PSI Reucirtment scam : 'ಪಿಎಸ್ಐ ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ'

ಒಮ್ಮೆ ಅನ್ಯಾಯ ಆಗಿದೆ ಅಂದರೆ ವ್ಯಾಪಕತೆ ಗೊತ್ತಾಗಲ್ಲ. ಅದೇ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡುತ್ತೇವೆ. ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ

Written by - Zee Kannada News Desk | Last Updated : Apr 29, 2022, 04:44 PM IST
  • ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ
  • ಯಾವುದೇ ಕಳಂಕಿತ ಎಡಿಜಿಪಿ ಅವರಲ್ಲ, ಸಿದ್ದರಾಮಯ್ಯ ಅವರು ಹೇಳುತ್ತಾರೆ
  • ನಾವು ಭಾಷೆ ಬಗ್ಗೆ ಅಭಿಮಾನದಿಂದ ಮಾತನಾಡಿದ್ರು ಸಹಿಸಲ್ಲ
PSI Reucirtment scam : 'ಪಿಎಸ್ಐ ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ' title=

ಚಿತ್ರದುರ್ಗ : ಒಮ್ಮೆ ಅನ್ಯಾಯ ಆಗಿದೆ ಅಂದರೆ ವ್ಯಾಪಕತೆ ಗೊತ್ತಾಗಲ್ಲ. ಅದೇ ಅಭ್ಯರ್ಥಿಗಳಿಗೆ ಪರೀಕ್ಷೆ ನೀಡುತ್ತೇವೆ. ನೋಟಿಫಿಕೇಷ್ ಕ್ಯಾನ್ಸಲ್ ಮಾಡಿಲ್ಲ, ಮರು ಪರೀಕ್ಷೆ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪಿಎಸ್ಐ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಜಿಲ್ಲೆಯ ಬೀಮಸಮುದ್ರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಯಾವುದೇ ಕಳಂಕಿತ ಎಡಿಜಿಪಿ ಅವರಲ್ಲ, ಸಿದ್ದರಾಮಯ್ಯ ಅವರು ಹೇಳುತ್ತಾರೆ. ಕೇವಲ ವರ್ಗಾವಣೆ ಮಾತ್ರ ಅಷ್ಟೇ, ಕಳಂಕಿತರಲ್ಲ ಎಂದು ಪ್ರತಿಕ್ರಿಯೆಯಿಸಿದ್ದಾರೆ. 

ಇದನ್ನೂ ಓದಿ : ‘ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರಗಳು ಯಶಸ್ಸು ಕಾಣುತ್ತಿರುವುದಕ್ಕೆ ಹಿಂದಿ ನಟರು ನಂಜು ಕಾರುತ್ತಿದ್ದಾರೆ’

ಭಾಷ ರಾಜಕಾರಣ ಬಿಜೆಪಿ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಸಿದ್ದರಾಮಯ್ಯ ಸುದೀಪ್ ಟ್ವೀಟ್ ಗೆ ಹಸಿವಿನಿಂದ ಭಾಷೆ ಬಗ್ಗೆ ಮಾತಾಡಿದ್ದಾರೆ. ನಾವು ಭಾಷೆ ಬಗ್ಗೆ ಅಭಿಮಾನದಿಂದ ಮಾತನಾಡಿದ್ರು ಸಹಿಸಲ್ಲ ಎಂದು ಗುಡುಗಿದರು.

ರಾಗಿ ಖರೀದಿ ಬಗ್ಗೆ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ, ಈ ಕುರಿತು ಚರ್ಚೆ ಮಾಡಿದ್ದೇನೆ, ನಾಳೆ ನಾನು ಹೋಗುತ್ತಿದ್ದೇನೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ನಾಳೆ ನಾಡಿದ್ದು ತೀರ್ಮಾನ ಮಾಡುತ್ತೇವೆ.  ಒಪ್ಪಿಗೆ ನೀಡಿದ ಬಳಿಕ ಹೆಚ್ಚುವರಿ ರಾಗಿ ಖರೀದಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : PSI ನೇಮಕಾತಿ ಹಗರಣ: ಸಂಜೆ 4ಗಂಟೆಯೊಳಗೆ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News