ಭಾರತ v/s ದಕ್ಷಿಣ ಆಫ್ರಿಕಾ 4ನೇ T20 ಲೈವ್ ಸ್ಟ್ರೀಮಿಂಗ್: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?

ಸದ್ಯ ಸರಣಿಯಲ್ಲಿ 2-1 ರಿಂದ ಹಿನ್ನೆಡೆ ಅನುಭವಿಸಿರುವ ರಿಷಭ್ ಪಂತ್ ಪಡೆ 4ನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಲು ಹೋರಾಟ ನಡೆಸಲಿದೆ.

Written by - Puttaraj K Alur | Last Updated : Jun 17, 2022, 11:23 AM IST
  • ಇಂದು ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 4ನೇ ಟಿ-20 ಪಂದ್ಯ
  • ಭಾರತದ ವಿರುದ್ಧ ಸರಣಿ ಗೆಲುವಿನ ಉತ್ಸಾಹದಲ್ಲಿರುವ ದಕ್ಷಿಣ ಆಫ್ರಿಕಾ ತಂಡ
  • ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ತವಕದಲ್ಲಿರುವ ಭಾರತ
ಭಾರತ v/s ದಕ್ಷಿಣ ಆಫ್ರಿಕಾ 4ನೇ T20 ಲೈವ್ ಸ್ಟ್ರೀಮಿಂಗ್: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು? title=
ಟೀಂ ಇಂಡಿಯಾ V/s ದಕ್ಷಿಣ ಆಫ್ರಿಕಾ

ನವದೆಹಲಿ: ವಿಶಾಖಪಟ್ಟಣಂನಲ್ಲಿ 48 ರನ್‌ಗಳ ಗೆಲುವು ಸಾಧಿಸಿದ ನಂತರ ಟೀಂ ಇಂಡಿಯಾ ಸರಣಿ ಸೋಲಿನ ಭೀತಿಯಿಂದ ಪಾರಾಗಿದೆ. ಶುಕ್ರವಾರ ಅಂದರೆ ಇಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ 4ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸಮಬಲಗೊಳಿಸುವ ತವಕದಲ್ಲಿದೆ.  

ವಿಶಾಖಪಟ್ಟಣಂನ ಪಂದ್ಯದಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಾಗಿತ್ತು. ಋತುರಾಜ್ ಗಾಯಕ್ವಾಡ್(57) ಮತ್ತು ಇಶಾನ್ ಕಿಶನ್(54) ಮೊದಲ ವಿಕೆಟ್‍ಗೆ 97 ರನ್‍ಗಳ ಜೊತೆಯಾಟವಾಡಿ ಮಿಂಚಿದ್ದರು. ಹೀಗಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಗಳ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಗಿತ್ತು. ದೆಹಲಿ ಮತ್ತು ಕಟಕ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ಕಳಪೆ ಬೌಲಿಂಗ್‍ ನಿಂದಾಗಿ ಹೀನಾಯ ಸೋಲು ಕಾಣಬೇಕಾಗಿತ್ತು. ಆದರೆ 3ನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಹಾಲ್ ಮಾರಕ ವೌಲಿಂಗ್ ಮಾಡುವ ಮೂಲಕ ದ.ಆಫ್ರಿಕಾ ತಂಡವನ್ನು 131 ರನ್‌ಗಳಿಗೆ ಆಲೌಟ್ ಮಾಡಿದರು.

ಇದನ್ನೂ ಓದಿ: IND vs SA : ರಿಷಬ್ ಪಂತ್ ಕೈಯಲ್ಲಿದೆ ಈ 4 ಆಟಗಾರರ ಅದೃಷ್ಟ : ಇವರಿಗೆ ಮಾಡು ಇಲ್ಲವೇ ಮಡಿ ಪಂದ್ಯ!

ಸದ್ಯ ಸರಣಿಯಲ್ಲಿ 2-1 ರಿಂದ ಹಿನ್ನೆಡೆ ಅನುಭವಿಸಿರುವ ರಿಷಭ್ ಪಂತ್ ಪಡೆ 4ನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಸುಧಾರಣೆ ಮಾಡಿಕೊಂಡು ಭಾರತ ತಂಡವು ಕಣಕ್ಕಿಳಿಯಬೇಕಿದೆ. ಹಿಂದಿನ ಪಂದ್ಯಗಳ ತಪ್ಪುಗಳನ್ನು ಸರಿಪಡಿಸಿಕೊಂಡು ಆಟಗಾರರು ಆಡಬೇಕಿದೆ. ದಕ್ಷಿಣ ಆಫ್ರಿಕಾ ತಂಡವು ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದ್ದು ಸರಣಿ ಗೆಲುವಿನ ಉತ್ಸಾಹದಲ್ಲಿದೆ. ಹೀಗಾಗಿ ಹರಿಣಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಹಾಕುವ ತಂತ್ರವನ್ನು ಭಾರತೀಯ ಬೌಲರ್ ಗಳು ಪ್ರಯೋಗಿಸಬೇಕಿದೆ.    

ಪಂದ್ಯದ ವಿವರ

ಭಾರತ vs ದಕ್ಷಿಣ ಆಫ್ರಿಕಾ, 4ನೇ T20

ದಿನಾಂಕ ಮತ್ತು ಸಮಯ: ಜೂನ್ 17, 2022 (ಶುಕ್ರವಾರ), 7 PM IST

ಸ್ಥಳ: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ರಾಜ್‌ಕೋಟ್

ಭಾರತದಲ್ಲಿ IND vs SA 4ನೇ T20 ಲೈವ್ ಸ್ಟ್ರೀಮಿಂಗ್ ಹೇಗೆ ವೀಕ್ಷಿಸುವುದು?

IND vs SA 4ನೇ T20 ಪಂದ್ಯದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿರುತ್ತದೆ.

IND vs SA ಪ್ಲೇಯಿಂಗ್ XI

ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ

ಇದನ್ನೂ ಓದಿ: "ನನ್ನನ್ನು ಹಲವು ಬಾರಿ ಕೈಬಿಡಲಾಗಿತ್ತು, ತಂಡಕ್ಕೆ ಮರಳಬೇಕೆನ್ನುವುದು ನನ್ನ ಉತ್ಕಟ ಬಯಕೆಯಾಗಿತ್ತು"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News