ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಮುಕ್ತಿ, ಜೀವನದಲ್ಲಿ ಎಲ್ಲವೂ ಸುಖಮಯ

 ಜೂನ್ 18 ರಂದು, ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಈ ಸಮಯದಲ್ಲಿ ಮೂರು  ರಾಶಿಯವರು ಮಾತ್ರ ಭಾರೀ ಅದೃಷ್ಟ ಪಡೆಯುತ್ತಾರೆ.  ಈ ರಾಶಿಯವರು ಸಾಕಷ್ಟು ಪ್ರಗತಿ ಮತ್ತು ಹಣವನ್ನು ಗಳಿಸುತ್ತಾರೆ.  

Written by - Ranjitha R K | Last Updated : Jun 9, 2022, 09:41 AM IST
  • ಜೂನ್ 18 ರಂದು, ಶುಕ್ರ ಗ್ರಹವು ವೃಷಭ ರಾಶಿಗೆ ಪ್ರವೇಶ
  • ಮೂರು ರಾಶಿಯವರಿಗೆ ಭಾರೀ ಅದೃಷ್ಟ
  • ಶುಕ್ರ ಸಂಕ್ರಮಣವು ಈ ರಾಶಿಯವರಿಗೆ ತರಲಿದೆ ಅದೃಷ್ಟ
ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಮುಕ್ತಿ, ಜೀವನದಲ್ಲಿ ಎಲ್ಲವೂ ಸುಖಮಯ   title=
Shukra rashi parivarthan (file photo)

ಬೆಂಗಳೂರು : ಜೂನ್ 18 ರಂದು, ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಇದಾದ ನಂತರ ಜುಲೈ 13 ರ ವರೆಗೆ  ವೃಷಭ ರಾಶಿಯಲ್ಲಿಯೇ ಇರಲಿದ್ದು ನಂತರ  ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂಕ್ರಮಣದ ಸಮಯದಲ್ಲಿ, ಶುಕ್ರ ಎಲ್ಲಾ ರಾಶಿಚಕ್ರ ಚಿಹ್ನೆಗಳ ಸಂಪತ್ತು, ಸಂತೋಷ ಮತ್ತು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಮಯದಲ್ಲಿ ಮೂರು  ರಾಶಿಯವರು ಮಾತ್ರ ಭಾರೀ ಅದೃಷ್ಟ ಪಡೆಯುತ್ತಾರೆ. ಈ ರಾಶಿಯವರು ಸಾಕಷ್ಟು ಪ್ರಗತಿ ಮತ್ತು ಹಣವನ್ನು ಗಳಿಸುತ್ತಾರೆ. ಶುಕ್ರನ ರಾಶಿಯ ಬದಲಾವಣೆಯು ಈ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. 

ಶುಕ್ರ ಸಂಕ್ರಮಣವು ಈ ರಾಶಿಯವರಿಗೆ ತರಲಿದೆ ಅದೃಷ್ಟ :  
ಮೇಷ: ವೃಷಭ ರಾಶಿಯಲ್ಲಿ ಶುಕ್ರನ ಸಂಚಾರವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅದರಲ್ಲೂ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಹೂಡಿಕೆ ಮಾಡಲು ಇದು ಶುಭ ಸಮಯ. ಕೈ ಸೇರದೇ ಇರುವ ಹಣ ಕೂಡಾ ಈ ಸಮಯದಲ್ಲಿ ಕೈ ಸೇರಲಿದೆ. 

ಇದನ್ನೂ ಓದಿ : Mahalakshmi Yog: ಜೂನ್ 18 ರಿಂದ ಈ 3 ರಾಶಿಗಳ ಜನರ ಭಾಗ್ಯದಲ್ಲಿ ಭಾರೀ ಬದಲಾವಣೆ, ಕಾರಣ ಇಲ್ಲಿದೆ

ಕರ್ಕಾಟಕ: ಶುಕ್ರನ ರಾಶಿ ಪರಿವರ್ತನೆಯು ಕರ್ಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರಲಿದೆ. ಅವರ ಆದಾಯ ಹೆಚ್ಚಾಗುತ್ತದೆ. ಕೆಲಸದಲ್ಲಿ ಲಾಭ ಹೆಚ್ಚಾಗುತ್ತದೆ. ಬಡ್ತಿ ಪಡೆಯುವ ಅವಕಾಶಗಳು ಹೆಚ್ಚು. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ಆದಾಯದ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಜೀವನದಲ್ಲಿ ಎಲ್ಲಾ ಸೌಕರ್ಯಗಳೂ ಹೆಚ್ಚಾಗುತ್ತವೆ. 

ಸಿಂಹ : ಸಿಂಹ ರಾಶಿಯವರಿಗೆ ಶುಕ್ರನ ಸಂಚಾರವು ಕೆಲಸದ ಸ್ಥಳದಲ್ಲಿ ಲಾಭವನ್ನು ತರುತ್ತದೆ. ದುಡಿಯುವ ವರ್ಗಕ್ಕೆ ಹೊಸ ಉದ್ಯೋಗ ದೊರೆಯಬಹುದು. ಸಿಹ ರಾಶಿಯವರಿಗೆ ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವುದು ಸಾಧ್ಯವಾಗುತ್ತದೆ.

ಇದನ್ನೂ ಓದಿ : Broom Keeping Tips: ಪೊರಕೆಗೆ ಸಂಬಂಧಿಸಿದ ಈ ನಿಯಮ ಪಾಲಿಸದೆ ಹೋದರೆ, ಕಷ್ಟಪಟ್ಟು ಸಂಪಾದಿಸಿದ ಹಣ ನಿಮ್ಮ ಬಳಿ ಉಳಿಯುವುದಿಲ್ಲ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News