ಬೆಂಗಳೂರು: ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ 'ರಂಗಿತರಂಗ' ಸಿನಿಮಾ ರಿಲೀಸ್ ಆಗಿ ಇಂದಿಗೆ 7 ವರ್ಷ ತುಂಬಿದೆ. ಈ ಹೊತ್ತಲ್ಲೇ ಸಿಹಿಸುದ್ದಿ ಒಂದು ಸಿಕ್ಕಿದ್ದು, ಕನ್ನಡ ಸಿನಿಮಾ 'ರಂಗಿತರಂಗ' ಬಾಲಿವುಡ್ಗೆ ಹಾರಲು ಸಜ್ಜಾಗಿದೆ. ಅಂದಹಾಗೆ 'ರಂಗಿತರಂಗ' 7 ವರ್ಷಗಳ ಹಿಂದೆ ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಸೃಷ್ಟಿಮಾಡಿತ್ತು. ಹೊಸ ಪ್ರಯತ್ನದಲ್ಲಿ, ತಮ್ಮ ಮೊದಲ ಸಿನಿಮಾದಲ್ಲೇ ಅನೂಪ್ ಭಂಡಾರಿ ದೊಡ್ಡ ಸಕ್ಸಸ್ ಪಡೆದಿದ್ದರು.
ಸ್ಯಾಂಡಲ್ವುಡ್ ಮಾತ್ರವಲ್ಲದೆ ದೇಶಾದ್ಯಂತ 'ರಂಗಿತರಂಗ' ಸಂಚಲನ ಸೃಷ್ಟಿಸಿತ್ತು. 'ರಂಗಿತರಂಗ'ಕ್ಕೆ 7 ವರ್ಷ ತುಂಬಿರುವ ಸಂದರ್ಭವನ್ನು ಮೆಲುಕು ಹಾಕಿರುವ ಡೈರೆಕ್ಟರ್ ಅನೂಪ್ ಭಂಡಾರಿ, ‘ನಾನು ಇಂದು ಏನಾಗಿರುವೆನೋ ಅದಕ್ಕೆಲ್ಲಾ ಕಾರಣ ನೀವು. 7 ವರ್ಷದ ಹಿಂದೆ ನಮ್ಮ ಮೇಲೆ ತೋರಿಸಿದ ಪ್ರೀತಿ ಇದು’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಅಭಿಮಾನಿಗಳನ್ನು ನೆನೆದು ಸೋಷಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಖ್ಯಾತ ಹಾಸ್ಯನಟನಿಗೆ ಸಂಕಷ್ಟ ತಂದ ಒಪ್ಪಂದ: 7 ವರ್ಷಗಳ ಬಳಿಕ ವಿದೇಶದಲ್ಲಿ ಕೇಸ್ ದಾಖಲು
'ರಂಗಿತರಂಗ' ಬಾಲಿವುಡ್ಗೆ..?
ದಕ್ಷಿಣ ಭಾರತದ ಸಿನಿಮಾ ಕಥೆಗಳಿಗೆ ಬಾಲಿವುಡ್ ಅಂಗಳದಲ್ಲಿ ಭಾರೀ ಡಿಮ್ಯಾಂಡ್ ಇದೆ. ಅದ್ರಲ್ಲೂ 'ರಂಗಿತರಂಗ' ಸಿನಿಮಾ ರೀಮೇಕ್ ರೈಟ್ಸ್ ಪಡೆದುಕೊಳ್ಳಲು ಹಲವರು ಪ್ರಯತ್ನ ಮುಂದುವರಿಸಿದ್ದಾರೆ. ಹಲವು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ ಇದೀಗ ಈ ಕುರಿತು ಮಾತುಕತೆ ಫೈನಲ್ ಸ್ಟೇಜ್ಗೆ ಬಂದಿದೆ ಎನ್ನಲಾಗುತ್ತಿದೆ. ಪ್ರೊಡ್ಯೂಸರ್ ಒಬ್ಬರು 'ರಂಗಿತರಂಗ' ರೀಮೇಕ್ ಮಾಡಲು ಇಚ್ಛಿಸಿದ್ದು, ಮುಂಬೈನ ಕಾರ್ಪೊರೇಟ್ ಸ್ಟುಡಿಯೋ ಜೊತೆಗೂ ಈ ಕುರಿತು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
'ರಂಗಿತರಂಗ' ಸಿನಿಮಾದಲ್ಲಿ ಅನೂಪ್ ಸಹೋದರ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಅಭಿನಯಿಸಿದ್ದರು. ರಾಧಿಕಾ ನಾರಾಯಣ್ ಹಾಗೂ ಸಾಯಿ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇನ್ನು ಈ ಸಿನಿಮಾಗೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದರು. ಹೀಗೆ 7 ವರ್ಷಗಳ ಹಿಂದೆ 'ರಂಗಿತರಂಗ' ರಿಲೀಸ್ ಆಗಿ ಯಾರೂ ಊಹಿಸಲು ಸಾಧ್ಯವಾಗದ ಯಶಸ್ಸು ಕಂಡಿತ್ತು. ಇದೀಗ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿ ರೀಮೇಕ್ ರೈಟ್ಸ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ. ಸದ್ಯ ಅನೂಪ್ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ಘರ್ಜಿಸಲು ಕೌಂಟ್ಡೌನ್ ಶುರುವಾಗಿದೆ. ಈ ಹೊತ್ತಲ್ಲೇ 'ರಂಗಿತರಂಗ' ಕೂಡ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಇದನ್ನೂ ಓದಿ: Liger : ಬೆತ್ತಲಾಗಿ ಟ್ರೋಲ್ಗೆ ಒಳಗಾದ ನಟ ವಿಜಯ್ ದೇವರಕೊಂಡ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ