FD Rules: ಸ್ಥಿರ ಠೇವಣಿ ನಿಯಮಗಳಲ್ಲಿ ಬದಲಾವಣೆ ಮಾಡಿದ ಆರ್ಬಿಐ, ತಿಳಿದು ಹಾನಿಯಿಂದ ಪಾರಾಗಿ

FD Rules: ಭಾರತೀಯ ರಿಸರ್ವ್ ಬ್ಯಾಂಕ್ ಎಫ್ ಡಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಮ್ಯಾಚುರಿಟಿ ಅವಧಿ ಮುಗಿದ ಬಳಿಕ ಒಂದು ವೇಳೆ ನೀವು  ನಿಮ್ಮ ಠೇವಣಿಯನ್ನು ಕ್ಲೇಮ್ ಮಾಡದೆ ಹೋದರೆ ನಿಮಗೆ ಎಫ್ಡಿ ಬಡ್ಡಿಯ ಬದಲು ಉಳಿತಾಯ ಖಾತೆಯ ಬಡ್ಡಿ ಸಿಗಲಿದೆ. ಹೀಗಿರುವಾಗ ದೀರ್ಘ ಕಾಲದ ಠೇವಣಿ ಮೇಲೆ ನಿಮಗೆ ಹಾನಿ ಸಂಭವಿಸಲಿದೆ. 

Written by - Nitin Tabib | Last Updated : May 15, 2022, 07:51 PM IST
  • ಸ್ಥಿರ ಠೇವಣಿಗಳ ನಿಯಮಗಳಲ್ಲಿ ಬದಲಾವಣೆ ತಂದ ಕೇಂದ್ರೀಯ ಬ್ಯಾಂಕ್
  • ಸ್ಥಿರ ಠೇವಣಿ ಆರಂಭಿಸುವ ಮೊದಲು ಈ ನಿಯಮ ತಿಳಿದುಕೊಳ್ಳಲು ಮರೆಯಬೇಡಿ
  • ನಿಯಮ ತಿಳಿದುಕೊಂಡು ಸಂಭವನೀಯ ಹಾನಿಯಿಂದ ಪಾರಾಗಿ
FD Rules: ಸ್ಥಿರ ಠೇವಣಿ ನಿಯಮಗಳಲ್ಲಿ ಬದಲಾವಣೆ ಮಾಡಿದ ಆರ್ಬಿಐ, ತಿಳಿದು ಹಾನಿಯಿಂದ ಪಾರಾಗಿ title=
FD Rules

FD Rules: ನೀವೂ ಕೂಡ ಕಾಲಕಾಲಕ್ಕೆ ಸ್ಥಿರ ಠೇವಣಿ (ಎಫ್‌ಡಿ) ನಲ್ಲಿ ಹೂಡಿಕೆ ಮಾಡುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗ. ಹೌದು, FD ಗೆ ಸಂಬಂಧಿಸಿದ ನಿಯಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬದಲಾವಣೆ ತಂದಿದೆ. ಹೊಸ ನಿಯಮಗಳನ್ನು ಆರ್‌ಬಿಐ ಈಗಾಗಲೇ ಜಾರಿಗೆ ಕೂಡ ತಂದಿದೆ. ಕಳೆದ ಕೆಲವು ದಿನಗಳಲ್ಲಿ, ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಅದಕ್ಕಾಗಿಯೇ ಎಫ್‌ಡಿ ಮಾಡುವ  ಮೊದಲು ಬದಲಾಗಿರುವ  ಈ ನಿಯಮಗಳನ್ನು ನೀವು ತಿಳಿದಿರುವುದು ತುಂಬಾ ಮುಖ್ಯ, ಇಲ್ಲದಿದ್ದರೆ ನಿಮಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. 

ಸ್ಥಿರ ಠೇವಣಿಗೆ ಸಂಬಂಧಿಸಿದ ಆರ್ಬಿಐ ಹೊಸ ನಿಯಮ ಏನು ಹೇಳುತ್ತದೆ?
ಆರ್ಬಿಐ, ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ನಿಮ್ಮ ಠೇವಣಿಯ ಅವಧಿ ಅಂದರೆ ಮ್ಯಾಚುರಿಟಿ ಅವಧಿ ಪೂರ್ಣಗೊಂಡ  ಬಳಿಕವೂ ಕೂಡ ಒಂದು ವೇಳೆ ನೀವು ನಿಮ್ಮ ಸ್ಥಿರ ಠೇವಣಿ ಖಾತೆಯನ್ನು ಮುಂದುವರೆಸಿದರೆ ನಿಮಗೆ ಉಳಿತಾಯ ಖಾತೆಯ ಬಡ್ಡಿ ಸಿಗಲಿದೆ. ಇದರಿಂದ ದೀರ್ಘಾವಧಿಯ ಹೂಡಿಕೆಯಲ್ಲಿ ನಿಮಗೆ ನಷ್ಟ ಸಂಭವಿಸುವ ಸಾಧ್ಯತೆ ಇದೆ . ಪ್ರಸ್ತುತ ದೇಶದ ವಿವಿಧ ಬ್ಯಾಂಕುಗಳು 5 ರಿಂದ 10 ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಶೇ.5 ರಷ್ಟು ಬಡ್ಡಿಯನ್ನು ನೀಡುತ್ತಿವೆ. ಇನ್ನೊಂದೆಡೆ ಉಳಿತಾಯ ಖಾತೆಗಳ ಕುರಿತು ಹೇಳುವುದಾದರೆ, ಬ್ಯಾಂಕುಗಳು ಶೇ.3 ರಿಂದ ಶೇ.4 ರಷ್ಟು ಬಡ್ಡಿಯನ್ನು ನೀಡುತ್ತಿವೆ. 

ಇದನ್ನೂ ಓದಿ-LED Bulb: ಕರೆಂಟ್ ಇಲ್ಲದ ವೇಳೆಯೂ ಮನೆಯನ್ನು ಬೆಳಗುತ್ತದೆ ಈ ಬಲ್ಬ್, ಬೆಲೆ 200 ರೂ. ಗಿಂತ ಕಮ್ಮಿ

ಏನಿದು ಹೊಸ ನಿಯಮ?
ಕೆಲ ದಿನಗಳ ಹಿಂದೆ ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ, ಒಂದು ವೇಳೆ ನಿಮ್ಮ ಸ್ಥಿರ ಠೇವಣಿಯ ಅವಧಿ ಪೂರ್ಣಗೊಂಡ ಬಳಿಕ ಹಾಗೂ ನಿಮ್ಮ ಮೊತ್ತವನ್ನು ನೀವು ಹಿಂಪಡೆಯದೆ ಹೋದರೆ, ಅದರ ಮೇಲೆ ಉಳಿತಾಯ ಖಾತೆಯ ಬಡ್ಡಿದರ ಅಥವಾ ಮ್ಯಾಚುರ್ಡ್ ಸ್ಥಿರ ಠೇವಣಿ (ಯಾವುದು ಕನಿಷ್ಠ ಅದು) ಬಡ್ಡಿ ಅನ್ವಯಿಸಲಿದೆ ಎಂದಿದೆ. ಈ ನಿಯಮ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ, ಸಣ್ಣ ಹಣಕಾಸು ಸಂಸ್ಥೆಗಳಿಗೆ, ಸಹಕಾರಿ ಬ್ಯಾಂಕುಗಳು, ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳಲ್ಲಿ ಇರಿಸಲಾಗಿರುವ ಸ್ಥಿರ ಠೇವಣಿಗಳಿಗೆ ಅನ್ವಯಿಸಲಿದೆ ಎಂದು ಆರ್ಬಿಐ ಹೇಳಿದೆ. 

ಇದನ್ನೂ ಓದಿ-Aadhaar-Voter ID card link : ಆಧಾರ್-ವೋಟರ್ ಐಡಿ ಕಾರ್ಡ್ ಲಿಂಕ್ : ಸರ್ಕಾರದಿಂದ ಶೀಘ್ರದಲ್ಲೇ ನಿಯಮ ಜಾರಿ!

ಹಳೆ ನಿಯಮ ಏನಾಗಿತ್ತು?
ಇದಕ್ಕೂ ಮೊದಲು ಒಂದು ವೇಳೆ ನೀವು ನಿಮ್ಮ ಸ್ಥಿರ ಠೇವಣಿಯನ್ನು ಅವಧಿ ಮುಕ್ತಾಯದ ಬಳಿಕ ಅಥವಾ ಮ್ಯಾಚುರಿಟಿ ಅವಧಿಯ ಬಳಿಕ ಮುಂದುವರೆಸಿದರೆ, ಬ್ಯಾಂಕುಗಳು ಹೆಚ್ಚಾಗಿರುವ ಅವಧಿಗೂ ಕೂಡ ಸ್ಥಿರ ಠೇವಣಿ ಬಡ್ಡಿಯನ್ನು ನೀಡುತ್ತಿದ್ದವು. ಆದರೆ, ಇದೀಗ ಬದಲಾದ ನಿಯಮದ ಅಡಿ  ಹೆಚ್ಚಾಗಿರುವ ಅವಧಿಗೆ ನಿಮಗೆ ಎಫ್ ಡಿ ಬಡ್ಡಿಯ ಬದಲು ಉಳಿತಾಯ ಖಾತೆಯ ಬಡ್ಡಿ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News