NRI: ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ

NRI News: ಪ್ರಸ್ತುತ ETBPS ಸೌಲಭ್ಯವು ಸೇವಾ ಕ್ಷೇತ್ರದ ಮತದಾರರಿಗೆ ಮಾತ್ರ ಲಭ್ಯವಿದ್ದು, ತಮ್ಮ ತವರು ಕ್ಷೇತ್ರದಿಂದ ಹೊರಗೆ ನಿಯೋಜಿಸಲಲಾದ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪೇದೆಗಳಿಗೆ ಮತ್ತು ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ರಾಜತಾಂತ್ರಿಕ ಕಾರ್ಯಗಳ ಸದಸ್ಯರಿಗೆ ನೀಡಲಾಗಿದೆ. 2020 ರಲ್ಲಿ ಅರ್ಹ ಸಾಗರೋತ್ತರ ಭಾರತೀಯ ಮತದಾರರಿಗೂ ಕೂಡ ETPBS ಸೌಲಭ್ಯವನ್ನು ವಿಸ್ತರಿಸಲು EC ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ.   

Written by - Nitin Tabib | Last Updated : Apr 22, 2022, 07:38 PM IST
  • ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಸೌಲಭ್ಯ
  • ಸರ್ಕಾರ ಚಿಂತನೆ ನಡೆಸುತ್ತಿದೆ ಎಂದ ಮುಖ್ಯ ಚುನಾವಣಾ ಆಯುಕ್ತ
  • ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ವರದಿ ಓದಿ
NRI: ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲು ಸರ್ಕಾರ ಚಿಂತನೆ title=
ETBPS

NRI Update - ನೋಂದಾಯಿತ ಸಾಗರೋತ್ತರ ಮತದಾರರ ಸಂಖ್ಯೆಯನ್ನು "ಅತ್ಯಂತ ಕಡಿಮೆ" ಎಂದು ಹೇಳಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ,  ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರಿಗೆ NRI ಅಂಚೆ ಮತದಾನದ ಸೌಲಭ್ಯವನ್ನು ವಿಸ್ತರಿಸುವ ಸೌಲಭ್ಯದ ಕುರಿತು ಆಲೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಹೊರಡಿಸಿರುವ ಅಧಿಕೃತ ಹೇಳಿಕೆಯ ಪ್ರಕಾರ, ಚಂದ್ರ ಅವರು ಎರಡು ದೇಶಗಳಿಗೆ ನೀಡಿದ ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದ್ದರು ಮತ್ತು ಪ್ರಸ್ತುತ ಇರುವ ಮತದಾರರ ಸಂಖ್ಯೆಗಳು "ಅತ್ಯಂತ ಕಡಿಮೆ" ಇರುವುದರಿಂದ ಸಾಗರೋತ್ತರ ಮತದಾರರಾಗಿ ಹೆಸರು ನೋಂದಣಿ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಸಾಗರೋತ್ತರ ಮತದಾರರಿಗೆ ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ಇಟಿಪಿಬಿಎಸ್) ಸೌಲಭ್ಯವನ್ನು ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಭಾರತೀಯ ಸಮುದಾಯದ ನಾಗರಿಕರಿಗೆ ತಿಳಿಸಿದ್ದರು. 
ಪ್ರಸ್ತುತ ETBPS ಸೌಲಭ್ಯವು ಸೇವಾ ಕ್ಷೇತ್ರದ ಮತದಾರರಿಗೆ ಮಾತ್ರ ಲಭ್ಯವಿದ್ದು, ತಮ್ಮ ತವರು ಕ್ಷೇತ್ರದಿಂದ ಹೊರಗೆ ನಿಯೋಜಿಸಲಲಾದ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪೇದೆಗಳಿಗೆ ಮತ್ತು ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ರಾಜತಾಂತ್ರಿಕ ಕಾರ್ಯಗಳ ಸದಸ್ಯರಿಗೆ ನೀಡಲಾಗಿದೆ. 2020 ರಲ್ಲಿ ಅರ್ಹ ಸಾಗರೋತ್ತರ ಭಾರತೀಯ ಮತದಾರರಿಗೂ ಕೂಡ ETPBS ಸೌಲಭ್ಯವನ್ನು ವಿಸ್ತರಿಸಲು EC ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದೆ. 

ಈ ಕುರಿತು ನವೆಂಬರ್ 27, 2020 ರಂದು ಕಾನೂನು ಸಚಿವಾಲಯದ ಶಾಸಕಾಂಗ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಚುನಾವಣಾ ಆಯೋಗ, ಸೇವಾ ಕ್ಷೇತ್ರದ ಮತದಾರರಿಗೆ ಇಟಿಪಿಬಿಎಸ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಂತರ ಇದೀಗ ಈ ಸೌಲಭ್ಯವನ್ನು ವಿದೇಶಗಳಿಗೂ ವಿಸ್ತರಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ನೋಡಿ-

EC, ಕೇಂದ್ರ ಕಾನೂನು ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಗರೋತ್ತರ ಭಾರತೀಯ ಮತದಾರರಿಗೆ ಈ ಸೌಲಭ್ಯವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಯತ್ನಿಸುತ್ತಿವೆ.

ಇದನ್ನೂ ಓದಿ-NRI: ಮಲೇಷ್ಯಾನಲ್ಲಿರುವ ಭಾರತೀಯ ಮೂಲದ ವಿಕಲಚೇತನ ವ್ಯಕ್ತಿಗೆ ಮುಂದಿನ ವಾರ ಗಲ್ಲುಶಿಕ್ಷೆ, ಕಾರಣ ಇಲ್ಲಿದೆ

ಪ್ರಸ್ತುತ ಅನಿವಾಸಿ ಭಾರತೀಯರು ತಮ್ಮ ತಮ್ಮ ದೇಶದಲ್ಲಿನ ಅಧಿಕೃತ ಮತಕ್ಷೆತ್ರದಲ್ಲಿ ಮಾತ್ರ ಮತಚಲಾವಣೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ ಸುಮಾರು 112000 ಸಾಗರೋತ್ತರ ಭಾರತೀಯರು ಮಾತ್ರ ಭಾರತದಲ್ಲಿ ಮತಚಲಾವಣೆಯ ಹಕ್ಕನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ -NRI: ನೆದರ್ಲ್ಯಾಂಡ್ ನಲ್ಲಿ US ಅಧ್ಯಕ್ಷ ಜೋ ಬಿಡೆನ್ ರಾಯಭಾರಿಯಾಗಿ ಶೇಫಾಲಿ ದುಗ್ಗಲ್ ಆಯ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News