ಪೆಟ್ರೋಲ್‌ ಚಾಲಿತ ಸ್ಕೂಟರ್‌ ಗಿಂತಲೂ ಅಗ್ಗ ಈ ಎಲೆಕ್ಟ್ರಿಕ್ ಸ್ಕೂಟರ್‌ ಗಳು ..!

ಇದೀಗ ಅತಿ ಕಡಿಮೆ ಬೆಲೆಗೆ ಅಂದರೆ ಪೆಟ್ರೋಲ್ ಚಾಲಿತ ಸ್ಕೂಟರ್‌ಗಳಿಗಿಂತ ಕಡಿಮೆ ಬೆಲೆಗೆ  ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಿಗುತ್ತವೆ.  ಈ ಸ್ಕೂಟರ್ ಗಳ ಬೆಲೆಗಳು 45,000ರೂಪಾಯಿಯಿಂದ  ಪ್ರಾರಂಭವಾಗುತ್ತವೆ. 

Written by - Ranjitha R K | Last Updated : Jun 23, 2022, 02:43 PM IST
  • ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
  • ಪೆಟ್ರೋಲ್ ಚಾಲಿತ ಸ್ಕೂಟರ್‌ಗಳಿಗಿಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು
  • ಈ ಸ್ಕೂಟರ್ ಗಳ ಬೆಲೆಗಳು 45,000ರೂಪಾಯಿಯಿಂದ ಪ್ರಾರಂಭವಾಗುತ್ತವೆ.
ಪೆಟ್ರೋಲ್‌  ಚಾಲಿತ ಸ್ಕೂಟರ್‌ ಗಿಂತಲೂ ಅಗ್ಗ ಈ ಎಲೆಕ್ಟ್ರಿಕ್ ಸ್ಕೂಟರ್‌ ಗಳು ..!  title=
Most Affordable Electric Scooters

ಬೆಂಗಳೂರು : ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಪೆಟ್ರೋಲ್ ಬೆಲೆ ಹೆಚ್ಚಳದ ಮಧ್ಯೆ, ಬಹುತೇಕ ಮಂದಿ  ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ವಾಲುತ್ತಿದ್ದಾರೆ. ಇದೀಗ ಅತಿ ಕಡಿಮೆ ಬೆಲೆಗೆ ಅಂದರೆ ಪೆಟ್ರೋಲ್ ಚಾಲಿತ ಸ್ಕೂಟರ್‌ಗಳಿಗಿಂತ ಕಡಿಮೆ ಬೆಲೆಗೆ  ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಿಗುತ್ತವೆ.  ಈ ಸ್ಕೂಟರ್ ಗಳ ಬೆಲೆಗಳು 45,000ರೂಪಾಯಿಯಿಂದ  ಪ್ರಾರಂಭವಾಗುತ್ತವೆ.  

ಏವನ್ ಇ ಸ್ಕೂಟ್
ಎಕ್ಸ್ ಶೋ ರೂಂ ಬೆಲೆ 45,000 ರೂ :
ಏವನ್ ಇ ಸ್ಕೂಟ್ ಬೆಲೆ 45,000 ರೂ. ಇದು 215 ವ್ಯಾಟ್ BLDC ಮೋಟಾರ್ ಅನ್ನು ಹೊಂದಿದೆ.  ಇದರ 48v/20ah ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 6-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 65 ಕಿಮೀ/ಚಾರ್ಜ್ ಶ್ರೇಣಿಯನ್ನು ನೀಡುತ್ತದೆ. ಗಂಟೆಗೆ 24 ಕಿಮೀ ವೇಗವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. 

ಇದನ್ನೂ ಓದಿ : ಔಷಧಿಗಳ ಖರೀದಿ, ಮೆಡಿಕಲ್ ಕನ್ಸಲ್ ಟೆಶನ್ ಎರಡೂ ಅಗ್ಗ ..! ಎಸ್‌ಬಿಐ ನೀಡುತ್ತಿದೆ ಈ ವಿಶೇಷ ಸೌಲಭ್ಯ

ಬೌನ್ಸ್ ಇನ್ಫಿನಿಟಿ ಇ1
ಎಕ್ಸ್ ಶೋ ರೂಂ ಬೆಲೆ - 45,099  ರೂ. :

ಬೌನ್ಸ್ ಇನ್ಫಿನಿಟಿ E1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಬ್ಯಾಟರಿ ಪ್ಯಾಕ್ ಇಲ್ಲದ ಇನ್ಫಿನಿಟಿ ಇ1 ಬೆಲೆ 45,099 ರೂ. ಮತ್ತು ಬ್ಯಾಟರಿ ಪ್ಯಾಕ್ ಹೊಂದಿರುವ ಇನ್ಫಿನಿಟಿ ಇ1 ಬೆಲೆ68,999.  ರೂ. ಇದು 1500 ವ್ಯಾಟ್ BLDC ಮೋಟಾರ್ ಅನ್ನು ಹೊಂದಿದ್ದು, 85 ಕಿಮೀ/ಚಾರ್ಜ್‌ನ ವ್ಯಾಪ್ತಿಯನ್ನು ನೀಡುತ್ತದೆ.

ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ :
ಎಕ್ಸ್ ಶೋ ರೂಂ ಬೆಲೆ - 46,640 . ರೂ :

ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಬೆಲೆ  46,640 ರೂಯಿಂದ ಪ್ರಾರಂಭವಾಗಿ 59,640 ರೂಪಾಯಿವರೆಗೆ ಏರುತ್ತದೆ. ಇ-ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ - LX VRLA ಮತ್ತು ಉನ್ನತ ರೂಪಾಂತರವಾದ ಫ್ಲ್ಯಾಶ್ LX. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಗಂಟೆಗೆ 25 ಕಿಮೀ ವೇಗವನ್ನು ಪಡೆಯುತ್ತದೆ. 

ಇದನ್ನೂ ಓದಿ : ಚೀನಾ ಬಳಿ ಆರ್ಥಿಕ ನೆರವು ಕೋರಿದ ಪಾಕಿಸ್ತಾನ.. 2.3 ಬಿಲಿಯನ್ ಡಾಲರ್ ಸಾಲ ಸೌಲಭ್ಯ ಒಪ್ಪಂದಕ್ಕೆ ಸಹಿ

ಅವನ್ ಟ್ರೆಂಡ್ ಇ :
ಎಕ್ಸ್ ಶೋ ರೂಂ ಬೆಲೆ - 56,900 ರೂ :

ಅವನ್ ಟ್ರೆಂಡ್ ಇ ಬೆಲೆ 56,900  ರೂ .  ಇದನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಸಿಂಗಲ್-ಬ್ಯಾಟರಿ ಪ್ಯಾಕ್ ಮತ್ತು ಡಬಲ್-ಬ್ಯಾಟರಿ ಪ್ಯಾಕ್. ಸಿಂಗಲ್-ಬ್ಯಾಟರಿ ಚಾಲಿತ ರೂಪಾಂತರವು 60 ಕಿಮೀ ವ್ಯಾಪ್ತಿಯನ್ನು ಹೊಂದಿದ್ದರೆ ಡಬಲ್-ಬ್ಯಾಟರಿ ಚಾಲಿತ ರೂಪಾಂತರವು 110 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಎರಡೂ ರೂಪಾಂತರಗಳ ಗರಿಷ್ಠ ವೇಗ ಗಂಟೆಗೆ 45 ಕಿಮೀ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News