ನವದೆಹಲಿ: ಅಮೆರಿಕಾದ ಕಾನ್ಸಾಸ್ ರಾಜ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಮಹಿಳಾ ಭಯೋತ್ಪಾದಕರಿಗೆ ತರಬೇತಿ ನೀಡಲು ಸಹಾಯ ಮಾಡಿದ ಆಲಿಸನ್ ಫ್ಲೂಕ್-ಎಕ್ರೆನ್ ಗೆ ಶಿಕ್ಷೆ ವಿಧಿಸಲಾಗಿದೆ.ಈಗ ವಿಚಾರಣೆಯ ಸಮಯದಲ್ಲಿ ಸಿರಿಯಾದಲ್ಲಿ ಐಸಿಸ್ ನ ಮಹಿಳಾ ತಂಡದ 100 ಕ್ಕೂ ಹೆಚ್ಚು ಹೋರಾಟಗಾರರಿಗೆ ತರಬೇತಿ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..
42 ವರ್ಷದ ಆಲಿಸನ್ ಫ್ಲೂಕ್-ಎಕ್ರೆನ್ 100ಕ್ಕೂ ಹೆಚ್ಚು ಮಹಿಳಾ ಭಯೋತ್ಪಾದಕರಿಗೆ ತರಬೇತಿ ನೀಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.ವೃತ್ತಿಯಲ್ಲಿ ತಾಯಿ ಮತ್ತು ಶಿಕ್ಷಕಿಯಾಗಿರುವ ಆಲಿಸನ್ ಫ್ಲೂಕ್-ಎಕ್ರೆನ್ ಐಸಿಸ್ ಬೆಟಾಲಿಯನ್‌ನ ನಾಯಕಿಯಾಗಿದ್ದರು.ದಾಖಲೆಗಳ ಪ್ರಕಾರ ಅವರು ಜನವರಿ 8, 2011 ರಂದು ಯುಎಸ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು.ಇದಕ್ಕೂ ಮೊದಲು ಅವರು ಈಜಿಪ್ಟ್ ಮತ್ತು ಲಿಬಿಯಾಗೆ ಪ್ರಯಾಣಿಸಿದ್ದರು.ತದನಂತರ 2014 ರಲ್ಲಿ ಅವರು ಸಿರಿಯಾಕ್ಕೆ ವಾಪಸ್ಸಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Moto G62 5G: ಕೈಗೆಟುಕುವ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೋಟೋರೊಲಾ
ಸಿರಿಯಾದಲ್ಲಿ ಸೆರೆಹಿಡಿಯಲ್ಪಟ್ಟ ಆಲಿಸನ್ ಅವರನ್ನು ಜನವರಿಯಲ್ಲಿ ಅಮೇರಿಕಾಕ್ಕೆ ಕರೆತರಲಾಗಿದ್ದು, ಈ ವರ್ಷದ ಅಕ್ಟೋಬರ್ 25 ರಂದು ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. 2019 ರಲ್ಲಿ ಆಲಿಸನ್ ಫ್ಲೂಕ್-ಎಕ್ರೆನ್ ಅವರ ವಿರುದ್ಧದ ಕ್ರಿಮಿನಲ್ ದೂರಿನಲ್ಲಿ ಅವರು ಯುಎಸ್ನಲ್ಲಿ ದಾಳಿ ನಡೆಸುವ ಬಗ್ಗೆ ಚರ್ಚಿಸಿದ್ದಾರೆ, ಅಷ್ಟೇ ಅಲ್ಲದೆ ಐಎಸ್ಐಎಲ್ ವಿಷಯಗಳನ್ನು ಇಂಗ್ಲಿಷ್ ಗೆ ಅನುವಾದಿಸಿರುವುದಕ್ಕೆ ಹಲವಾರು ಸಾಕ್ಷಿಗಳು ಲಭ್ಯ ಇವೆ ಎನ್ನಲಾಗಿದೆ.
ಐಸಿಸ್ ಜೊತೆಗಿನ ಒಡನಾಟದ ಮೊದಲು, ಆಲಿಸನ್ ಫ್ಲೂಕ್-ಎಕ್ರೆನ್ ಕಾನ್ಸಾಸ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಅವರು ಸಿರಿಯಾದಲ್ಲಿ ಐಸಿಸ್ ಪರವಾಗಿ ನಂಬಿಕೆಯಿಲ್ಲದವರನ್ನು ಸಾಯುವುದು ಮುಖ್ಯ ಎಂದು ಬಲವಾಗಿ ನಂಬಿದ್ದರು.ಪ್ರಾಸಿಕ್ಯೂಟರ್‌ಗಳ ಪ್ರಕಾರ, 2014 ರ ಮಧ್ಯದಲ್ಲಿ, ಫ್ಲೂಕ್-ಎಕ್ರೆನ್ ಯುಎಸ್ ಶಾಪಿಂಗ್ ಮಾಲ್ ಅಥವಾ ಕಾಲೇಜನ್ನು ಬಾಂಬ್ ಮಾಡುವ ಗುರಿಯನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.