ನವದೆಹಲಿ: ಭಾರತವೂ ಸೇರಿದಂತೆ ಪ್ರಪಂಚದ ತುಂಬೆಲ್ಲಾ ಭ್ರಷ್ಟಾಚಾರ ತುಂಬಿ-ತುಳುಕುತ್ತಿದೆ. ಭ್ರಷ್ಟಾಚಾರದ ಮೂಲಕ ರಾಜಕಾರಣಿಗಳು ಜನರ ತೆರಿಗೆ ಹಣ ದೋಚುವುದು ಸಾಮಾನ್ಯವಾಗಿಬಿಟ್ಟಿದೆ. ಕಾಮಗಾರಿ ನಡೆಸಿ ಒಂದೆರಡು ದಿನಗಳೂ ಕಳೆದಿರುವುದಿಲ್ಲ ಭ್ರಷ್ಟಾಚಾರದ ಕೈಚಳಕ ಬೆಳಕಿಗೆ ಬಂದಿರುತ್ತದೆ. ರಸ್ತೆ ನಿರ್ಮಾಣವಾಗಲಿ, ಫುಟ್ ಓವರ್ ಬ್ರಿಡ್ಜ್ ಆಗಲಿ ಅಥವಾ ಸರ್ಕಾರಿ ಇಲಾಖೆಯ ಯಾವುದೇ ಕಾಮಗಾರಿಗಳಾಗಲಿ ಅಲ್ಲಿ ಭ್ರಷ್ಟಾಚಾರದ ದರ್ಶನವಾಗುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನದಿಂತಿದೆ ಈ ಘಟನೆ.
ಮೆಕ್ಸಿಕೋದಲ್ಲಿ ಕಳಪೆ ಕಾಮಗಾರಿಯಿಂದ ನಡೆದಿರುವ ಅವಾಂತರವೊಂದು ಸೋಷಿಯಲ್ ಮೀಡಿಯಾಲದ್ಲಿ ವೈರಲ್ ಆಗಿದೆ. ಇಲ್ಲಿ ಉದ್ಘಾಟನೆಯ ದಿನವೇ ತೂಗು ಸೇತುವೆಯೊಂದು ಕುಸಿದುಬಿದ್ದಿದೆ. ಪರಿಣಾಮ ಮೇಯರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಚರಂಡಿಗೆ ಬಿದ್ದಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Video: ಗನ್ ತೋರಿಸಿ ದರೋಡೆ ಮಾಡಿದ ಬಾಲಕ, ಭಯಾನಕ ದೃಶ್ಯ ವೈರಲ್
ಉದ್ಘಾಟನೆ ವೇಳೆಯೇ ಕುಸಿದ ಸೇತುವೆ!
ಅಂದಹಾಗೆ ಈ ಘಟನೆ ನಡೆದಿರುವುದು ಮೆಕ್ಸಿಕೋದ ಕ್ಯುರ್ನಾವಾಕಾ ನಗರದಲ್ಲಿ. ಕ್ಯುರ್ನಾವಾಕಾದಲ್ಲಿ ತೇಲುವ ಸೇತುವೆಯನ್ನು ಉದ್ಘಾಟಿಸಬೇಕಿತ್ತು. ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಹಲವು ಅಧಿಕಾರಿಗಳು, ಜನರು ಉದ್ಘಾಟನೆಗೆ ಆಗಮಿಸಿದ್ದರು. ಅತ್ಯಂತ ಸಂಭ್ರಮದಿಂದಲೇ ಸೇತುವೆಯನ್ನು ಉದ್ಘಾಟಿಸಲಾಯಿತು. ನಂತರ ಮೇಯರ್ ಸೇರಿದಂತೆ ಅಧಿಕಾರಿಗಳು ಅದರ ಮೇಲೆ ಒಂದು ರೌಂಡ್ ಹೋಗಿ ಬರೋಣವೆಂದು ಹೊರಟಿದ್ದಾರೆ. ಸೇತುವೆ ಮೇಲೆ ಒಬ್ಬರ ಹಿಂದೊಬ್ಬರಂತೆ ಹೋಗುತ್ತಿರುವಾಗಲೇ ಅದು ಕುಸಿದುಬಿದ್ದಿದೆ. ಸೇತುವೆ ಮೇಲಿದ್ದ ಎಲ್ಲರೂ ಕೆಳಗಡೆ ಇದ್ದ ಚರಂಡಿಗೆ ಬಿದ್ದಿದ್ದಾರೆ.
#Cuernavaca Mayor and other officials during the reopening of a pedestrian bridge. #México pic.twitter.com/wcNe48vhCA
— David Wolf (@DavidWolf777) June 7, 2022
ಮರದ ಹಲಗೆಗಳಿಂದ ನಿರ್ಮಿಸಲಾದ ಈ ನೇತಾಡುವ ಸೇತುವೆಯು 20 ಜನರ ತೂಕವನ್ನು ತಡೆದುಕೊಳ್ಳದಷ್ಟು ದುರ್ಬಲವಾಗಿತ್ತು. ಘಟನೆಯಲ್ಲಿ ಮೇಯರ್ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಳಗಡೆ ಹರಿಯುತ್ತಿದ್ದ ಚರಂಡಿಯಲ್ಲಿ ಬಂಡೆಗಳು, ದೊಡ್ಡ ಕಲ್ಲುಗಳೂ ಇದ್ದವು. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಮೇಯರ್ ಪತ್ನಿಗೂ ಗಾಯಗಳಾಗಿವೆ. ಈ ಸಂಪೂರ್ಣ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರ್ ಆದ ಬಳಿಕ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಡಿಸ್ನಿಲ್ಯಾಂಡ್ನಲ್ಲಿ ಪ್ರೇಯಸಿಗೆ ಪ್ರಪೋಸ್: ಅಡ್ಡಬಂದ ಉದ್ಯೋಗಿ ಮಾಡಿದ್ದೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.