ನವದೆಹಲಿ: ಗೃಹ ಸಚಿವಾಲಯ ಈಗ ಪ್ರಧಾನಿ ಮೋದಿಯವರಿಗೆ ರಕ್ಷಣೆಯನ್ನು ಬೀಗಿಗೊಳಿಸಿದೆ. ಇತ್ತೀಚಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಮತ್ತು ಮಾವೋವಾದಿಗಳಿಂದ ಬಂದಿರುವ ಬೆದರಿಕೆ ಮಾಹಿತಿ ಅನ್ವಯ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈಗ ಗೃಹ ಇಲಾಖೆಯು ರಾಜ್ಯ ಸರ್ಕಾರಗಳಿಗೂ ಕೂಡ ಪ್ರಧಾನಿ ರಕ್ಷಣೆ ನಿಡುವ ವಿಚಾರದಲ್ಲಿ ನಿರ್ದೇಶನ ನೀಡಿದೆ. ಸಚಿವರು ಹಿರಿಯ ಅಧಿಕಾರಿಗಳನ್ನು ಕೂಡ ಪರಿಶೀಲನೆಗೆ ಒಳಪಡಿಸಿ ಪ್ರಧಾನಿ ಹತ್ತಿರ ಬಿಡಲಾಗುತ್ತದೆ ಎಂದು ತಿಳಿದುಬಂದಿದೆ.
ಗೃಹ ಸಚಿವಾಲಯದ ಸಭೆಯಲ್ಲಿ ರಾಷ್ಟ್ರೀಯ ರಕ್ಷಣಾ ಸಲಹೆಗಾರ,ಅಜಿತ್ ದೊವಲ್,ಗೃಹ ಇಲಾಖೆ ಕಾರ್ಯದರ್ಶಿ ರಾಜೀವ ಗೌಬಾ,ಇಂಟೆಲಿಜೆಂಟ್ಸ್ ನ ಬ್ಯೂರೋದ ನಿರ್ದೇಶಕ ರಾಜೀವ್ ಜೈನ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗ ಹಿರಿಯ ಅಧಿಕಾರಿಗಳು ಮತ್ತು ರಕ್ಷಣಾ ಏಜೆನ್ಸಿಯ ತೀರ್ಮಾನದಂತೆ ಪ್ರಧಾನಮಂತ್ರಿ ರೋಡ್ ಷೋ ನಡೆಸುವಂತಿಲ್ಲ ಎಂದು ತಿಳಿದುಬಂದಿದೆ.