/kannada/photo-gallery/aishwarya-rai-bachchan-this-actress-who-is-the-owner-of-800-crore-property-has-only-one-daughter-221372 800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ? 800 ಕೋಟಿ ಆಸ್ತಿಯ ಒಡತಿಯಾದ ಈ ನಟಿಗೆ ಇರೋದು ಒಬ್ಬಳೆ ಮಗಳು.. ವಿಚ್ಛೇದನ ವಿಚಾರಕ್ಕೆ ಸುದ್ದಿಯಲ್ಲಿರುವ ಈ ಚೆಲುವೆ ಯಾರು ಗೊತ್ತಾ? 221372

ನವದೆಹಲಿ : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ರಾಜ್ಯಪಾಲ ಕೊಶ್ಯಾರಿ ಅವರನ್ನು ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ಠಾಕ್ರೆ ಸರ್ಕಾರದ ಮೇಲೆ ಬಿಕ್ಕಟ್ಟಿನ ಕಾರ್ಮೋಡ ಸುಳಿದಾಡುತ್ತಿರುವ ಸಂದರ್ಭದಲ್ಲಿಯೇ ಭಗತ್ ಸಿಂಗ್ ಕೊಶ್ಯಾರಿಗೆ ಕರೋನವೈರಸ್ ಸೋಂಕು ತಗುಲಿದೆ.  

ಶಿವಸೇನಾ ಶಾಸಕ ಮತ್ತು ಸಚಿವ ಏಕನಾಥ್ ಶಿಂಧೆ ಸರ್ಕಾರದ ವಿರುದ್ದ ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಸಂದರ್ಭ ಎದುರಾಗಬಹುದು. ಬಹುಮತ ಸಾಬೀತಿಗೆ ರಾಜ್ಯಪಾಲರು ಒಪ್ಪಿಗೆ ನೀಡುತ್ತಾರೆ. 

ಇದನ್ನೂ ಓದಿ :  Maharashtra Political Crisis: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯ ಹಿಂಟ್‌ ಕೊಟ್ಟ ರಾವತ್‌

ಉದ್ಧವ್ ಠಾಕ್ರೆ ಸರ್ಕಾರದ ಬಳಿ ಅಗತ್ಯ ಶಾಸಕರ ಬೆಂಬಲ ಇಲ್ಲ ಎಂದು ರಾಜ್ಯಪಾಲರಿಗೆ ಅನಿಸಿದರೆ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬಹುದು. ಆದರೆ ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಿರುವಾಗ ಈ ಹೆಚ್ಚುವರಿ ಜವಾಬ್ದಾರಿಯನ್ನು ಬೇರೆ ರಾಜ್ಯದ ರಾಜ್ಯಪಾಲರಿಗೆ ವಹಿಸಿಕೊಡಬಹುದು. 

ಸರ್ಕಾರ ನಡೆಸಲು ಬೇಕಾಗಿರುವಷ್ಟು ಶಾಸಕರ ಸಂಖ್ಯೆ ಇದೆಯೇ ಎನುವುದನ್ನು ಸಾಬೀತು ಪಡಿಸುವುದನ್ನು ಫ್ಲೋರ್ ಟೆಸ್ಟಿಂಗ್ ಎಂದು ಕರೆಯುತ್ತಾರೆ. ಇದು ಸಾಂವಿಧಾನಿಕ ವ್ಯವಸ್ಥೆಯಾಗಿದ್ದು, ರಾಜ್ಯಪಾಲರಿಂದ ನೇಮಕಗೊಂಡ ಮುಖ್ಯಮಂತ್ರಿ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ. 

ಇದನ್ನೂ ಓದಿ :  Maharashtra Political Crisis : ಶಿಂಧೆ-ಬಿಜೆಪಿ, ಶಿವಸೇನೆ-BJP : ಇವರಿಗೆ ಮಹಾದಲ್ಲಿ ಸರ್ಕಾರ ರಚಿಸಲು ಈ 5 ಆಯ್ಕೆಗಳು!

ಈ ಸಂದರ್ಭದಲ್ಲಿ ಬಹುಮತವನ್ನು ಪ್ರತಿಪಾದಿಸುವ ಪಕ್ಷ/ಮೈತ್ರಿಕೂಟದ ನಾಯಕರು ವಿಶ್ವಾಸ ಮತವನ್ನು ಪಡೆದುಕೊಳ್ಳಬೇಕು ಮತ್ತು ವಿಧಾನಸಭೆಯಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವವರ ಮೂಲಕ  ತಮ್ಮ ಬಹುಮತವನ್ನು ಸಾಬೀತುಪಡಿಸಬೇಕು. ಈ ವೇಳೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದರೆ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. 

ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಅವರು ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಪತ್ರವನ್ನು ಫ್ಯಾಕ್ಸ್ ಮಾಡಬಹುದು ಎನ್ನಲಾಗಿದೆ.  ಸುಮಾರು 40 ಶಾಸಕರು ಮಹಾವಿಕಾಸ್ ಅಘಾಡಿ ಸರ್ಕಾರದಿಂದ ಬೆಂಬಲ ವಾಪಸ್ ಪಡೆಯುವ ಬಗ್ಗೆ ಹಕ್ಕು ಮಂಡಿಸಬಹುದು. ಉದ್ಧವ್ ಸರ್ಕಾರವು ಬಹುಮತವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಕೂಡಾ ಎದುರಾಗಬಹುದು. 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Section: 
English Title: 
maharastra governor bhagat singh koshyari coroina positive
News Source: 
Home Title: 

ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ಕರೋನಾ.! ಬಹುಮತ ಸಾಬೀತಿಗೆ ಅನುಮೋದನೆ ನೀಡುವವರು ಯಾರು ?

ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ಕರೋನಾ.! ಬಹುಮತ ಸಾಬೀತಿಗೆ  ಅನುಮೋದನೆ ನೀಡುವವರು ಯಾರು ?
Caption: 
Bhagat Singh Koshyari (file photo)
Yes
Is Blog?: 
No
Tags: 
Facebook Instant Article: 
Yes
Highlights: 

ಮಹಾ ಸರ್ಕಾರದಲ್ಲಿ ಎದುರಾಗಿದೆ ಬಿಕ್ಕಟ್ಟು 

ಸರ್ಕಾರದ ವಿರುದ್ದ ಬಂಡಾಯವೆದ್ದಿರುವ ಏಕನಾಥ್ ಶಿಂಧೆ

ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಕರೋನಾ ಸೋಂಕು 

Mobile Title: 
ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿಗೆ ಕರೋನಾ.! ಬಹುಮತ ಸಾಬೀತಿಗೆ ಅನುಮೋದನೆ ನೀಡುವವರು ಯಾರು ?
Ranjitha R K
Publish Later: 
No
Publish At: 
Wednesday, June 22, 2022 - 12:34
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No