ಆಕಾಶ್ ವುಕೋಟಿ ಎಂಬ ಪುಟ್ಟ ಬಾಲಕನ ಜ್ಞಾನ ನೋಡಿದ್ರೆ ಎಂಥವರೂ ಬೆರಗಾಗುತ್ತಾರೆ. ಟೆಕ್ಸಾಸ್‌ನ ಸ್ಯಾನ್ ಏಂಜೆಲೋದಲ್ಲಿ ನೆಲೆಸಿರುವ ಇಂಡೋ ಅಮೇರಿಕನ್ ಆಕಾಶ್, ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನ ವಿಷಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ಪುಟ್ಟ ವಯಸ್ಸಿನಲ್ಲೇ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಕಾಂಪಿಟೇಷನ್‌ಗೆ ಅರ್ಹತೆ ಪಡೆದಿದ್ದಾರೆ. ಮೊದಲ ಬಾರಿಗೆ ಇವರು ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದು, ಮಾರ್ಚ್ 2016 ರಲ್ಲಿ ಎನ್‌ಬಿಸಿ ಟಿವಿ ನಡೆಸಿಕೊಡುವ ಶೋ ಲಿಟಲ್ ಬಿಗ್ ಶಾಟ್ಸ್‌ನಲ್ಲಿ.
ಇದನ್ನು ಓದಿ: ಬ್ಲಡ್ ಶುಗರ್ ನಿಯಂತ್ರಣಕ್ಕೆ ಸರಳ ಮನೆ ಮದ್ದು, ತಕ್ಷಣ ಸಿಗಲಿದೆ ಪರಿಹಾರ
ಆಕಾಶ್ ಅವರು 2 ವರ್ಷದವರಾಗಿದ್ದಾಗ ಮೊದಲ ಬಾರಿಗೆ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 3 ನೇ ವಯಸ್ಸಿನಲ್ಲಿ ಅಮೇರಿಕನ್ ಮೆನ್ಸಾಗೆ ಸೇರ್ಪಡೆಗೊಂಡ ಅವರು, 5 ನೇ ವಯಸ್ಸಿನಲ್ಲಿ ಡೇವಿಡ್ಸನ್ ಯಂಗ್ ಸ್ಕಾಲರ್ ಆಗಿ ಹೊರಹೊಮ್ಮಿದರು. ಬಳಿಕ ತಮ್ಮ 6ನೇ ವಯಸ್ಸಿನಲ್ಲಿ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀನಲ್ಲಿ ಭಾಗವಹಿಸಿದ್ದರು. 2018, 2019 ಮತ್ತು 2021ರಲ್ಲಿಯೂ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀಸ್‌ನಲ್ಲಿ ಸ್ಪರ್ಧಿಸಿದರು. ಫೆಬ್ರವರಿಯಲ್ಲಿ ವುಕೋಟಿ ಅವರು 2022 ರ ಸ್ಯಾನ್ ಏಂಜೆಲೊ ಪ್ರಾದೇಶಿಕ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಗೆದ್ದರು. ಅವರು 5 ನೇ ಬಾರಿಗೆ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದ ಸಾಧಕರಾಗಿದ್ದಾರೆ.
ವುಕೋಟಿ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಟಲ್ ಬಿಗ್ ಶಾಟ್ಸ್ ಯುಕೆ-ಸೀಸನ್ 1 (2016), ಸೀಸನ್ 2 (2017) ನಂತಹ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸ್ಟೀವ್ ಹಾರ್ವೆ ನಡೆಸಿಕೊಡುವ ಟಾಕ್ ಶೋ, ಹ್ಯಾರಿಯವರು ನಡೆಸಿಕೊಡುವ ಟಿವಿ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.
ಅನೇಕ ಪ್ರಸಿದ್ಧ ವಾಹಿನಿಗಳಾದ ಸಿಎನ್‌ಎನ್ ಇಂಟರ್‌ನ್ಯಾಶನಲ್, ಸಿಟಿವಿ ಕೆನಡಾ, ಆಸ್ಟ್ರೇಲಿಯಾದ ದಿ ಮಾರ್ನಿಂಗ್ ಶೋ ಆಫ್ ಸೆವೆನ್ ನೆಟ್‌ವರ್ಕ್‌ನ, ಹೈದರಾಬಾದ್‌ನ ಟಿವಿ 9 ತೆಲುಗು ಚಾನೆಲ್‌ಗಳು ಆಕಾಶ್ ಅವರನ್ನು ಇಂಟರ್‌ವ್ಯೂ ಮಾಡಿದೆ. ಇನ್ನು ವುಕೋಟಿ HBO ಮತ್ತು BBCಯ ಸಾಕ್ಷ್ಯಚಿತ್ರ ʼದಿ ಹ್ಯೂಮನ್ ಬಾಡಿ: ಸೀಕ್ರೆಟ್ಸ್ ಆಫ್ ಯುವರ್ ಲೈಫ್ ರಿವೀಲ್ಡ್ʼನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರ್ಯಾಂಟ್ ಗುಂಬೆಲ್ ಅವರ ರಿಯಲ್ ಸ್ಪೋರ್ಟ್ಸ್‌ನ ಸಂಚಿಕೆ 231 "ಬ್ರೈನ್ ಗೇಮ್ಸ್ ಆಂಡ್ ಮೆಂಟಲ್ ಅಥ್ಲೀಟ್ಸ್" ಶೀರ್ಷಿಕೆಯ ಶೋನಲ್ಲಿ ಭಾಗವಹಿಸಿದ್ದರು.
ಜೂನ್ 3, 2020 ರಂದು ನೆಟ್‌ಫ್ಲಿಕ್ಸ್‌ನಲ್ಲಿ 190 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾದ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಸ್ಪೆಲಿಂಗ್ ದಿ ಡ್ರೀಮ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಪ್ರಪಂಚದಾದ್ಯಂತ ಉತ್ತಮ ವಿಮರ್ಶೆಗಳನ್ನು ಗಳಿಸಿದೆ.
ಆಕಾಶ್ ವುಕೋಟಿ ಅವರು ಚಂದ್ರಕಲಾ ಜಾಂಡ್ಯಂ ಮತ್ತು ಡಾ. ಕೃಷ್ಣ ಎಂ ವುಕೋಟಿ ದಂಪತಿಯ ಪುತ್ರ. ಇವರು ಆಂಧ್ರಪ್ರದೇಶ ಮೂಲದವರಾಗಿದ್ದು, ಸದ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿದ್ದಾರೆ. ಆಕಾಶ್ ಅವರಿಗೆ ಓರ್ವ ಸಹೋದರಿಯಿದ್ದು ಅವರ ಹೆಸರು ಅಮೃತಾ. ಅಮೃತಾ ಮತ್ತು ಆಕಾಶ್ ವುಕೋಟಿ ಇಬ್ಬರೂ 2019 ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ನಲ್ಲಿ ಸ್ಪರ್ಧಿಸಿದ್ದಾರೆ.
ವುಕೋಟಿ ಅವರು ಸ್ಯಾನ್ ಏಂಜೆಲೋದಲ್ಲಿನ ಚಿಲ್ಡ್ರನ್ ಮಿರಾಕಲ್ ನೆಟ್‌ವರ್ಕ್, ವಿಕಿಪೀಡಿಯಾ, ಹರಿಕೇನ್ ಹಾರ್ವೆ ರಿಲೀಫ್ ಫಂಡ್, ತೆಲಂಗಾಣ ಸಿಎಂ ಪರಿಹಾರ ನಿಧಿ, Water.org ಮತ್ತು ಕೇರಳ ಪ್ರವಾಹ ಪರಿಹಾರ ನಿಧಿಯಂತಹ ವಿವಿಧ ಲಾಭರಹಿತ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನ ಮೃತ ಸಿಬ್ಬಂದಿಯ ಕುಟುಂಬಗಳನ್ನು ಬೆಂಬಲಿಸುವ ಭಾರತ ಸರ್ಕಾರದ ಉಪಕ್ರಮವಾದ ಭಾರತ್ ಕೆ ವೀರ್‌ಗೆ ಅವರು ದೇಣಿಗೆ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡಲು ವುಕೋಟಿ ಲಾಭರಹಿತ ಸಂಸ್ಥೆಗಳಾದ ಅಮೇರಿಕನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತ ಸರ್ಕಾರದ ಪಿಎಂ ಕೇರ್ಸ್ ನಿಧಿಗೆ ಸಹ ದೇಣಿಗೆ ನೀಡಿದ್ದಾರೆ.
ವುಕೋಟಿಗೆ ಲಭಿಸಿದ ಪ್ರಮುಖ ಪ್ರಶಸ್ತಿಗಳು:
2017ರಲ್ಲಿ ಸೈಂಟ್ ಲೂಯಿಸ್‌ನಲ್ಲಿ ನಡೆದ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ ಕಾರ್ಯಕ್ರಮದಲ್ಲಿ ಸ್ಪೆಲ್ಲಿಂಗ್ ಆಂಡ್ ಮತ್ತು ಲ್ಯಾಂಗುಯೇಜ್ ವಿಭಾಗದಿಂದ ವಿಶೇಷ ಮಾನ್ಯತೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇನ್ನು 2017ರಲ್ಲಿ ಉತ್ತರ ಅಮೇರಿಕಾ ತೆಲುಗು ಸೊಸೈಟಿಯು ʼಗೌರವ ಶೀರ್ಷಿಕೆ - ಧಾರಣ ವಾಮನʼ ಪ್ರಶಸ್ತಿಯನ್ನು ನೀಡಿದೆ. 2020ರಲ್ಲಿ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ಸ್ ಕೊಡಮಾಡುವ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಅವಾರ್ಡ್ 2020ಕ್ಕೆ ಭಾಜನರಾಗಿದ್ದಾರೆ.
ಇದನ್ನು ಓದಿ: ಮೇ 19 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ
ಪ್ರಾಯ ಸಣ್ಣದಾದರೂ ಸಾಧನೆ ಮಾತ್ರ ಬೃಹದಾಕಾರವಾಗಿದೆ ಎನ್ನಬಹುದು. ಆಕಾಶ್ ವುಕೋಟಿ ವಿದೇಶದಲ್ಲಿಯೂ ಭಾರತದ ಕೀರ್ತಿಯನ್ನು ಸಾರುತ್ತಿರುವುದು ಸಂತಸದ ಸಂಗತಿ. ಈ ಬಾಲಕ ಇನ್ನಷ್ಟು ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.