ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹತ್ಯೆ

ಗುಪ್ತಚರ ಮಾಹಿತಿ ಆಧಾರದ ಮೇಲೆ ಬುಧವಾರ ಭದ್ರತಾ ಪಡೆಗಳು ಅನಂತ್ನಾಗ್ನಲ್ಲಿ ಕೋಟ್ವಾಲ್ ಮೊಹಲ್ಲವನ್ನು ಸುತ್ತುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Last Updated : Jul 25, 2018, 12:38 PM IST
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹತ್ಯೆ title=
Pic: ANI

ಶ್ರೀನಗರ: ಬುಧವಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವಿನ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರಗಾಮಿಗಳು ಹತ್ಯೆಯಾಗಿದ್ದಾರೆ. ಎನ್ಕೌಂಟರ್ ಬೆಳಿಗ್ಗೆ 11 ಗಂಟೆಗೆ ಕೊನೆಗೊಂಡಿದೆ. ಆದಾಗ್ಯೂ, ಭದ್ರತಾ ಪಡೆಗಳು ತಮ್ಮ ಶೋಧ ಕಾರ್ಯವನ್ನು ಮುಂದುವರೆಸಿವೆ.

ಗುಪ್ತಚರ ಮಾಹಿತಿ ಆಧಾರದ ಮೇಲೆ ಬುಧವಾರ ಭದ್ರತಾ ಪಡೆಗಳು ಅನಂತ್ನಾಗ್ನಲ್ಲಿ ಕೋಟ್ವಾಲ್ ಮೊಹಲ್ಲವನ್ನು ಸುತ್ತುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯನ್ನು ಎದುರಿಸಲು ಪೊಲೀಸರು ಎನ್ಕೌಂಟರ್ ಆರಂಭಿಸಿದ್ದಾರೆ. ಅಡಗಿರುವ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮುನ್ನ ನಾಗರಿಕರನ್ನು ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಅನಂತ್ನಾಗ್ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದಿರುವ ಪೋಲೀಸ್ ಕಾನ್ಸ್ಟೇಬಲ್ನನ್ನು ಹಿಂಸಿಸಿದ ಮೂವರು ಭಯೋತ್ಪಾದಕರು ಭಾನುವಾರ ಕುಲ್ಗಮ್ ಜಿಲ್ಲೆಯ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂಬುದು ಗಮನಾರ್ಹವಾಗಿದೆ. ಪೊಲೀಸ್ ಹೇಳಿಕೆಯ ಪ್ರಕಾರ, ಭದ್ರತಾ ಪಡೆಗಳ ಪ್ರಯತ್ನದ ಪರಿಣಾಮವಾಗಿ ಶನಿವಾರ ಕಾನ್ಸ್ಟೇಬಲ್ ಮೊಹಮ್ಮದ್ ಸಲೀಂನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಕತುವಾ ಪೋಲಿಸ್ ಟ್ರೈನಿಂಗ್ ಸ್ಕೂಲ್ನಿಂದ ರಜೆಯ ಮೇಲೆ ಸಲೀಂ ಮನೆಗೆ ಬಂದಿದ್ದರು.

Trending News