Electricity: ಮತ್ತೆ ಮತ್ತೆ ಪವರ್ ಕಟ್ ಆಗ್ತೀದ್ಯಾ? ಈ ಕೆಲಸ ಮಾಡಿ ಕರೆಂಟ್ ಇಲ್ಲದೆಯೂ ಓಡುತ್ತೆ ಎಸಿ-ಕೂಲರ್

Electricity: ಪದೇ ಪದೇ ಪವರ್ ಕಟ್ ಆಗುತ್ತಿದೆಯೇ? ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜನರೇಟರ್ ಗಳು ಉತ್ತಮ ಆಯ್ಕೆಯಾಗಿವೆ. ಸಾಮಾನ್ಯವಾಗಿ ಜನರೇಟರ್ ಎಂದರೆ ಅಯ್ಯೋ ಅದನ್ನು ಪದೇ ಪದೇ ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹಲವು ಮಾದರಿಯ  ಜನರೇಟರ್ ಗಳು ಲಭ್ಯವಿದೆ. ಇದರ ವಿಶೇಷತೆ ಎಂದರೆ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಸೌರಶಕ್ತಿಯಿಂದ ಚಾಲಿತವಾಗಿದೆ.

Written by - Yashaswini V | Last Updated : May 27, 2022, 08:35 AM IST
  • ಇದು ಸೌರ ವಿದ್ಯುತ್ ಜನರೇಟರ್ ಆಗಿದೆ
  • ಅಂದರೆ, ಇದನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು
  • ಇದರೊಂದಿಗೆ, ಜನರೇಟರ್‌ನಲ್ಲಿ 2 ಮತಗಳ ಅಲ್ಟ್ರಾ ಬ್ರೈಟ್ ಎಲ್‌ಇಡಿ ಸಹ ಲಭ್ಯವಿದೆ
Electricity: ಮತ್ತೆ ಮತ್ತೆ ಪವರ್ ಕಟ್ ಆಗ್ತೀದ್ಯಾ? ಈ ಕೆಲಸ ಮಾಡಿ ಕರೆಂಟ್ ಇಲ್ಲದೆಯೂ ಓಡುತ್ತೆ ಎಸಿ-ಕೂಲರ್  title=
AC-Cooler will run without electricity

SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150: ಭಾರತದ ಹಲವು ರಾಜ್ಯಗಳಲ್ಲಿ ಬಿರು ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲಿನ ತಾಪದಿಂದ ಪರಿಹಾರ ಪಡೆಯಲು ಫ್ಯಾನ್, ಎಸಿ, ಕೂಲರ್‌ಗಳು ಅತ್ಯವಶ್ಯ ಎಂದರೂ ತಪ್ಪಾಗಲಾರದು. ಆದರೆ, ಇತ್ತೀಚಿನ ದಿನಗಳಲ್ಲಿ ಕಾಡುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಪವರ್ ಕಟ್. ವಿದ್ಯುತ್ ಕೈಕೊಟ್ಟ ತಕ್ಷಣ ಫ್ಯಾನ್, ಕೂಲರ್, ಎಸಿ ಬಂದ್ ಆಗುತ್ತವೆ. ಪದೇ ಪದೇ ಪವರ್ ಕಟ್ ಆಗುವುದರಿಂದ ಬೆವರಿನ ಸಮಸ್ಯೆ ಮಾತ್ರವಲ್ಲ ವರ್ಕ್ ಫ್ರಮ್ ಹೋಂ, ಆನ್ಲೈನ್ ಕ್ಲಾಸ್ ಸೇರಿದಂತೆ ಹಲವು ಕೆಲಸಗಳಿಗೂ ತೊಂದರೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜನರು ಇನ್ವರ್ಟರ್ ಮತ್ತು ಜನರೇಟರ್ಗಳನ್ನು ಖರೀದಿಸುತ್ತಾರೆ. ಆದರೆ ಅತಿಯಾದ ವಿದ್ಯುತ್ ನಷ್ಟದಿಂದಾಗಿ, ಇನ್ವರ್ಟರ್ ಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಜನರೇಟರ್ ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹಲವು ಮಾದರಿಯ  ಜನರೇಟರ್ ಗಳು ಲಭ್ಯವಿದೆ. ಇದರ ವಿಶೇಷತೆ ಎಂದರೆ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಸೌರಶಕ್ತಿಯಿಂದ ಚಾಲಿತವಾಗಿದೆ. ಅಂತಹ ಜನರೇಟರ್ ಗಳಲ್ಲಿ ಒಂದು SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಆಗಿದೆ. ಇದರ ಬೆಲೆ, ವಿಶೇಷತೆಗಳ ಬಗ್ಗೆ ತಿಳಿಯೋಣ...
 
ಭಾರತದಲ್ಲಿ SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಬೆಲೆ:
SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ಅನ್ನು ಅಮೇಜಾನ್ ನಿಂದ ಖರೀದಿಸಬಹುದು. ಇದರ ಬೆಲೆಯೂ ತುಂಬಾ ಕಡಿಮೆ. ಈ ಸೌರಶಕ್ತಿಯ ಜನರೇಟರ್ ಅನ್ನು ನೀವು ಕೇವಲ 16 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ನಿಮ್ಮ ಬಜೆಟ್ ಕಡಿಮೆಯಿದ್ದರೆ, ನೀವು ಮಾಸಿಕ ಕಂತುಗಳಲ್ಲಿ ಖರೀದಿಸಬಹುದು. ನೀವು ತಿಂಗಳಿಗೆ ಕೇವಲ ಸಾವಿರ ರೂಪಾಯಿಗಳನ್ನು ಪಾವತಿಸುವ ಮೂಲಕವೂ ಇದನ್ನು ಖರೀದಿಸಬಹುದು.

ಇದನ್ನೂ ಓದಿ- Top-5 Smartphones: 6000mah ಬ್ಯಾಟರಿ ಸಾಮರ್ಥ್ಯದ ಟಾಪ್-5 ಸ್ಮಾರ್ಟ್‌ಫೋನ್‌ಗಳಿವು

SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ವಿಶೇಷಣಗಳು: 
ನೀವು SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ನಲ್ಲಿ ಹೆಚ್ಚಿನ ವೇಗದ ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆಯುತ್ತೀರಿ. ಇದು 42000mAh ಬ್ಯಾಟರಿಯನ್ನು ಹೊಂದಿದೆ, ಇದು ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಶಕ್ತಿಯನ್ನು ನೀಡುತ್ತದೆ. 

ಇದು ಎಷ್ಟು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ?
ಕಂಪನಿಯ ಪ್ರಕಾರ ಇದು ಆಪಲ್ ನ ಐಫೋನ್ 8 ಮಾದರಿಯನ್ನು ಒಮ್ಮೆ ಚಾರ್ಜ್ ಮಾಡಿದ ನಂತರ ಇದನ್ನು 20 ಬಾರಿ ಚಾರ್ಜ್ ಮಾಡಬಹುದು. ಇದು ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ರೇಡಿಯೋಗಳು, ಫ್ಯಾನ್‌ಗಳು, ಟಿವಿಗಳು ಮಾತ್ರವಲ್ಲದೆ ದೊಡ್ಡ ಉಪಕರಣಗಳನ್ನು ಸಹ ರನ್ ಮಾಡುತ್ತದೆ.

ಇದನ್ನೂ ಓದಿ- 1000 ರೂ.ಗಿಂತ ಕಡಿಮೆ ಮೌಲ್ಯದ ವಾಟರ್‌ಪ್ರೂಫ್ ಇಯರ್‌ಬಡ್‌.. ನಿಮಿಷದಲ್ಲೇ ಚಾರ್ಜ್ ಆಗುತ್ತೆ!!

SARRVAD ಕ್ಯಾಂಪಿಂಗ್ ಸೌರ ಚಾಲಿತ ಜನರೇಟರ್ S-150 ವೈಶಿಷ್ಟ್ಯಗಳು:
ಇದು ಸೌರ ವಿದ್ಯುತ್ ಜನರೇಟರ್ ಆಗಿದೆ. ಅಂದರೆ, ಇದನ್ನು ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು. ಇದರೊಂದಿಗೆ, ಜನರೇಟರ್‌ನಲ್ಲಿ 2 ವೋಲ್ಟ್ ಅಲ್ಟ್ರಾ ಬ್ರೈಟ್ ಎಲ್‌ಇಡಿ ಸಹ ಲಭ್ಯವಿದೆ. ಇದರ ಸಹಾಯದಿಂದ ನೀವು ಅದನ್ನು ಕತ್ತಲೆಯಲ್ಲಿಯೂ ಬಳಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News