Punjab Kings : ಈ ವ್ಯಕ್ತಿಯ ಹಣೆಬರಹವನ್ನೆ ಬದಲಿಸಿದ IPL 2022 : ಚಿಟಿಕೆಯಲ್ಲಿ ₹2 ಕೋಟಿ ಗಳಿಸಿದ

ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಅವರ ಬದುಕು ಐಪಿಎಲ್ ನಿಂದ ರಾತ್ರೋರಾತ್ರಿ ಬದಲಾಗಿದೆ. ಹೇಗೆ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : May 8, 2022, 07:54 PM IST
  • ರಮೇಶ್ ಕುಮಾರ್ ಬದುಕನ್ನೇ ಬದಲಿಸಿದ ಐಪಿಎಲ್
  • ಮ್ಯಾಚ್ ಸೋತ ಪಂಜಾಬ್ ಕಿಂಗ್ಸ್
  • ಕಳಪೆ ಫಾರ್ಮ್‌ನಿಂದ ಹೋರಾಡುತ್ತಿದೆ ಪಂಜಾಬ್ ಕಿಂಗ್ಸ್
Punjab Kings : ಈ ವ್ಯಕ್ತಿಯ ಹಣೆಬರಹವನ್ನೆ ಬದಲಿಸಿದ IPL 2022 : ಚಿಟಿಕೆಯಲ್ಲಿ ₹2 ಕೋಟಿ ಗಳಿಸಿದ title=

Punjab Kings : ಐಪಿಎಲ್ 2022 ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರಿಕೆಟ್ ಲೀಗ್ ಆಗಿದೆ. ಐಪಿಎಲ್ 2022 ತನ್ನ ಕೊನೆಯ ಲೀಗ್ ಹಂತದಲ್ಲಿದೆ. ಇಲ್ಲಿ ಪ್ರತಿನಿತ್ಯ ರೋಚಕ ಪಂದ್ಯಗಳನ್ನು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ. ಇದೀಗ ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಅವರ ಬದುಕು ಐಪಿಎಲ್ ನಿಂದ ರಾತ್ರೋರಾತ್ರಿ ಬದಲಾಗಿದೆ. ಹೇಗೆ ಇಲ್ಲಿದೆ ನೋಡಿ..

ರಮೇಶ್ ಕುಮಾರ್ ಬದುಕನ್ನೇ ಬದಲಿಸಿದ ಐಪಿಎಲ್

ಮಾಧ್ಯಮ ವರದಿಗಳ ಪ್ರಕಾರ, ಬಿಹಾರದ ಸರನ್ ಜಿಲ್ಲೆಯ ನಿವಾಸಿ ರಮೇಶ್ ಕುಮಾರ್ ಡ್ರೀಮ್ ಇಲೆವೆನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ರಚಿಸುವ ಮೂಲಕ 2 ಕೋಟಿ ರೂ. ಗಳಿಸಿದ್ದಾರೆ. ಅದರಲ್ಲಿ ಅವರು ಕಗಿಸೊ ರಬಾಡ ಅವರನ್ನು ನಾಯಕನಾಗಿ ಮತ್ತು ಶಿಖರ್ ಧವನ್ ಅವರನ್ನು ಉಪನಾಯಕನ್ನಾಗಿ ಮಾಡಿದ್ದಾರೆ. ಪಂದ್ಯ ಮುಗಿದ ನಂತರ ರಮೇಶ್ ತಂಡ ಇಡೀ ದೇಶದಲ್ಲಿ ನಂಬರ್ ಒನ್ ಆಗಿ ಉಳಿಯಿತು. ರಮೇಶ್ 2 ಕೋಟಿ ಗೆದ್ದ ತಕ್ಷಣ ಇಡೀ ಕುಟುಂಬದಲ್ಲಿ ಸಂತಸದ ಅಲೆ ಕಂಡು ಬಂದಿದೆ. ಯಾರ ಅದೃಷ್ಟ ಎಲ್ಲಿದೆಯೂ ಗೊತ್ತಿಲ್ಲ ಆದ್ರೆ, ರಮೇಶ್ ಅದೃಷ್ಟ ಡ್ರೀಮ್ ಇಲೆವೆನ್ ನಲ್ಲಿ ಖುಲಾಯಿಸಿದೆ.

ಇದನ್ನೂ ಓದಿ : RCB vs SRH : ಡಕ್ ಔಟ್ ಆದ ವಿರಾಟ್ ಕೊಹ್ಲಿ : ಕೋಪಗೊಂಡ ಫ್ಯಾನ್ಸ್ ಹೇಳಿದ್ದು ಹೀಗೆ!

ಮ್ಯಾಚ್ ಸೋತ ಪಂಜಾಬ್ ಕಿಂಗ್ಸ್

ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲನುಭವಿಸಬೇಕಾಯಿತು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಇಲ್ಲಿ  ಜೈಸ್ವಾಲ್ 68 ರನ್ ಕೊಡುಗೆ ನೀಡಿದರು. ಅವರಿಂದಲೇ ರಾಜಸ್ಥಾನ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. ಶಿಮ್ರಾನ್ ಹೆಟ್ಮೆಯರ್ 31 ರನ್‌ಗಳ ಇನಿಂಗ್ಸ್‌ ಆಡಿದರು. ಪಂಜಾಬ್ ಪರ ಜಾನಿ ಬೈರ್‌ಸ್ಟೋ ಹೊರತುಪಡಿಸಿ ಯಾರೂ ಇನ್ನಿಂಗ್ಸ್‌ ಆಡಲಿಲ್ಲ. ಬೈರ್‌ಸ್ಟೋವ್ 56 ರನ್ ಗಳಿಸಿದರು.

ಕಳಪೆ ಫಾರ್ಮ್‌ನಿಂದ ಹೋರಾಡುತ್ತಿದೆ ಪಂಜಾಬ್ ಕಿಂಗ್ಸ್ 

ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಅತ್ಯಂತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ತಂಡವು 11 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದಿದೆ ಮತ್ತು ತಂಡವು 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದೆ. ಪಂಜಾಬ್ ಕಿಂಗ್ಸ್ ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಸ್ವತಃ ನಾಯಕ ಮಯಾಂಕ್ ಅಗರ್ವಾಲ್ ಕಳಪೆ ಫಾರ್ಮ್‌ನಿಂದ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ : Delhi Capitals ನೆಟ್‌ ಬೌಲರ್‌ಗೆ ಕೋವಿಡ್‌: ಇಂದು ನಡೆಯುತ್ತಾ ಪಂದ್ಯ?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News