ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ‘ಬ್ರಿಟಿಷ್ ಸಂಸತ್ತಿನಲ್ಲಿ ಇಂಡಿಯನ್ ಆಫ್ ದಿ ವರ್ಲ್ಡ್’ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಯುಕೆ ಸಂಸತ್ತಿನಲ್ಲಿ 'ಇಂಡೋ-ಯುಕೆ ಸಂಬಂಧಗಳು' ಕುರಿತು ಮಾತನಾಡಲು ಇದು ಗೌರವದ ಸಂಗತಿಯಾಗಿದೆ ಮತ್ತು ಇದೆ ಸಂದರ್ಭದಲ್ಲಿ ಯುಕೆ ಸಂಸತ್ತಿನಲ್ಲಿ 'ಇಂಡಿಯನ್ ಆಫ್ ದಿ ವರ್ಲ್ಡ್' ಪ್ರಶಸ್ತಿಯನ್ನು ಸ್ವೀಕರಿಸಿದೆ" ಎಂದು ಅವರು ಬರೆದುಕೊಂಡಿದ್ದಾರೆ.
It was an honour to speak on ‘Indo-UK relations’ at UK Parliament & also received ‘Indian of the World’ award at UK Parliament.
Today,with efforts of our PM @narendramodi ji,India-UK relation has become robust & is expanding at federal,state & local levels🙏#London @RamiRanger pic.twitter.com/joWYQx5NRj— AMRUTA FADNAVIS (@fadnavis_amruta) July 2, 2022
ಇದೇ ವೇಳೆ ಅಮೃತಾ ಫಡ್ನವೀಸ್ ಅವರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿಸುತ್ತಾ, ಅವರ ಪ್ರಯತ್ನಗಳಿಂದ ಭಾರತ-ಯುಕೆ ಸಂಬಂಧಗಳು ದೃಢವಾಗಿವೆ ಮತ್ತು ಒಕ್ಕೂಟ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ವಿಸ್ತರಿಸುತ್ತಿವೆ ಎಂದು ಹೇಳಿದ್ದಾರೆ.
ಜೂನ್ 29 ರಂದು ಲಂಡನ್ಗೆ ಬಂದಿಳಿದ ಫಡ್ನವಿಸ್ ಅವರು ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿ ಮಹಾರಾಷ್ಟ್ರದ ಸ್ಥಿರತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.