MPPSC exam sparks controversy: ಮಧ್ಯಪ್ರದೇಶದ ರಾಜ್ಯ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಮಧ್ಯಪ್ರದೇಶ ಲೋಕಸೇವಾ ಆಯೋಗ (MPPSC) ಆಕಾಂಕ್ಷಿಗಳು ಮತ್ತು ರಾಜಕೀಯ ಮುಖಂಡರಿಂದ ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದೆ.
ಇದನ್ನೂ ಓದಿ: Actor Diganth: ಗೋವಾ ಟ್ರಿಪ್ಲ್ಲಿದ್ದ ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಧ್ಯಪ್ರದೇಶ ಲೋಕಸೇವಾ ಆಯೋಗ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಅಂತಾರಾಷ್ಟ್ರೀಯ ವಿವಾದದಲ್ಲಿ ಸಿಲುಕಿರುವ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಇತ್ತು.
ಅಂತರ್ಜಾಲದಲ್ಲಿ ಕಾಣಿಸಿಕೊಂಡ MPPSC ಪ್ರಶ್ನೆ ಪತ್ರಿಕೆಯು ಬಹು ಆಯ್ಕೆಯ ಪ್ರಶ್ನೆಯನ್ನು ಹೊಂದಿದೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕೇ? ಬೇಡವೇ? ಎಂದು ಕೇಲಲಾಗಿತ್ತು. ಈ ಪ್ರಶ್ನೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟು ಮಾಡಿತು.
ಈ ಪ್ರಶ್ನೆಗೆ Yes, as it will help the economic situation of India ಮತ್ತು No, as it will increase the demand of the Pakistan administration ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ವರದಿಗಳ ಪ್ರಕಾರ, ಮಧ್ಯಪ್ರದೇಶ ನಾಗರಿಕ ಸೇವೆಗಳ ಪರೀಕ್ಷೆ 2022 ರ ಕೀ ಆನ್ಸರ್ ಶೀಟ್ ಬಹು ಆಯ್ಕೆಯ ಪ್ರಶ್ನೆಯ ಎರಡನೇ ಆಯ್ಕೆ ಸರಿಯಾಗಿದೆ ಎಂದು ತೋರಿಸಿದೆ.
ಇದನ್ನೂ ಓದಿ: ಜೀವನ ಸುತ್ತಾಟದ ಸುತ್ತ "ರಂಗಿನ ರಾಟೆ", ಕುತೂಹಲದ ಹೆಚ್ಚಿಸಿದ ಚಿತ್ರದ ಪೋಸ್ಟರ್
ಅದೇನೇ ಇರಲಿ, ಪ್ರಶ್ನೆ ಪತ್ರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.