಚೆಗೆ ಉಪಾಧ್ಯಕ್ಷೆ ಹ್ಯಾರಿಸ್ ಅವರ ಕಚೇರಿಗೆ ಸೇರಿಕೊಂಡಿದ್ದಾರೆ ಎಂದು ಉಪಾಧ್ಯಕ್ಷರ ಹಿರಿಯ ಸಲಹೆಗಾರಾಗಿರುವ ಹರ್ಬಿ ಜಿಸ್ಕೆಂಡ್ ಅವರು ಹೇಳಿದ್ದಾರೆ.
ಇದನ್ನು ಓದಿ: NRI: ನೆದರ್ಲ್ಯಾಂಡ್ ನಲ್ಲಿ US ಅಧ್ಯಕ್ಷ ಜೋ ಬಿಡೆನ್ ರಾಯಭಾರಿಯಾಗಿ ಶೇಫಾಲಿ ದುಗ್ಗಲ್ ಆಯ್ಕೆ
ತನ್ನ ಹೊಸ ಜವಾಬ್ದಾರಿಯಲ್ಲಿ ಶಾಂತಿ ಸೇಥಿ ಅವರು, ರಾಷ್ಟ್ರೀಯ ಭದ್ರತಾ ಸಲಹೆಗಾರರ ದಾಖಲಾತಿಗಳನ್ನು ಉಪಾಧ್ಯಕ್ಷರ ಕಚೇರಿಯಲ್ಲಿ ಸಂಯೋಜಿಸಲಿದ್ದಾರೆ. ಇನ್ನು ಶಾಂತಿ ಸೇಥಿಯವರ ಜೀವನ ಮತ್ತು ಸಾಧನೆಯ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.
ಶಾಂತಿ ಸೇಥಿ ಅವರು ನೌಕಾ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಏಕೈಕ ಇಂಡೋ-ಅಮೆರಿಕನ್ ಮಹಿಳಾ ಅಧಿಕಾರಿ. ಅಷ್ಟೇ ಅಲ್ಲದೆ, ಯುಎಸ್ ನೌಕಾಪಡೆಯ ಪ್ರಮುಖ ಯುದ್ಧನೌಕೆಗೆ ನಿಯೋಜಿಸಲ್ಪಟ್ಟ 15 ನೇ ಮಹಿಳಾ ಅಧಿಕಾರಿ ಎಂಬ ಗೌರವ ಕೂಡ ಇವರಿಗೆ ಸಲ್ಲುತ್ತದೆ.
15 ಡಿಸೆಂಬರ್ 2010 ರಿಂದ ಮೇ 2012 ರವರೆಗೆ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ಯುಎಸ್ ಡೆಕಟೂರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಬಳಿಕ 2021-2022ರವರೆಗೆ ನೌಕಾಪಡೆಯ ಕಾರ್ಯದರ್ಶಿಯ ಹಿರಿಯ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಇದೀಗ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಕಚೇರಿಗೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಮತ್ತು ರಕ್ಷಣಾ ಸಲಹೆಗಾರರಾಗಿ ನೇಮಿಸಲಾಗಿದೆ.
ಕ್ಯಾಪ್ಟನ್ ಶಾಂತಿ ಸೇಥಿ ನೆವಾಡಾದ ರೆನೋ ನೆಲೆಸಿದ್ದಾರೆ. 1993ರಲ್ಲಿ ನಾರ್ವಿಚ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಎಲಿಯಟ್ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಅಫೇರ್ಸ್ನಿಂದ ಇಂಟರ್ನ್ಯಾಷನಲ್ ಪಾಲಿಸಿ ಮತ್ತು ಪ್ರಾಕ್ಟೀಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿ: NRI: ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ
2015 ರಲ್ಲಿ, ಕ್ಯಾಪ್ಟನ್ ಆಗಿ ಭಡ್ತಿ ಪಡೆದ ಅವರು. ಅನೇಕ ಗೌರವಗಳು, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೆರಿಟೋರಿಯಸ್ ಸೇವಾ ಪದಕ (ಎರಡು ಪ್ರಶಸ್ತಿಗಳು), ನೌಕಾಪಡೆಯ ಪ್ರಶಂಸೆಯ ಪದಕ (ನಾಲ್ಕು ಪ್ರಶಸ್ತಿಗಳು), ನೌಕಾಪಡೆಯ ಸಾಧನೆಯ ಪದಕ, ಘಟಕ ಮತ್ತು ಪ್ರಚಾರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಇದೀಗ ಶಾಂತಿ ಸೇಥಿ ಅವರು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.