ನಿಗೂಢ ಅರಣ್ಯ ರಹಸ್ಯ: ಈ ವಿಸ್ಮಯಕಾರಿ ಕಾಡಿಗೆ ಹೋದವರು ಯಾರೂ ತಿರುಗಿ ಬಂದಿಲ್ಲ

ಯುರೋಪಿಯನ್‌ ರಾಷ್ಟ್ರವಾದ ರೊಮೇನಿಯಾದ ಹೋಯಾ ಬಸು ಅರಣ್ಯದ ಬಗ್ಗೆ ನಾವು ಇಂದು ಮಾಹಿತಿ ನೀಡಲಿದ್ದೇವೆ. ಇದೊಂದು ಅರಣ್ಯ ಪ್ರದೇಶ. ಇಲ್ಲಿನ ನಿಗೂಢತೆ ಏನೆಂದರೆ ಈ ಪ್ರದೇಶಕ್ಕೆ ಭೇಟಿ ನೀಡಿದ ವ್ಯಕ್ತಿಗಳು ಯಾರೂ ಮರಳಿ ಮನೆ ಸೇರಿಲ್ಲ. 

Written by - Bhavishya Shetty | Last Updated : Jun 5, 2022, 09:18 AM IST
  • ಹೋಯಾ ಬಸು ಅರಣ್ಯದ ನಿಗೂಢ ರಹಸ್ಯ
  • ರೊಮೇನಿಯಾದ ಕ್ಲುಜ್ ಕೌಂಟಿಯಲ್ಲಿದೆ ಈ ಕಾಡು
  • ಇಲ್ಲಿಗೆ ಒಮ್ಮೆ ಹೋದರೆ ಮತ್ತೆ ತಿರುಗಿ ಬರೋದು ಕಷ್ಟ
ನಿಗೂಢ ಅರಣ್ಯ ರಹಸ್ಯ: ಈ ವಿಸ್ಮಯಕಾರಿ ಕಾಡಿಗೆ ಹೋದವರು ಯಾರೂ ತಿರುಗಿ ಬಂದಿಲ್ಲ title=
hoya basu forest

ಜಗತ್ತಿನಲ್ಲಿ ಅನೇಕ ವಿಚಿತ್ರ ಘಟನೆಗಳು, ವಿಭಿನ್ನ ಸಂಗತಿಗಳು ನಡೆಯುತ್ತಿರುತ್ತವೆ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕು ಎಂದು ವಿಜ್ಞಾನಿಗಳು ಪ್ರಯತ್ನಿಸಿದರೂ ಕೆಲವೊಂದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಅದೆಷ್ಟೋ ಘಟನೆಗಳು ಕೂಡ ಪವಾಡ ಎಂಬಂತೆ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅಂತೆಯೇ ಜಗತ್ತಿನಲ್ಲಿ ಹಲವು ಭಯಾನಕ ಪ್ರದೇಶಗಳಿದ್ದು ಅದರಲ್ಲಿ ಈ ಒಂದು ಕಾಡು ಸಹ ಸೇರಿದೆ. 

ಯುರೋಪಿಯನ್‌ ರಾಷ್ಟ್ರವಾದ ರೊಮೇನಿಯಾದ ಹೋಯಾ ಬಸು ಅರಣ್ಯದ ಬಗ್ಗೆ ನಾವು ಇಂದು ಮಾಹಿತಿ ನೀಡಲಿದ್ದೇವೆ. ಇದೊಂದು ಅರಣ್ಯ ಪ್ರದೇಶ. ಇಲ್ಲಿನ ನಿಗೂಢತೆ ಏನೆಂದರೆ ಈ ಪ್ರದೇಶಕ್ಕೆ ಭೇಟಿ ನೀಡಿದ ವ್ಯಕ್ತಿಗಳು ಯಾರೂ ಮರಳಿ ಮನೆ ಸೇರಿಲ್ಲ. 

ಇದನ್ನು ಓದಿ: ಬಲಾತ್ಕಾರವನ್ನು ಉತ್ತೇಜಿಸುವ ಡಿಯೋ ಜಾಹೀರಾತುಗಳಿಗೆ ಸರ್ಕಾರದಿಂದ ಕಡಿವಾಣ!

ಟ್ರಾನ್ಸಿಲ್ವೇನಿಯಾದಲ್ಲಿ ಇಂತಹ ಅನೇಕ ವಿಚಿತ್ರ ಘಟನೆಗಳು ನಡೆದಿದ್ದು, ಈ ಪ್ರದೇಶಕ್ಕೆ ಜನರು ಹೋಗಲು ಭಯಭೀತರಾಗುತ್ತಾರೆ. ಅದಕ್ಕೆ ಕಾರಣವೂ ಇದೆ. 'ಹೋಯಾ ಬಸು', ವಿಶ್ವದ ಅತ್ಯಂತ ಭಯಾನಕ ಅರಣ್ಯ ಪ್ರದೇಶ. ಇದು ಟ್ರಾನ್ಸಿಲ್ವೇನಿಯಾ ಪ್ರಾಂತ್ಯದ ಕ್ಲುಜ್ ಕೌಂಟಿಯಲ್ಲಿದೆ. ಕಾಡಿನಲ್ಲಿ ನಡೆಯುತ್ತಿರುವ ನಿಗೂಢ ಘಟನೆಗಳನ್ನು ನೋಡಿದರೆ, ಇದನ್ನು 'ಟ್ರಾನ್ಸಿಲ್ವೇನಿಯಾದ ಬರ್ಮುಡಾ ಟ್ರಯಾಂಗಲ್' ಎಂದೇ ಕರೆಯಲಾಗುತ್ತದೆ. 

'ದಿ ಇಂಡಿಪೆಂಡೆಂಟ್' ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಹೊಯಾ ಬಾಸು ಕಾಡನ್ನು ವಿಶ್ವದ ಅತ್ಯಂದ ಭಯಾನಕ ಅರಣ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದಕ್ಕೆ ಬರ್ಮುಡಾ ಟ್ರಯಾಂಗಲ್ ನಂತೆಯೇ 'ಟ್ರಾನ್ಸಿಲ್ವೇನಿಯಾ ಟ್ರಯಾಂಗಲ್' ಎಂದು ಕರೆಯಲಾಗಿದೆ. ಈ ಕಾಡಿನಲ್ಲಿರುವ ಮರಗಳು ಅಡ್ಡಲಾಗಿ ಮತ್ತು ಬಾಗಿದಂತೆ ಕಾಣುತ್ತವೆ. ಇವು ಸೂರ್ಯನ ಬೆಳಕಿನಲ್ಲಿ ಇನ್ನಷ್ಟು ಭಯಾನಕವಾಗಿ ಕಾಣೋದು ಇಲ್ಲಿ ಅಚ್ಚರಿ. 

ಇದನ್ನು ಓದಿ: Bad Time Alert: ಇವುಗಳಲ್ಲಿ ಯಾವುದೇ ಒಂದು ಸಂಗತಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ತಕ್ಷಣ ಎಚ್ಚೆತ್ತುಕೊಳ್ಳಿ

ಈ ಪ್ರದೇಶದಲ್ಲಿ ಭೂತ-ಪ್ರೇತಗಳ ಅಸ್ತಿತ್ವವೂ ಇದೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಕುರುಬನೊಬ್ಬ ಈ ಕಾಡಿನಲ್ಲಿ ಕಣ್ಮರೆಯಾದಾಗಿನಿಂದ ಈ ಕಾಡಿನ ಕುರಿತು ಜನರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಈ ಕಾಡಿನ ಬಳಿ ವಾಸ ಮಾಡುವ ಜನರು ಹೇಳುವ ಪ್ರಕಾರ, ಕಳೆದ  ನೂರಾರು ವರ್ಷಗಳಿಂದ ತಮ್ಮ ಪೂರ್ವಜರಿಂದ ಇಂತಹ ವಿಷಯಗಳನ್ನು ಕೇಳುತ್ತಿದ್ದಾರೆ. ವಾಸ್ತವವಾಗಿ, ಹಳೆಯ ಪೂರ್ವನಿದರ್ಶನದ ಪ್ರಕಾರ, ಮನುಷ್ಯನು ಅರಣ್ಯವನ್ನು ಪ್ರವೇಶಿಸಿದ ತಕ್ಷಣ ಕಣ್ಮರೆಯಾಗುತ್ತಾನೆ. ಅಂತೆಯೇ ಕುರುಬನೊಬ್ಬ ತನ್ನ 200 ಕುರಿಗಳ ಜೊತೆ ಈ ಕಾಡಿಗೆ ತೆರಳಿದ್ದ. ಆದರೆ ಆತ ಮರಳಿ ಬರಲೇ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News