Viral Video: ಸೈಕಲ್ ರೈಡ್ ಮಾಡುತ್ತಾ ಕೆಳಗೆ ಬಿದ್ದ ಗೋರಿಲ್ಲಾ..!

ಯಾವಾಗ ಗೋರಿಲ್ಲಾ ಕೆಳಗೆ ಬಿತ್ತೋ ಕೋಪದಿಂದ ನನಗೆ ಸೈಕಲ್ ಸಹವಾಸವೇ ಬೇಡವೆಂದು ಅದನ್ನು ದೂರ ಎಸೆಯುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.

Written by - Puttaraj K Alur | Last Updated : Jun 11, 2022, 09:26 AM IST
  • ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುವ ಗೋರಿಲ್ಲಾ
  • ಸೈಕಲ್ ತುಳಿಯುತ್ತಲೇ ಕೆಳಗೆಬಿದ್ದ ಗೋರಿಲ್ಲಾ ಮಾಡಿದ್ದೇನು..?
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
Viral Video: ಸೈಕಲ್ ರೈಡ್ ಮಾಡುತ್ತಾ ಕೆಳಗೆ ಬಿದ್ದ ಗೋರಿಲ್ಲಾ..! title=
ಕೆಳಗೆಬಿದ್ದ ಗೋರಿಲ್ಲಾ ಮಾಡಿದ್ದೇನು..?

ನವದೆಹಲಿ: ಗೋರಿಲ್ಲಾ ಮರ ಹತ್ತುವುದನ್ನು ಕೇಳಿದ್ದೀರಿ, ಮನುಷ್ಯರಂತೆ ಕೀಟಲೆ ಮಾಡುವುದನ್ನು ಸಹ ನೋಡಿರುತ್ತೀರಿ. ಆದರೆ, ನೀವು ಎಂದಾದರೂ ಸೈಕಲ್ ಸವಾರಿ ಮಾಡುವ ಗೋರಿಲ್ಲಾ ನೋಡಿದ್ದೀರಾ..? ಹಾಗಾದ್ರೆ ನೀವು ಈ ವಿಡಿಯೋ ನೋಡಲೇಬೇಕು. ಸದ್ಯ ಸೈಕಲ್ ಸವಾರಿ ಮಾಡುವ ಗೋರಿಲ್ಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಧೂಳೆಬ್ಬಿಸುತ್ತಿದೆ.

ಹೌದು, ಗೋರಿಲ್ಲಾ ಮನುಷ್ಯರಂತೆಯೇ ಸೈಕಲ್ ಸವಾರಿ ಮಾಡುತ್ತೆ. ಈ ವಿಡಿಯೋ ನೋಡಿದ್ರೆ ನೀವು ಸಹ ಆಶ್ಚರ್ಯಪಡುತ್ತೀರಿ. ವೈರಲ್ ಆಗಿರುವ ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸಾಮ್ರಾಟ್​ ಗೌಡ ಎಂಬುವರು  ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೈಕಲ್​​ ಸವಾರಿ ಮಾಡುತ್ತಿದ್ದ ಗೋರಿಲ್ಲಾ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದೆ.

ಇದನ್ನೂ ಓದಿ: Viral Video: ಉದ್ಘಾಟನೆ ವೇಳೆಯೇ ಕುಸಿದ ತೂಗು ಸೇತುವೆ, ಮೇಯರ್ ಸೇರಿ ಹಲವರು ಚರಂಡಿ ಪಾಲು!

ಯಾವಾಗ ಗೋರಿಲ್ಲಾ ಕೆಳಗೆ ಬಿತ್ತೋ ಕೋಪದಿಂದ ನನಗೆ ಸೈಕಲ್ ಸಹವಾಸವೇ ಬೇಡವೆಂದು ಅದನ್ನು ದೂರ ಎಸೆಯುವುದನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸೈಕಲ್ ಸವಾರಿ ಮಾಡುವ ಗೋರಿಲ್ಲಾ ಕಂಡು ನೆಟಿಜನ್‍ಗಳು ಅಚ್ಚರಿಪಟ್ಟಿದ್ದಾರೆ. ಅಲ್ಲದೆ ಸೈಕಲ್ ಸವಾರಿ ಮಾಡಲು ಹೋಗಿ ಬಿದ್ದಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ಕೇವಲ 9 ಸೆಕೆಂಡುಗಳಿರುವ ಈ ವಿಡಿಯೋ ನೋಡಿದ್ರೆ ನಿಮ್ಮ ಮೊಗದಲ್ಲಿ ಮಂದಹಾಸ ಮೂಡುತ್ತದೆ.

ಗೊರಿಲ್ಲಾ ಸೈಕಲ್​ ಸವಾರಿ ಮಾಡುವ ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ. ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಮನುಷ್ಯನಂತೆಯೇ ಗೋರಿಲ್ಲಾಗಳಿಗೂ ಎಲ್ಲಾ ರೀತಿಯ ಕೌಶಲ್ಯಗಳಿರುತ್ತವೆ. ಇದಕ್ಕೆ ಅಲ್ವಾ ‘ಮಂಗನಿಂದ ಮಾನವ’ ಅನ್ನೋದು ಅಂತಾ ಚರ್ಚಿಸಿದ್ದಾರೆ.

ಇದನ್ನೂ ಓದಿ: Viral Video: ಕುಚೇಷ್ಟೆ ಮಾಡಿದವನಿಗೆ ಒರಾಂಗೂಟಾನ್ ಮಾಡಿದ್ದೇನು ನೋಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News