ಬೆಂಗಳೂರು: ಮೋಹನ್ ಜುನೇಜ..ಬಹುಶಃ ಇಡೀ ದೇಶಕ್ಕೆ ಇವರ ಹೆಸರು ಪರಿಚಯ ಇದ್ದೇ ಇರುತ್ತೆ. ಯಾಕಂದ್ರೆ 'ಕೆಜಿಎಫ್' ಚಿತ್ರದಲ್ಲಿ ರಾಕಿಭಾಯ್ ಗುಣಗಾನ ಮಾಡಲು ಮೋಹನ್ ಜುನೇಜ ಹೇಳುವ ಡೈಲಾಗ್ ವರ್ಲ್ಡ್ ಫೇಮಸ್ ಆಗಿತ್ತು. 'ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್.ಆದರೆ ಅವನು ಒಬ್ಬನೇ ಬರೋನು, ಮಾನ್ಸ್ಟರ್' ಅಂತಾ ಡೈಲಾಗ್ ಹೊಡೆದು ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು ಮೋಹನ್ ಜುನೇಜ.ಆದರೆ ದುರಾದೃಷ್ಟ ಏನಂದ್ರೆ ಇಂತಹ ಅತ್ಯದ್ಭುತ ನಟನನ್ನು ಕನ್ನಡ ಚಿತ್ರರಂಗ ಇಂದು ಕಳೆದುಕೊಂಡಿದೆ.
ಇದನ್ನೂ ಓದಿ: IPL 2022 : 'ಸಿಎಸ್ಕೆ ಕೆಟ್ಟ ಸ್ಥಿತಿಯನ್ನು ಕಂಡು ಸಿಟ್ಟಿಗೆದ್ದ ಸೆಹ್ವಾಗ್'
'ಕೆಜಿಎಫ್' ಮೂಲಕ ಇಡೀ ದೇಶ ಹಾಗೂ ಜಗತ್ತಿಗೆ ಚಿರಪರಿಚಿತ ಎಂಬಂತಾದ ಮೋಹನ್ ಜುನೇಜ ಅವರು ಆರಂಭದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದು ಧಾರಾವಾಹಿಗಳ ಮೂಲಕ.ಅನೇಕ ಧಾರಾವಾಹಿಗಳಲ್ಲಿ ಬಣ್ಣಹಚ್ಚಿ ಅವರು ಬದುಕಿನ ಬಂಡಿ ಸಾಗಿಸುತ್ತಿದ್ದರು.ಅದ್ರಲ್ಲೂ 'ವಠಾರ' ಧಾರಾವಾಹಿ ವೀಕ್ಷಕರು ಎಂದೂ ಮರೆಯಲಾಗದ ವ್ಯಕ್ತಿ ಈ ಮೋಹನ್ ಜುನೇಜ.
1000 ಎಪಿಸೋಡ್..!
ಹೌದು, ಕನ್ನಡ ಚಿತ್ರರಂಗದಲ್ಲಿ ಇದೀಗ ಹೇಗೆ 'ಕೆಜಿಎಫ್' ಹೊಸ ಇತಿಹಾಸ ಬರೆದಿದೆಯೋ.ಅದೇ ರೀತಿ 2000ರ ಆಸುಪಾಸಿನಲ್ಲಿ 'ವಠಾರ' ಧಾರಾವಾಹಿ ಹೊಸ ಇತಿಹಾಸ ಸೃಷ್ಟಿಸಿತ್ತು.ಬರೋಬ್ಬರಿ 1000 ಎಪಿಸೋಡ್ ಪೂರೈಸಿದ ಮೊದಲ ಧಾರಾವಾಹಿ ಎಂಬ ಹೆಗ್ಗಳಿಕೆ ಇದೇ ಸೀರಿಯಲ್ಗೆ ಸಲ್ಲುತ್ತದೆ.ಹಾಗೇ 'ವಠಾರ' ಧಾರಾವಾಹಿಯಲ್ಲಿ ಮೋಹನ್ ಜುನೇಜ ಅವರ ಪಾತ್ರ ಎಂದಿಗೂ ಮರೆಯಲಾಗದು.
ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸೌರವ್ ಗಂಗೂಲಿ...? ಗಂಗೂಲಿ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿರುವ ಅಮಿತ್ ಶಾ..!
'ಕೆಜಿಎಫ್' ರೆಕಾರ್ಡ್..!
ಕನ್ನಡ ಚಿತ್ರಗಳಿಗೆ ವರ್ಲ್ಡ್ ಲೆವೆಲ್ ಮಾರ್ಕೆಟ್ ಕ್ರಿಯೇಟ್ ಮಾಡಿದ 'ಕೆಜಿಎಫ್' ಸಿನಿಮಾ, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಹಾಗೇ 'ಕೆಜಿಎಫ್' ಚಾಪ್ಟರ್ 1 ರಿಲೀಸ್ ಆದಾಗ ಕನ್ನಡದ ಡೈಲಾಗ್ ಜಗತ್ತಿಗೆ ಪರಿಚಿತವಾಗಿತ್ತು.ಆ ಡೈಲಾಗ್ ಹೊಡೆದಿದ್ದು ಬೇರಾರೂ ಅಲ್ಲ, ಇದೇ ಮೋಹನ್ ಜುನೇಜ. 'ಕೆಜಿಎಫ್'ನಲ್ಲಿ ರಾಕಿಭಾಯ್ ಪಾತ್ರ ನಿರ್ವಹಿಸಿದ್ದ ಯಶ್ ಅವರ ಕುರಿತು ಡೈಲಾಗ್ ಒಂದನ್ನು ಹೊಡೆಯುವ ಮೋಹನ್ ಜುನೇಜ, 'ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್. ಆದರೆ ಅವನು ಒಬ್ಬನೇ ಬರೋನು, ಮಾನ್ಸ್ಟರ್' ಅಂತಾ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರು.
ಹೀಗೆ 'ಕೆಜಿಎಫ್' ಚಾಪ್ಟರ್ 1ನಲ್ಲಿ ಮಿಂಚಿ 'ಕೆಜಿಎಫ್-2'ನಲ್ಲೂ ತಮ್ಮ ನಟನೆ ತಾಕತ್ ತೋರಿಸಿದ್ದ ಕನ್ನಡದ ಪ್ರತಿಭಾವಂತ ನಟ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಗಣೇಶ್ ನಟನೆಯ ಚೆಲ್ಲಾಟ ಸಿನಿಮಾದಲ್ಲೂ ಮೋಹನ್ ಜುನೇಜ ಅತ್ಯದ್ಭುತ ಅಭಿನಯ ಮಾಡಿದ್ದರು. ಆದರೆ ಅದೆಲ್ಲವೂ ಈಗ ನೆನಪು ಮಾತ್ರ ಎಂಬುದೇ ಬೇಸರದ ಸಂಗತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.