Milk Cream For Skin: ಮೃದುವಾದ ಕಾಂತಿಯುತ ಚರ್ಮಕ್ಕಾಗಿ ಹಾಲಿನ ಕೆನೆಯನ್ನು ಈ ರೀತಿ ಬಳಸಿ

Face Beauty Tips: ಬೇಸಿಗೆಯಲ್ಲಿ ಸುಡುವ ಬಿಸಿಲಿನಿಂದ ಮುಖವು ಹೆಚ್ಚು ಒಣಗಬಹುದು ಮತ್ತು ನಿರ್ಜೀವವಾಗಬಹುದು. ಹೀಗಾಗಿ ಮುಖದ ಕಾಂತಿ ಕುಂದುತ್ತದೆ. ನೀವು ಮುಖದ ಹೊಳಪನ್ನು ಮರಳಿ ತರಲು ಹಾಲಿನ ಕೆನೆಯಿಂದ ತಯಾರಿಸಿದ ಪೇಸ್ಟ್ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

Written by - Yashaswini V | Last Updated : Jun 13, 2022, 11:41 AM IST
  • ಚರ್ಮಕ್ಕೆ ಹಾಲಿನ ಕೆನೆ ಹಚ್ಚುವುದರಿಂದ ಮುಖದಲ್ಲಿರುವ ಕಲ್ಮಶ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ
  • ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚುವುದರಿಂದ ಮುಖದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
  • ಮುಖದ ಚರ್ಮವು ಬೆಣ್ಣೆಯಂತೆ ಮೃದುವಾಗಿರಲು ಈ 3 ವಸ್ತುಗಳನ್ನು ಕ್ರೀಮ್‌ನಲ್ಲಿ ಮಿಶ್ರಣ ಮಾಡಿ ಬಳಸಿ
Milk Cream For Skin: ಮೃದುವಾದ ಕಾಂತಿಯುತ  ಚರ್ಮಕ್ಕಾಗಿ  ಹಾಲಿನ ಕೆನೆಯನ್ನು ಈ ರೀತಿ ಬಳಸಿ  title=
Skin Care Tips

ಮೃದುವಾದ ಚರ್ಮಕ್ಕಾಗಿ ಹಾಲಿನ ಕೆನೆ ಫೇಸ್ ಪ್ಯಾಕ್: ಹಲವರಿಗೆ ಹಾಲಿನೊಂದಿಗೆ ಕೆನೆ ಇದ್ದರೆ ಹಾಲು ಬಲು ರುಚಿ ಎಂದೆನಿಸುತ್ತದೆ. ಇನ್ನೂ ಕೆಲವರಿಗೆ ಹಾಲಿನ ಕೆನೆ ಎಂದರೆ ಇಷ್ಟವಾಗುವುದಿಲ್ಲ. ಆದರೆ, ಹಾಲಿನ ಕೆನೆಯನ್ನು ಚರ್ಮದ ಆರೈಕೆಗಾಗಿ ಬಳಸಬಹುದು. ಹಾಲಿನ ಕೆನೆಯು ಮೃದುವಾದ ಕಾಂತಿಯುತ ತ್ವಚೆ ಪಡೆಯಲು ಸಹಕಾರಿ ಎಂದು ಹೇಳಲಾಗುತ್ತದೆ. 

ಹೌದು, ಚರ್ಮಕ್ಕೆ ಹಾಲಿನ ಕೆನೆ ಹಚ್ಚುವುದರಿಂದ ಮುಖದಲ್ಲಿರುವ ಕಲ್ಮಶ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಮತ್ತು ಮುಖದ ಚರ್ಮವು ಕಾಂತಿಯುತ ಮತ್ತು ಮೃದುವಾಗುತ್ತದೆ.  ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚುವುದರಿಂದ ಮುಖದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಉತ್ತಮ ತ್ವಚೆಗಾಗಿ ಹಾಲಿನ ಕೆನೆಯಲ್ಲಿ ಯಾವ ವಸ್ತುಗಳನ್ನು ಬೆರೆಸಬೇಕು, ಅದನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

ಇದನ್ನೂ ಓದಿ- Coriander Leaves Benefits: ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ ಈ ಸಮಸ್ಯೆಗಳಿಗೂ ಪರಿಹಾರ ನೀಡುತ್ತೆ ಕೊತ್ತಂಬರಿ ಸೊಪ್ಪು

ಹಾಲಿ ಕೆನೆಯೊಂದಿಗೆ 3 ರೀತಿಯ ಫೇಸ್ ಪ್ಯಾಕ್ಗಳನ್ನು ತಯಾರಿಸಿ :
ಹಾಲಿನ ಕೆನೆ ಮತ್ತು ಅರಿಶಿನ:

ಹಾಲಿನ ಕೆನೆಯೊಂದಿಗೆ ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಒಣ ತ್ವಚೆಯೂ ಬೆಣ್ಣೆಯಂತೆ ಮೃದುವಾಗುತ್ತದೆ. ಇದಕ್ಕಾಗಿ, ಒಂದು ಚಮಚ ಕೆನೆಗೆ 2 ಚಿಟಿಕೆ ಅರಿಶಿನ ಪುಡಿ ಮತ್ತು ರೋಸ್ ವಾಟರ್ ಹನಿಗಳನ್ನು ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ಈಗ ಅದನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ಶುದ್ಧವಾದ ತಣ್ಣೀರಿನಿಂದ ಮುಖ ತೊಳೆಯಿರಿ.

ಹಾಲಿನ ಕೆನೆ ಮತ್ತು ಜೇನುತುಪ್ಪ:
ಹಾಲಿನ ಕೆನೆ ಮತ್ತು ಜೇನುತುಪ್ಪದ ಸಂಯೋಜನೆಯು ಮುಖದ ಚರ್ಮಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಮುಖವು ಆಳವಾಗಿ ತೇವಾಂಶದಿಂದ ಕೂಡಿರುತ್ತದೆ ಮತ್ತು ಅದ್ಭುತವಾದ ಹೊಳಪು ಕೂಡ ಬರುತ್ತದೆ. ಈ ಫೇಸ್ ಪ್ಯಾಕ್ ಅನ್ನು ತಯಾರಿಸಲು, ಸಮಾನ ಪ್ರಮಾಣದಲ್ಲಿ ಕೆನೆ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಅದನ್ನು ಮುಖಕ್ಕೆ ಅನ್ವಯಿಸಿ. ಸುಮಾರು 20 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. 

ಇದನ್ನೂ ಓದಿ- Weight Loss Food: ಈ ಆಹಾರ ಸೇವನೆಯಿಂದ ತೂಕ ಇಳಿಕೆ ಜೊತೆಗೆ ಮಲಬದ್ಧತೆಯಿಂದಲೂ ಪರಿಹಾರ

ಕಡಲೆ ಹಿಟ್ಟು ಮತ್ತು ಹಾಲಿನ ಕೆನೆ:
ಹಾಲಿನ ಕೆನೆ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿದರೆ, ಮುಖವು ಸರಿಯಾಗಿ ಟೋನ್ ಆಗುತ್ತದೆ ಮತ್ತು ಎಫ್ಫೋಲಿಯೇಟ್ ಆಗುತ್ತದೆ. ಇದರ ಸಹಾಯದಿಂದ, ಮುಖದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ನಿರ್ಜೀವ ಚರ್ಮವು ಸಹ ಜೀವ ಪಡೆಯುತ್ತದೆ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ ಅದು ಒಣಗಿದ ಬಳಿಕ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ಗೋಚರಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News