Big Breaking: PSI ಪರೀಕ್ಷೆ ನೇಮಕಾತಿ ರದ್ದು, ಮರು ಪರೀಕ್ಷೆಗೆ ತೀರ್ಮಾನ

ಹಣಕ್ಕಾಗಿ ಹುದ್ದೆಗಳು ಎನ್ನುವುದನ್ನು ಬಿಡಬೇಕು. ಅನೇಕ ಪರೀಕ್ಷೆಗಳಲ್ಲಿ ಇಂತಹದ್ದೇ ಆಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ನಿಯಮ ತರಲಿದೆ.

Written by - Zee Kannada News Desk | Last Updated : Apr 29, 2022, 12:56 PM IST
  • ಬೆಂಗಳೂರು ಸೇರಿ ಒಂದಕ್ಕಿಂತ ಹೆಚ್ಚು ಸೆಂಟರ್‍ಗಳಲ್ಲಿ ಅಕ್ರಮ
  • ಕಷ್ಟಪಟ್ಟು ಓದಿದ ಪ್ರತಿಭಾವಂತರಿಗೆ ಅನ್ಯಾಯವಾಗಬಾರದು
  • ಅಪಾಧಿತರನ್ನು ಹೊರತುಪಡಿಸಿ ಉಳಿದವರಿಗೆ ಶೀಘ್ರವೇ ಮರುಪರೀಕ್ಷೆ
Big Breaking: PSI ಪರೀಕ್ಷೆ ನೇಮಕಾತಿ ರದ್ದು, ಮರು ಪರೀಕ್ಷೆಗೆ ತೀರ್ಮಾನ title=
PSI ಪರೀಕ್ಷೆ ನೇಮಕಾತಿ ರದ್ದು

ಬೆಂಗಳೂರು: 545 PSI ಹುದ್ದೆಗಳಿಗೆ ನಡೆಸಲಾಗಿದ್ದು ಪರೀಕ್ಷಾ ನೇಮಕಾತಿಯನ್ನು ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ನಾನೇಂದ್ರ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿಗಳನ್ನು ಹೊರತುಪಡಿಸಿ, ಉಳಿದವರಿಗೆ ಶೀಘ್ರವೇ ಮರು ಪರೀಕ್ಷೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಇದಲ್ಲದೆ ಇನ್ನಿತರ ಆರೋಪಿಗಳಾದ ಅರ್ಚನಾ, ದಿವ್ಯಾ, ಚಾಲಕ ಸದ್ದಾಂ, ಸುನಂದಾರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರನ್ನೂ ರಾಜ್ಯಕ್ಕೆ ಕರೆತರಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಸೆಂಟರ್‍ನಲ್ಲಿ ಅವ್ಯವಹಾರ ನಡೆದಿರುವುದು ಮನದಟ್ಟಾಗಿದೆ. ಬೆಂಗಳೂರಿನ ಸೆಂಟರ್‍ನಲ್ಲೂ‌ ಹಗರಣ ಆಗಿದೆ. ಹೀಗಾಗಿ ರಾಜ್ಯ ಸರ್ಕಾರವು ಇಡೀ ಪರೀಕ್ಷೆಯನ್ನೇ ರದ್ದುಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐದು ಸಾವಿರ ಜನರಿಗೆ ಇಫ್ತಾರ್ ಕೂಟ ಆಯೋಜಿಸಿದ ಸಚಿವ ಎಂಟಿಬಿ ನಾಗರಾಜ್

ಒಟ್ಟು 54,289 ಅಭ್ಯರ್ಥಿಗಳು ಪಿಎಸ್‍ಐ ಪರೀಕ್ಷೆಗೆ ಕುಳಿತಿದ್ದರು. ಅವರಿಗೆ ಇನ್ನೊಮ್ಮೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಪಾಧಿತರನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಶೀಘ್ರವೇ ಮರುಪರೀಕ್ಷೆ ನಡೆಯಲಿದೆ

ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಈ ಬಾರಿ ಆಯ್ಕೆಯಾಗಿರುವ ಪ್ರಾಮಾಣಿಕರಿಗೆ ಇದರಿಂದ ದೊಡ್ಡ ಅನ್ಯಾಯ ಆಗುತ್ತದೆ. ಹೀಗಾಗಿಯೇ ಶೀಘ್ರವೇ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಆರಗ ಜ್ನಾನೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy : 'ಹುಬ್ಬಳ್ಳಿಯ ಪೊಲೀಸರನ್ನು ನಾನು ಅಭಿನಂದಿಸುತ್ತೆನೆ'

ಹೊಸ ಟೆಕ್ನಾಲಜಿಯಿಂದ ಅಕ್ರಮ

ಆರೋಪಿಗಳು ಹೊಸ ಟೆಕ್ನಾಲಜಿಯಿಂದ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆ. ಇದರ ಸಮಗ್ರ ತನಿಖೆಯಾಗಲಿದ್ದು, ಇದನ್ನು ಹೇಗೆ ನಿರ್ಭಂಧಿಸಬಹುದು ಎಂಬುದರ ಬಗ್ಗೆ ನಾವು ಪರಿಶೀಲಿಸುತ್ತೇವೆ. ಈ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ  ಕ್ರಮವಾಗಲಿದೆ. ಡಿಜಿಯವರು ನಮ್ಮ ಜೊತೆಯಲ್ಲೇ ಇದ್ದಾರೆ. ಇದರಲ್ಲಿ ಅಧಿಕಾರಿಗಳು ಇದ್ರೂ ಕ್ರಮ ತೆಗೆದುಕೊಳ್ತೇವೆ. ಈ ಬಾರಿ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ. ಎಷ್ಟು ಸೆಂಟರ್‍ಗಳಲ್ಲಿ ಪರೀಕ್ಷೆ ನಡೆಸಬೇಕೋ ಅನ್ನೋದನ್ನು ನಾವು ಚರ್ಚಿಸಿ ತೀರ್ಮಾನಿಸುತ್ತೇವೆ. ಆದರೆ, ಕಡಿಮೆ ಸೆಂಟರ್‍ಗಳಲ್ಲಿ ಪರೀಕ್ಷೆಯನ್ನು ನಡೆಸುತ್ತೇವೆ. ಇಲಾಖೆಯೇ ಪರೀಕ್ಷೆ ನಡೆಸಬೇಕಾ? ಅಥವಾ ಬೇರೆಯವರಿಗೆ ಕೊಡ್ಬೇಕಾ? ಅನ್ನೋದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಸರ್ಕಾರದಿಂದ ಮತ್ತಷ್ಟು ಕಠಿಣ ನಿಯಮ

ಹಣಕ್ಕಾಗಿ ಹುದ್ದೆಗಳು ಎನ್ನುವುದನ್ನು ಬಿಡಬೇಕು. ಅನೇಕ ಪರೀಕ್ಷೆಗಳಲ್ಲಿ ಇಂತಹದ್ದೇ ಆಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ನಿಯಮ ತರಲಿದೆ. ಕಠಿಣ ಪರಿಶ್ರಮ ಪಟ್ಟವರಿಗೆ ಅವಕಾಶ ಮಿಸ್ ಆಗ್ತಿದೆ. ಅಕ್ರಮ ಮಾಡಿದವರು ಸೆಲೆಕ್ಟ್ ಆಗ್ತಿದ್ದಾರೆ. ಇದಕ್ಕೆ ‌ಬ್ರೇಕ್ ಹಾಕೋಕೆ ಕಠಿಣ ನಿಯಮ ತರಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News