Men Health Tips: ಆಗಾಗ ಪುರುಷರು ಮಾಡುವ ಈ ತಪ್ಪುಗಳಿಂದ ಜೀವಕ್ಕೆ ಹಾನಿ..!

ಹಾಸಿಯಲ್ಲಿಯೇ ಆಹಾರ ಸೇವಿಸುವುದು ಮತ್ತು ಕೆಲಸ ಮಾಡುವುದು ಸರಿಯಲ್ಲ. ಇದರಿಂದ ನಿಮಗೆ ಆಲಸ್ಯತನ ಕಾಡುತ್ತದೆ. ಈ ಅಭ್ಯಾಸ ಸಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  

Written by - Puttaraj K Alur | Last Updated : Jun 13, 2022, 05:39 PM IST
  • ಪುರುಷರು ಕೆಲವು ಕೆಟ್ಟ ಅಭ್ಯಾಸಗಳಿಂದ ಆದಷ್ಟು ದೂರವಿರಬೇಕು
  • ಹಾಸಿಗೆಯಲ್ಲಿಯೇ ಆಹಾರ ಸೇವನೆ ಮತ್ತು ಕೆಲಸ ಮಾಡುವುದು
  • ಹಾಕಿಕೊಂಡ ಬಟ್ಟೆಯಲ್ಲಿಯೇ ಮಲಗುವುದು ಕೆಟ್ಟ ಅಭ್ಯಾಸ
Men Health Tips: ಆಗಾಗ ಪುರುಷರು ಮಾಡುವ ಈ ತಪ್ಪುಗಳಿಂದ ಜೀವಕ್ಕೆ ಹಾನಿ..! title=
ಪುರುಷರು ಈ ತಪ್ಪುಗಳನ್ನು ಮಾಡಬಾರದು

ನವದೆಹಲಿ: ಮಹಿಳೆಯರು ಸಾಮಾನ್ಯವಾಗಿ ಉತ್ತಮ ಹವ್ಯಾಸ ಹೊಂದಿರುವ ಪುರುಷರನ್ನು ಇಷ್ಟಪಡುತ್ತಾರೆ. ಆದರೆ, ಕೆಲವು ಪುರುಷರು ವಿಚಿತ್ರ ಅಭ್ಯಾಸಗಳನ್ನು ಹೊಂದಿರುತ್ತಾರೆ. ಇದನ್ನು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಈ ಅಭ್ಯಾಸಗಳ ವಿಚಾರದಲ್ಲಿ ಅನೇಕ ದಂಪತಿ ನಡುವೆ ಜಗಳವೂ ಆಗುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪುರುಷರು ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು & ಕೆಲವು ತಪ್ಪುಗಳನ್ನು ಪುನರಾವರ್ತಿಸಬಾರದು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪುರುಷರು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.   

ಪುರುಷರು ಈ ತಪ್ಪುಗಳನ್ನು ಮಾಡಬಾರದು

ನೇರವಾಗಿ ಮಲಗುವ ಕೋಣೆಗೆ ಹೋಗುವುದು

ಹೊರಗಿನಿಂದ ಬಂದ ನಂತರ ನೇರವಾಗಿ ಮಲಗುವ ಕೋಣೆಗೆ ಹೋಗುವ ಅಭ್ಯಾಸ ಮಹಿಳೆಯರಲ್ಲಿ ವಿರಳ. ಆದರೆ ಪುರುಷರಿಗೆ ಈ ಅಭ್ಯಾಸವಿದೆ. ಈ ಕಾರಣದಿಂದ ಅವರು ತಮ್ಮ ಮಲಗುವ ಕೋಣೆಯನ್ನು ಕಲುಷಿತಗೊಳಿಸುತ್ತಾರೆ. ಹೊರಗಡೆ ಸುತ್ತಾಡಿ ಬಂದು ನೇರವಾಗಿ ಮಲಗುವ ಕೋಣೆ ಪ್ರವೇಶಿಸಿದರೆ ನೀವು ಅನೇಕ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳನ್ನು ಹೊತ್ತು ತರುತ್ತೀರಿ. ಹೀಗಾಗಿ ಹೊರಗಿನಿಂದ ಬಂದ ನಂತರ ಮಲಗುವ ಕೋಣೆಗೆ ಬಟ್ಟೆ ಮತ್ತು ಬೂಟುಗಳನ್ನು ಹಾಕಿಕೊಂಡು ಬರಬಾದರು. ಏಕೆಂದರೆ ಇದರಿಂದ ಅನೇಕ ಸೋಂಕುಗಳು ನಿಮಗೆ ಸಮಸ್ಯೆ ತಂದೊಡ್ಡಬಹುದು. ಇದರಿಂದ ನೀವು ಗಂಭೀರ ಅನಾರೋಗ್ಯಕ್ಕೆ ತುತ್ತಾಗಲೂಬಹುದು. ಹೀಗಾಗಿ ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.

ಇದನ್ನೂ ಓದಿ: Water Benefits : ಬೆಳಿಗ್ಗೆ ಎದ್ದ ತಕ್ಷಣ ಯಾವ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು!

ಹಾಕಿಕೊಂಡ ಬಟ್ಟೆಯಲ್ಲಿಯೇ ಮಲಗುವುದು

ಸಾಮಾನ್ಯವಾಗಿ ಗಂಡಸರು ಕಚೇರಿಯಿಂದ ಬಂದ ನಂತರ ಎಲ್ಲಿಯಾದರೂ ಕುಳಿತುಕೊಳ್ಳುವ ಅಥವಾ ಹಾಕಿಕೊಂಡ ಬಟ್ಟೆಯಲ್ಲಿಯೇ ಮಲಗುವ ಕೆಟ್ಟ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸವು ತುಂಬಾ ಕೆಟ್ಟದು. ಏಕೆಂದರೆ ನೀವು ಹೊರಗಿನಿಂದ ಬಂದಾಗ ಬೆವರು, ಧೂಳು ನಿಮ್ಮ ಬಟ್ಟೆಯಲ್ಲಿರುತ್ತದೆ. ಈ ರೀತಿ ನೀವು ಧೀರ್ಘಕಾಲದವರೆಗೆ ಮಾಡಿದರೆ ಚರ್ಮದ ಸೋಂಕು ಉಂಟಾಗುತ್ತದೆ. ಆದ್ದರಿಂದ ಹೊರಗಿನಿಂದ ಬಂದ ನಂತರ ನೀವು ಬಟ್ಟೆಗಳನ್ನು ಬದಲಾಯಿಸಬೇಕು.

ಹಾಸಿಗೆಯಲ್ಲಿ ಆಹಾರ ಸೇವನೆ ಮತ್ತು ಕೆಲಸ

ಅನೇಕರಿಗೆ ಈ ಅಭ್ಯಾಸ ರೂಢಿಯಾಗಿರುತ್ತದೆ. ಹಾಸಿಯಲ್ಲಿಯೇ ಆಹಾರ ಸೇವಿಸುವುದು ಮತ್ತು ಕೆಲಸ ಮಾಡುವುದು ಸರಿಯಲ್ಲ. ಇದರಿಂದ ನಿಮಗೆ ಆಲಸ್ಯತನ ಕಾಡುತ್ತದೆ. ಈ ಅಭ್ಯಾಸ ಸಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ.  

ಇದನ್ನೂ ಓದಿ: ಮಧುಮೇಹ ಇರುವವರು ಈ ಹಳದಿ ಚಪಾತಿ ತಿಂದರೆ ನಿಯಂತ್ರಣಕ್ಕೆ ಬರುತ್ತದೆ ರಕ್ತದಲ್ಲಿನ ಸಕ್ಕರೆ ಮಟ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News