Rashmika Mandanna: ರಶ್ಮಿಕಾ ಮಂದಣ್ಣ ಇಷ್ಟೊಂದು ಫಿಟ್‌ ಆಗಿರಲು ಕಾರಣ ಇದೇ...

Rashmika Mandanna: 'ಪುಷ್ಪ' ಚಿತ್ರದಲ್ಲಿ ಸಿಂಪಲ್ ಆಗಿ ಕಾಣುವ ಶ್ರೀವಲ್ಲಿ ನಿಜ ಜೀವನದಲ್ಲಿ ಸಾಕಷ್ಟು ಹಾಟ್ ಮತ್ತು ಗ್ಲಾಮರಸ್ ಆಗಿದ್ದಾರೆ. ಶ್ರೀವಲ್ಲಿ ತನ್ನನ್ನು ಗ್ಲಾಮರಸ್ ಮತ್ತು ಟೋನ್ಡ್ ಫಿಗರ್ ಆಗಿ ಇರಿಸಿಕೊಳ್ಳಲು ಜಿಮ್‌ನಲ್ಲಿ ಸಖತ್‌ ವರ್ಕೌಟ್‌ ಮಾಡುತ್ತಾರೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ.

Written by - Chetana Devarmani | Last Updated : May 2, 2022, 04:15 PM IST
  • ಜಿಮ್‌ನಲ್ಲಿ ಸಖತ್‌ ವರ್ಕೌಟ್‌ ಮಾಡುವ ನಟಿ ರಶ್ಮಿಕಾ ಮಂದಣ್ಣ
  • ರಶ್ಮಿಕಾ ಮಂದಣ್ಣ ಇಷ್ಟೊಂದು ಫಿಟ್‌ ಆಗಿರಲು ಕಾರಣ ಇದೇ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ
Rashmika Mandanna: ರಶ್ಮಿಕಾ ಮಂದಣ್ಣ ಇಷ್ಟೊಂದು ಫಿಟ್‌ ಆಗಿರಲು ಕಾರಣ ಇದೇ...  title=
ರಶ್ಮಿಕಾ ಮಂದಣ್ಣ

Rashmika Mandanna: 'ಪುಷ್ಪ' ಚಿತ್ರದಲ್ಲಿ ಸಿಂಪಲ್ ಆಗಿ ಕಾಣುವ ಶ್ರೀವಲ್ಲಿ ನಿಜ ಜೀವನದಲ್ಲಿ ಸಾಕಷ್ಟು ಹಾಟ್ ಮತ್ತು ಗ್ಲಾಮರಸ್ ಆಗಿದ್ದಾರೆ. ಶ್ರೀವಲ್ಲಿ ತನ್ನನ್ನು ಗ್ಲಾಮರಸ್ ಮತ್ತು ಟೋನ್ಡ್ ಫಿಗರ್ ಆಗಿ ಇರಿಸಿಕೊಳ್ಳಲು ಜಿಮ್‌ನಲ್ಲಿ ಸಖತ್‌ ವರ್ಕೌಟ್‌ ಮಾಡುತ್ತಾರೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ.

ಇದನ್ನೂ ಓದಿ: Astro Tips for Money and Popularity: ಗ್ರಹಗಳನ್ನು ಈ ರೀತಿ ಸಂತೃಪ್ತಗೊಳಿಸಿದರೆ ರಾತೋ ರಾತ್ರಿ ಒಲಿದು ಬರಲಿದೆ ಅದೃಷ್ಟ..!

ಈ ವೈರಲ್ ವಿಡಿಯೋದಲ್ಲಿ ನಟಿ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಶ್ರೀವಲ್ಲಿ ಹಳದಿ ಬಣ್ಣದ ಶಾರ್ಟ್ಸ್ ಮತ್ತು ಬೂದು ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. 

ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಜೊತೆ ಮತ್ತೊಬ್ಬರು ಕಾಣಿಸಿಕೊಂಡಿರುವುದನ್ನು ನೀವು ನೋಡುತ್ತೀರಿ. ಇದರೊಂದಿಗೆ ರಶ್ಮಿಕಾ ಮಂದಣ್ಣಗೆ ತರಬೇತಿ ನೀಡುತ್ತಿರುವ ಹಿನ್ನೆಲೆಯಲ್ಲಿ ತರಬೇತುದಾರನ ಧ್ವನಿಯೂ ಬರುತ್ತಿದೆ. ತರಬೇತುದಾರರ ಮಾತು ಕೇಳಿ ರಶ್ಮಿಕಾ ಕೂಡ ನಿರಂತರವಾಗಿ ವ್ಯಾಯಾಮ ಮಾಡಿ ಬೆವರಿಳಿಸಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Voompla (@voompla)

 

ರಶ್ಮಿಕಾ ಮಂದಣ್ಣ ಅವರ ಈ ವಿಡಿಯೋ ಜಿಮ್‌ನಿಂದ ಬಂದಿದೆ. ಇದು ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರೇರೇಪಿಸುತ್ತದೆ. ರಶ್ಮಿಕಾ ಮಂದಣ್ಣ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಪ್ರತಿದಿನ, ನಟಿ ಸಾಮಾಜಿಕ ಮಾಧ್ಯಮದಲ್ಲಿ ಜಿಮ್‌ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದರಲ್ಲಿ ನಟಿ ವ್ಯಾಯಾಮ ಮಾಡುವುದನ್ನು ಕಾಣಬಹುದು.

ಇದನ್ನೂ ಓದಿ: Cucumber: ಸೌತೆಕಾಯಿ ತಿಂದ ಬಳಿಕ ಯಾಕೆ ನೀರು ಕುಡಿಯಬಾರದು?

'ಪುಷ್ಪಾ' ಚಿತ್ರದ ಶ್ರೀವಲ್ಲಿಯಾಘಿ ನಟಿಸಿದ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಸಿದ್ಧಾರ್ಥ್ ಮಲ್ಹೋತ್ರಾ ಅವರ 'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಇದಲ್ಲದೆ, ಅವರು ರಣಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. 2016 ರಲ್ಲಿ ಕನ್ನಡ ಚಿತ್ರ 'ಕಿರಿಕ್ ಪಾರ್ಟಿ' ಮೂಲಕ ರಶ್ಮಿಕಾ ಸಿನಿರಂಗಕ್ಕೆ ಕಾಲಿಟ್ಟರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News