ಕಿಚ್ಚ ಸುದೀಪ್‌ ಅವರನ್ನು ನೋಡಬೇಕಂತೆ ಆ್ಯಸಿಡ್ ಸಂತ್ರಸ್ತೆ!

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ನೋಡುವ ಆಸೆ ವ್ಯಕ್ತಪಡಿಸಿದ್ದಾಳೆ. 

Written by - VISHWANATH HARIHARA | Edited by - Zee Kannada News Desk | Last Updated : Jun 28, 2022, 02:21 PM IST
  • ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿ ಪ್ರಕರಣ
  • ಆ್ಯಸಿಡ್ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ
  • ಕಿಚ್ಚ ಸುದೀಪ್‌ ಅವರನ್ನು ನೋಡಬೇಕಂತೆ ಆ್ಯಸಿಡ್ ಸಂತ್ರಸ್ತೆ!
ಕಿಚ್ಚ ಸುದೀಪ್‌ ಅವರನ್ನು ನೋಡಬೇಕಂತೆ ಆ್ಯಸಿಡ್ ಸಂತ್ರಸ್ತೆ!   title=
ಕಿಚ್ಚ ಸುದೀಪ್‌

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆ್ಯಸಿಡ್ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ನೋಡುವ ಆಸೆ ವ್ಯಕ್ತಪಡಿಸಿದ್ದಾಳೆ. 

ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ 

ಕುಟುಂಬದವರ ಮುಂದೆ ಇಂಗಿತ ವ್ಯಕ್ತಪಡಿಸಿರುವ ಯುವತಿ, ನಾನು ಸುದೀಪ್ ಅಪ್ಪಟ ಅಭಿಮಾನಿಯಾಗಿದ್ದು, ಅವರ ಅಭಿನಯದ ಸಾಕಷ್ಟು ಚಿತ್ರಗಳನ್ನ ನೋಡಿದ್ದೇನೆ. ನನಗೆ ಅವರ ಎಲ್ಲಾ ಸಿನಿಮಾಗಳೂ ಇಷ್ಟ. ಆ್ಯಸಿಡ್ ದಾಳಿಗೆ ಒಳಗಾಗುವ ಮುನ್ನವೂ ನಾನು ಅವರ ಸಿನಿಮಾಗಳನ್ನು ನೋಡಿದ್ದೇನೆ ನಾನು ಅವರನ್ನು ಭೇಟಿಯಾಗಬೇಕು ಎಂದಿದ್ದಾಳೆ.

ಸಂತ್ರಸ್ತೆ ಇನ್ನೂ ಕೂಡ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಗಾಗಲೇ ಅವರಿಗೆ ಎರಡು ಬಾರಿ ಬ್ಲಡ್ ಮತ್ತು ಸ್ಕಿನ್ ಪ್ಲಾಂಟೇಷನ್ ಸರ್ಜರಿ ನಡೆಸಲಾಗಿದೆ. ಈ ನಡುವೆ ಕುಟುಂಬಸ್ಥರ ಬಳಿ ಸುದೀಪ್ ನೋಡುವ ಆಸೆ ಹೇಳಿಕೊಂಡಿದ್ದಾಳೆ. ಈ ಸಂಕಟದ ನಡುವೆಯೂ ಅವರು ನಾಲ್ಕು ಬಾರಿ ಸುದೀಪ್‌ ನೋಡಬೇಕು ಅಂತಾ ಕೇಳಿದ್ದಾಳೆ. ಸದ್ಯಕ್ಕೆ ಯುವತಿಯನ್ನು ಸಮಾಧಾನಪಡಿಸಲು ಕುಟುಂಬದವರು ಸುದೀಪ್  ಬ್ಯುಸಿಯಾಗಿದ್ದಾರೆ ಅಂತಾ ಸಮಾಧಾನ ಮಾಡಿದ್ದಾರಂತೆ. 

ಅನಾರೋಗ್ಯಕ್ಕೆ ತುತ್ತಾದ ಅನೇಕ ಅಭಿಮಾನಿಗಳನ್ನು ಕಿಚ್ಚ  ಭೇಟಿಯಾಗಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಈ ಅಭಿಮಾನಿಯ ಆಸೆಯನ್ನೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಡೇರಿಸಲಿ ಎಂಬುಂದು ಕುಟುಂಸ್ಥರ ಒತ್ತಾಸೆಯಾಗಿದೆ. ಕುಟುಂಬಸ್ಥರ ಈ ಮನವಿಗೆ ಕಿಚ್ಚ ಸ್ಪಂದಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಆ್ಯಂಕರ್​ ಅನುಶ್ರೀಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ನಟ ಶಿವರಾಜ್‌ ಕುಮಾರ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News