Vastu Tips for Health and Wealth: ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ನಮ್ಮ ದೇಹದ ಆರೋಗ್ಯದ ಜೊತೆಗೆ ನೇರ ಸಂಬಂಧ ಹೊಂದಿದೆ, ಆದರೆ ಇದರ ಹೊರತಾಗಿ, ಆಹಾರದಿಂದ ಸಿಗುವ ಶಕ್ತಿಯು ಪ್ರತಿಯೊಬ್ಬರ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದಲ್ಲಿ ಆಹಾರವನ್ನು ಬೇಯಿಸುವುದರಿಂದ ಹಿಡಿದು ಆಹಾರವನ್ನು ತಿನ್ನುವ ದಿಕ್ಕು ಮತ್ತು ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಈ ದಿಕ್ಕಿನತ್ತ ಮುಖಮಾಡಿ ಆಹಾರವನ್ನು ಸೇವಿಸಬೇಡಿ
ಆಹಾರವನ್ನು ಸೇವಿಸುವಾಗ ಯಾವಾಗಲು ನಿಮ್ಮ ಮುಖವಿರುವ ದಿಕ್ಕಿನ ಕುರಿತು ವಿಶೇಷ ಗಮನಹರಿಸಿ. ತಪ್ಪು ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದರಿಂದ ಭಾರಿ ಹಾನಿಯ ಸಾಧ್ಯತೆ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದು ಎಂದಿಗೂ ಕೂಡ ಉತ್ತಮ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವ್ಯಕ್ತಿಯು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಸಂಪತ್ತಿನ ದೇವರು ಎಂದೇ ಕರೆಯಲಾಗುವ ಕುಬೇರನು ಉತ್ತರ ದಿಕ್ಕಿಗೆ ಅಭಿಮುಖವಾಗಿರುವ ಆಹಾರವನ್ನು ಸೇವಿಸುವುದರಿಂದ ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಆದರೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದರಿಂದ ರೋಗಗಳು ದೂರವಾಗುತ್ತವೆ. ವ್ಯಕ್ತಿಯ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಯಾವತ್ತೂ ದಕ್ಷಿಣಾಭಿಮುಖವಾಗಿ ಆಹಾರವನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಇದು ಯಮನ ದಿಕ್ಕಾಗಿದೆ ಮತ್ತು ಹೀಗೆ ಮಾಡುವುದರಿಂದ ವ್ಯಕ್ತಿಯು ರೋಗಗಳಿಗೆ ಬಲಿಯಾಗುತ್ತಾನೆ, ಜೊತೆಗೆ ವ್ಯಕ್ತಿಯ ಆಯುಷ್ಯವು ಕಡಿಮೆಯಾಗುತ್ತದೆ.
ಆಹಾರದ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ತಿನ್ನುವಾಗ ಸರಿಯಾದ ದಿಕ್ಕನ್ನು ಎದುರಿಸುವುದರ ಜೊತೆಗೆ, ಇತರ ಕೆಲವು ವಿಷಯಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳಿ. ಆಹಾರವನ್ನು ತಯಾರಿಸುವಾಗ, ಯಾವಾಗಲೂ ಹಸುವಿಗೆ ಮೊದಲ ರೊಟ್ಟಿಯನ್ನು ಮೀಸಲಿಡಿ. ಕೂದಲು ಬಿದ್ದಿರುವ ಅಥವಾ ಯಾರ ಕಾಲಿಗೆ ಸ್ಪರ್ಶಿಸಿದ ಆಹಾರವನ್ನು ಎಂದಿಗೂ ಸೇವಿಸಬೇಡಿ. ಅಂತಹ ಆಹಾರವು ಕಲುಷಿತವಾಗಿರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಇದರಿಂದಾಗಿ ವ್ಯಕ್ತಿಯು ಅನಾರೋಗ್ಯ ಮತ್ತು ಹಣದ ಕೊರತೆಗೆ ಗುರಿಯಾಗುತ್ತಾನೆ. ಯಾವಾಗಲೂ ತಾಜಾ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ತಿನ್ನುವಾಗ, ನಿಮ್ಮ ಮನಸ್ಸಿನಲ್ಲಿ ತಪ್ಪು ಆಲೋಚನೆಗಳು ಬರದಂತೆ ಪ್ರಯತ್ನಿಸಿ.
ಇದನ್ನೂ ಓದಿ-ಯಾರ ಹಸ್ತದಲ್ಲಿ ಈ ರೇಖೆ ಸಂಪೂರ್ಣ ರೂಪದಲ್ಲಿರುತ್ತದೆಯೋ ಅವರಿಗೆ ಜೀವನದಲ್ಲಿ ಸಿಗುತ್ತದೆ ಭಾರೀ ಯಶಸ್ಸು
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.