/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

Varsha Rutu 2022: ಈ ದಿನದಿಂದ ವರ್ಷಾ ಋತುವಿನ ಆಗಮನ, ಸುಖ-ಸಮೃದ್ಧಿಗಾಗಿ ಈ ಉಪಾಯಗಳನ್ನು ಅನುಸರಿಸಿ

Ashadh Amavasya - ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ದಿನ ಪಿತೃರಿಗಾಗಿ ದಾನ ಮತ್ತು ತರ್ಪಣ ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ.   

Written by - Nitin Tabib | Last Updated : Jun 27, 2022, 08:53 PM IST
  • ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
  • ಈ ಅಮಾವಾಸ್ಯೆಯನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ.
  • ಈ ದಿನ ಪಿತೃರಿಗಾಗಿ ದಾನ ಮತ್ತು ತರ್ಪಣ ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ.
Varsha Rutu 2022: ಈ ದಿನದಿಂದ ವರ್ಷಾ ಋತುವಿನ ಆಗಮನ, ಸುಖ-ಸಮೃದ್ಧಿಗಾಗಿ ಈ ಉಪಾಯಗಳನ್ನು ಅನುಸರಿಸಿ title=
Ashadh Amavasya 2022

Varsha Rutu 2022 Beginning -ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ದಿನ ಪಿತೃರಿಗಾಗಿ ದಾನ ಮತ್ತು ತರ್ಪಣ ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಅಮಾವಾಸ್ಯೆ ತಿಥಿಯನ್ನು ಪಿತೃದೋಷ ಹಾಗೂ ಕಾಲಸರ್ಪ ದೋಷ ನಿವಾರಣೆಗೆ ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಆಷಾಢ ಅಮಾವಾಸ್ಯೆಯ ದಿನ ಕೆಲ ಉಪಾಯಗಳನ್ನು ಅವಶ್ಯವಾಗಿ ಮಾಡಬೇಕು. ಹಾಗಾದರೆ ಬನ್ನಿ ಆ ಉಪಾಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಆಷಾಢ ಅಮಾವಾಸ್ಯೆಯ ದಿನ ಸ್ನಾನ, ದಾನ, ಶ್ರಾದ್ಧ ಹಾಗೂ ವೃತ ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ಮಾನ್ಯತೆಗಳ ಪ್ರಕಾರ, ಈ ದಿನದಿಂದ ವರ್ಷ ಋತು ಆರಂಭವಾಗುತ್ತದೆ. ರೈತರ ವತಿಯಿಂದ ಆಚರಿಸಲಾಗುವ ಅಮಾವಾಸ್ಯೆಗಳಲ್ಲಿ ಆಷಾಢ ಅಮಾವಾಸ್ಯೆ ಕೂಡ ಒಂದು. ಈ ದಿನ ಅನ್ನದಾತರು ತಮ್ಮ ಎತ್ತುಗಳಿಗೆ ಕೆಲಸ ಕೊಡುವುದಿಲ್ಲ ಮತ್ತು ಅವುಗಳನ್ನು ಮೇಯಲು ಮೈದಾನಕ್ಕೆ ಬಿಡುತ್ತಾರೆ. 

ಈ ದಿನ ರೈತರು ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳ ಪೂಜೆ ಕೂಡ ನೆರವೇರಿಸುತ್ತಾರೆ. ಉತ್ತಮ ಮಳೆ ಮತ್ತು ಬೆಳೆಗಾಗಿ ರೈತರು ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುವುದರಿಂದ ಉತ್ತಮ ಬೆಲೆ ಬರುತ್ತದೆ ಎಂಬುದು ರೈತರ ನಂಬಿಕೆಯಾಗಿದೆ. ಇದಲ್ಲದೆ ಮನೆಯಲ್ಲಿ ಧನ-ಧಾನ್ಯ ಹೆಚ್ಚಾಗುತ್ತದೆ. 

ಈ ದಿನ ಬೆಳಗ್ಗೆ ಸ್ನಾನ ಮಾಡಿ ಪವಿತ್ರ ಜಲದಲ್ಲಿ ಕರಿ ಎಳ್ಳನ್ನು ಬೆರೆಸಿ ಪಿತೃರಿಗೆ ತರ್ಪಣ ನೀಡಲಾಗುತ್ತದೆ. ಈ ದಿನ ಬ್ರಾಹ್ಮಣರಿಗೆ ಭೋಜನ ನೀಡಿ, ದಾನ-ದಕ್ಷಿಣೆಯನ್ನು ನೀಡಬೇಕು. ಕಾಗೆ, ಹಸು ಹಾಗೂ ನಾಯಿಗೂ ಕೂಡ ಭೋಜನದ ಒಂದು ಅಂಶವನ್ನು ನೀಡಬೇಕು. 
ಆಶಾಢ ಅಮಾವಾಸ್ಯೆಯ ದಿನ ಅಶ್ವತ್ಥ ಮರದ ಪೂಜೆಗೆ ವಿಶೇಷ ಮಹತ್ವವಿದೆ. ಇದಲ್ಲದೆ ದೀಪ ದಾನಕ್ಕು ಕೂಡ ವಿಶೇಷ ಮಹತ್ವವಿದೆ. ಈ ದಿನ ತರ್ಪಣ ಕಾರ್ಯ ಮಾಡುವುದರಿಂದ ಪಿತೃರ ಆತ್ಮಕ್ಕೆ ಶಾಂತಿ ಸಿಗುತ್ತದೆ. 

ಇದನ್ನೂ ಓದಿ-Budh Gochar 2022; ಜುಲೈ 2 ರಿಂದ 17 ರವರೆಗೆ ಈ ಮೂರು ರಾಶಿಗಳಿಗೆ ಲಾಭವೇ ಲಾಭ, ಕಾರಣ ಇಲ್ಲಿದೆ

ಆಷಾಢ ಅಮಾವಾಸ್ಯೆಯ ದಿನ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಬೇಕು. ಇದರ ಜೊತೆಗೆ ಶನಿ ಪೂಜೆ ಹಾಗೂ ಆಂಜನೇಯನ ಉಪಾಸನೆಯನ್ನು ಕೈಗೊಳ್ಳಬೇಕು. ಎಲೆಗಳಿಂದ ತಯಾರಿಸಲಾದ ಒಂದು ಪಾತ್ರೆಯಲ್ಲಿ ದೀಪ ಹಾಗೂ ಹೂವುಗಳನ್ನಿಟ್ಟು ನೀರಿನ ಪ್ರವಾಹದಲ್ಲಿ ಹರಿಬಿಡಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ರೀತಿಯ ಸಂಕಷ್ಟಗಳ ನಿವಾರಣೆಯಾಗುತ್ತದೆ. 

ಇದನ್ನೂ ಓದಿ-Guru Vakri 2022: ಶನಿಯ ಹಿಮ್ಮುಖ ಚಲನೆಯ ಬಳಿಕ ಈ ದಿನಾಂಕದಿಂದ ಬೃಹಸ್ಪತಿಯ ವಕ್ರ ನಡೆ ಆರಂಭ, ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.