Gold Coin ATM : ಈ ATM ನಿಂದ ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ, ಅದು ಹೇಗೆ?

ತನಿಷ್ಕ್ ಜ್ಯುವೆಲ್ಲರ್ಸ್ 'ಗೋಲ್ಡ್ ಕಾಯಿನ್ ಎಟಿಎಂ' ಬಿಡುಗಡೆ ಮಾಡಿದೆ. ಈ ಗೋಲ್ಡ್ ಕಾಯಿನ್ ಎಟಿಎಂ ಅನ್ನು ಪರಿಚಯಿಸಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

Written by - Channabasava A Kashinakunti | Last Updated : May 9, 2022, 04:06 PM IST
  • ನೀವು ಪಡೆಯಬಹುದು 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು
  • 21 ಚಿನ್ನದ ಅಂಗಡಿಗಳಲ್ಲಿ ATM ಅಳವಡಿಸಲಾಗಿದೆ
  • ಅದು ಹೇಗೆ ಕೆಲಸ ಮಾಡುತ್ತದೆ?
Gold Coin ATM : ಈ ATM ನಿಂದ ನೋಟುಗಳ ಬದಲಾಗಿ ಚಿನ್ನದ ನಾಣ್ಯ ಬರುತ್ತೆ, ಅದು ಹೇಗೆ? title=

Tanishq Gold Coin ATM : ನಿಮಗೆ ಗೊತ್ತಿರುವ ಹಾಗೆ, ಎಟಿಎಂನಲ್ಲಿ ಹಣ ಡ್ರಾ ಮಾಡಬಹುದು ಅಂತ, ಆದರೆ  ಈಗ ಚಿನ್ನದ ನಾಣ್ಯಗಳು ಕೂಡ ಬರುತ್ತವೆ ಎಂದರೆ ನಂಬುತ್ತಿರಾ. ಇದು ನಿಮಗೆ ವಿಚಿತ್ರ ಅನಿಸಬಹುದು ಆದರೆ ಇದು ಸತ್ಯ. ಹೌದು, ತನಿಷ್ಕ್ ಜ್ಯುವೆಲ್ಲರ್ಸ್ 'ಗೋಲ್ಡ್ ಕಾಯಿನ್ ಎಟಿಎಂ' ಬಿಡುಗಡೆ ಮಾಡಿದೆ. ಈ ಗೋಲ್ಡ್ ಕಾಯಿನ್ ಎಟಿಎಂ ಅನ್ನು ಪರಿಚಯಿಸಿದೆ. ಚಿನ್ನದ ನಾಣ್ಯಗಳನ್ನು ಪಡೆಯಲು ಬಯಸುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ನೀವು ಪಡೆಯಬಹುದು 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು 

ನೀವು ಅಥವಾ ನಿಮ್ಮ ಕುಟುಂಬದ ಯಾರಾದರೂ ಚಿನ್ನದ ನಾಣ್ಯಗಳನ್ನು ಖರೀದಿಸಲು ಬಯಸಿದರೆ, ಈಗ ನೀವು ಗುಂಪಿನಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಹೌದು, ಈಗ ನೀವು ಎಟಿಎಂನಿಂದ ಹಣ ಪಡೆಯುವಂತೆ, ಗೋಲ್ಡ್ ಕಾಯಿನ್ ಎಟಿಎಂನಿಂದ ಚಿನ್ನದ ನಾಣ್ಯಗಳನ್ನು ಪಡೆಯಬಹುದು. ತನಿಷ್ಕ್ ಆರಂಭಿಸಿರುವ ಈ ಎಟಿಎಂನಿಂದ 1 ಗ್ರಾಂ ಮತ್ತು 2 ಗ್ರಾಂನ 24 ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು ಅಥವಾ ಡ್ರಾ ಮಾಡಬಹುದು.

ಇದನ್ನೂ ಓದಿ : ಪಡಿತರ ಚೀಟಿದಾರರರೇ ಗಮನಿಸಿ..! ಜೂನ್ ತಿಂಗಳಿಂದ ಪಡಿತರ ಪೂರೈಕೆಯಲ್ಲಿ ಬದಲಾವಣೆ

21 ಚಿನ್ನದ ಅಂಗಡಿಗಳಲ್ಲಿ ATM ಅಳವಡಿಸಲಾಗಿದೆ

ಆಯ್ದ 21 ಆಭರಣ ಶೋರೂಂಗಳಲ್ಲಿ ತನಿಷ್ಕ್ ನಿಂದ ಗೋಲ್ಡ್ ಕಾಯಿನ್ ಎಟಿಎಂ ಅಳವಡಿಸಿದೆ. ಕಳೆದ ದಿನಗಳಲ್ಲಿ ಕಂಪನಿ ನೀಡಿದ ಮಾಹಿತಿ ಪ್ರಕಾರ ಗೋಲ್ಡ್ ಕಾಯಿನ್ ಎಟಿಎಂಗಳಿಂದ 25 ಲಕ್ಷ ಮೌಲ್ಯದ ಚಿನ್ನದ ನಾಣ್ಯಗಳು ಬುಕ್ ಆಗಿವೆ. ಈ ಚಿನ್ನ ನೀಡುವ ಯಂತ್ರ ಬ್ಯಾಂಕ್ ಎಟಿಎಂನಂತೆ ಕೆಲಸ ಮಾಡುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ?

ಕಂಪನಿ ನೀಡಿರುವ ಮಾಹಿತಿಯಲ್ಲಿ 'ತನಿಷ್ಕ್ ಗೋಲ್ಡ್ ಕಾಯಿನ್ ಎಟಿಎಂ' ಬ್ಯಾಂಕ್ ಎಟಿಎಂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಗ್ರಾಹಕರ ಪರವಾಗಿ ಚಿನ್ನದ ನಾಣ್ಯವನ್ನು ಆಯ್ಕೆ ಮಾಡುವಾಗ, ಯಂತ್ರದ ಕಡೆಯಿಂದ ಹಣದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಮತ್ತು ಪಾವತಿಯ ಆಯ್ಕೆಯು ಲಭ್ಯವಿದೆ. ಪಾವತಿಯ ಮೇಲೆ, ಈ ಯಂತ್ರವು ಪ್ಯಾಕ್ ಮಾಡಿದ ಚಿನ್ನದ ನಾಣ್ಯವನ್ನು ಡ್ರಾ ಮಾಡುತ್ತದೆ.

ಇದನ್ನೂ ಓದಿ : Small Business idea: ಕರಿಮೆಣಸು ವ್ಯವಸಾಯದಲ್ಲಿ ಕಡಿಮೆ ಹೂಡಿಕೆ ಮಾಡಿ, ಲಕ್ಷಾಂತರ ರೂ. ಗಳಿಸಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News