ನಾಳೆ ಟಿ20 ವಿಶ್ವಕಪ್ ನಡೆದರೆ, ಈ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ ಎಂದ ಆಕಾಶ್ ಚೋಪ್ರಾ..!

ಒಂದು ವೇಳೆ ನಾಳೆಯೇ ಟಿ 20 ವಿಶ್ವಕಪ್ ನಡೆದರೆ ಮೂವರು ಆಟಗಾರರಿಗೆ ಸ್ಥಾನವಿಲ್ಲ..! ಎಂದು ಭಾರತೀಯ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

Written by - Zee Kannada News Desk | Last Updated : Jun 2, 2022, 07:01 PM IST
  • 'ಟಿ 20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಿಂದ ಪ್ರಾರಂಭವಾಗುವುದಿಲ್ಲ ಆದರೆ ನಾಳೆಯಿಂದ ಪ್ರಾರಂಭವಾಗುತ್ತದೆ ಎಂದು ಭಾವಿಸಿಕೊಳ್ಳಿ,
  • ಆಗ ನೀವು ಐಪಿಎಲ್ ನಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣಿಸಿ ತಂಡವನ್ನು ಆಯ್ದುಕೊಳ್ಳಬೇಕಾಗುತ್ತದೆ.
ನಾಳೆ ಟಿ20 ವಿಶ್ವಕಪ್ ನಡೆದರೆ, ಈ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ ಎಂದ ಆಕಾಶ್ ಚೋಪ್ರಾ..!  title=

ನವದೆಹಲಿ: ಒಂದು ವೇಳೆ ನಾಳೆಯೇ ಟಿ 20 ವಿಶ್ವಕಪ್ ನಡೆದರೆ ಮೂವರು ಆಟಗಾರರಿಗೆ ಸ್ಥಾನವಿಲ್ಲ..! ಎಂದು ಭಾರತೀಯ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ತಮ್ಮ ಯುಟ್ಯೂಬ್ ಚಾನೆಲ್ ವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ನಾಳೆಯೇ ವಿಶ್ವಕಪ್ ನಡೆದರೆ ಐಪಿಎಲ್ ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಈ ಮೂವರು ಆಟಗಾರರನ್ನು ಕೈ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.ಅದರಲ್ಲಿ ಅವರು ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ರಂತಹ ಸ್ಟಾರ್ ಆಟಗಾರರನ್ನು ಕೈ ಬಿಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ರಂತಹ ಸ್ಟಾರ್ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾದರು.ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ 14 ಪಂದ್ಯಗಳಲ್ಲಿ ಕೇವಲ 19.14 ಸರಾಸರಿ ಮೂಲಕ 268 ರನ್ ಗಳಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 16 ಪಂದ್ಯಗಳಲ್ಲಿ ಸರಾಸರಿ 22.73 ರ ಮೂಲಕ  341 ರನ್ ಗಳಿಸಿದ್ದಾರೆ.ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಕೂಡ 14 ಪಂದ್ಯಗಳಲ್ಲಿ 30.91 ಸರಾಸರಿಯಲ್ಲಿ 340 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!

'ಟಿ 20 ವಿಶ್ವಕಪ್ ಅಕ್ಟೋಬರ್-ನವೆಂಬರ್‌ನಿಂದ ಪ್ರಾರಂಭವಾಗುವುದಿಲ್ಲ ಆದರೆ ನಾಳೆಯಿಂದ ಪ್ರಾರಂಭವಾಗುತ್ತದೆ ಎಂದು ಭಾವಿಸಿಕೊಳ್ಳಿ, ಆಗ ನೀವು ಐಪಿಎಲ್ ನಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣಿಸಿ ತಂಡವನ್ನು ಆಯ್ದುಕೊಳ್ಳಬೇಕಾಗುತ್ತದೆ.ಇಲ್ಲಿ ಸ್ಟಾರ್ ಗಿರಿ ಯಾವುದೇ ಕಾರಣಕ್ಕೂ ಪರಿಗಣನೆಗೆ ಬರುವುದಿಲ್ಲ. ಆಗ ಐಪಿಎಲ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ರೂಪಿಸಿದಾಗ ಹೇಗೆ ಕಾಣುತ್ತದೆ ಎನ್ನುವುದನ್ನು ನೀವು ಕಲ್ಪಿಸಿಕೊಳ್ಳಬೇಕು? ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ ಹೇಳಿದ್ದಾರೆ.

'ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದೊಡ್ಡ ಹೆಸರುಗಳಿಲ್ಲ.ಆದರೆ ಅವರು ವಿಶ್ವಕಪ್ ನಡೆಯುವಾಗ ಅವರು ಶೇಕಡಾ 100 ರಷ್ಟು ಆಡಲಿದ್ದಾರೆ.ರಿಷಬ್ ಪಂತ್ ಕೂಡ ಇಲ್ಲ.ಈ ಮೂವರು ಪ್ರಮುಖ ಆಟಗಾರರ ಹೆಸರಿಲ್ಲ.'ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಭಯದಿಂದ ನಡುಗುತ್ತಿರುವುದೇಕೆ?

ಆದಾಗ್ಯೂ, ಚೋಪ್ರಾ ಆಯ್ಕೆ ಮಾಡಿದ 16 ಸದಸ್ಯರ ತಂಡವು ಸಾಕಷ್ಟು ಪ್ರಬಲವಾಗಿ ಕಾಣುತ್ತದೆ.ಇದರಲ್ಲಿ ಪ್ರಮುಖವಾಗಿ ಕೆ.ಎಲ್ ರಾಹುಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಅವೇಶ್ ಖಾನ್, ಕೃನಾಲ್ ಪಾಂಡ್ಯ, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್, ದೀಪಕ್ ಹೂಡಾ, ಕುಲದೀಪ್ ಯಾದವ್,ಹರ್ಷಲ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ರಂತಹ ಪ್ರಮುಖ ಆಟಗಾರರಿದ್ದಾರೆ.

'ವಿಶ್ವಕಪ್‌ಗೆ ತಂಡದ ನಾಯಕನನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಐಪಿಎಲ್ ಪ್ರದರ್ಶನದ ಮೇಲೆ ಅವಲಂಭಿತವಾಗಿದೆ.ಹಾಗಾಗಿ ನನಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಸಿಕ್ಕಿದ್ದಾರೆ. ಅವರು ಬ್ಯಾಟಿಂಗ್, ಬೌಲಿಂಗ್ ಮಾಡುತ್ತಿದ್ದಾರೆ.ನಾನು ಅವರನ್ನು ನಂ. 5 ಬ್ಯಾಟಿಂಗ್ ಸ್ಥಾನದಲ್ಲಿ ಇರಿಸಿದ್ದೇನೆ, ಆದರೆ ಅವರು ನಂ. 4 ಕೂಡ ಹೌದು.ಅವರು ಒಂದು ರೀತಿ ಗನ್ ಪ್ಲೇಯರ್ ಇದ್ದಂತೆ, ನೀವು ಅವರಿಂದ ಮೂರು ಓವರ್ ಗಳ ಕಾಲ ಬೌಲ್ ಮಾಡಿಸಬಹುದು, ಅಷ್ಟೇ ಅಲ್ಲದೆ ಬ್ಯಾಟಿಂಗ್ ಮಾಡಿದರೆ ಅದ್ಬುತ ಪ್ರದರ್ಶನವನ್ನು ನೀಡಬಲ್ಲರು, ಅಷ್ಟೇ ಅಲ್ಲದೆ ಅವರು ಮಧ್ಯದಲ್ಲಿ ಮತ್ತು ಫಿನಿಶರ್ನಲ್ಲಿ ಆಡಬಹುದು, ಅವರ ಸ್ಟ್ರೈಕ್-ರೇಟ್ ಕಡಿಮೆ ಇದೆ,ಆದರೆ ನಾನು ಅವರನ್ನು ಬರಿ ಬ್ಯಾಟ್ಸ್ಮನ್ ಆಗಿ ಮಾತ್ರ ಆಯ್ಕೆ ಮಾಡುತ್ತಿಲ್ಲ, ಬದಲಾಗಿ ಅವರನ್ನು ನಾಯಕನಾಗಿ ಮತ್ತು ಆಲ್ ರೌಂಡರ್ ಆಗಿ ಆಯ್ಕೆ ಮಾಡುತ್ತಿದ್ದೇನೆ' ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News