Trigrahi Yoga: ತ್ರಿಗ್ರಾಹಿ ಯೋಗದಿಂದ ಬದಲಾಗಲಿದೆ 3 ರಾಶಿಯವರ ಭವಿಷ್ಯ

Trigrahi Yoga: ಈ ತಿಂಗಳು ಮಿಥುನ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳು ತ್ರಿಗ್ರಾಹಿ ಯೋಗವನ್ನು ರೂಪುಸುತ್ತಿವೆ. ಒಂದೇ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳ ಸಂಯೋಜನೆಯಿಂದ ಈ ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಈ ತ್ರಿಗ್ರಾಹಿ ಯೋಗವು ಮೂರು ರಾಶಿಯವರಿ ಹಣದ ಮಳೆ ಸುರಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 7, 2022, 09:19 AM IST
  • ಮಿಥುನ ರಾಶಿಯಲ್ಲಿ ಬುಧ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತದೆ.
  • ಈ ಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ
  • ತ್ರಿಗ್ರಾಹಿ ಯೋಗವು ಈ ಜನರಿಗೆ ಅವರ ವೃತ್ತಿಜೀವನದಲ್ಲಿ ದೊಡ್ಡ ಸಾಧನೆ, ಪ್ರಚಾರ ಮತ್ತು ಹಣವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
Trigrahi Yoga: ತ್ರಿಗ್ರಾಹಿ ಯೋಗದಿಂದ ಬದಲಾಗಲಿದೆ 3 ರಾಶಿಯವರ ಭವಿಷ್ಯ  title=
Trigrahi Yoga Effects

ತ್ರಿ​ಗ್ರಾಹಿ ಯೋಗದ ಪರಿಣಾಮ: ಜುಲೈ ತಿಂಗಳಲ್ಲಿ ಪ್ರಮುಖ ಗ್ರಹಗಳ ರಾಶಿ ಬದಲಾವಣೆ ಸಂಭವಿಸಲಿದ್ದು ಇದು ದ್ವಾದಶ ರಾಶಿಗಳ ಮೇಲೂ ಪರಿಹಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿಚಕ್ರ ಬದಲಾವಣೆ ಜೊತೆಗೆ ಗ್ರಹಗಳ ಸಂಯೋಜನೆಯೂ ಸಹ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಈ ತಿಂಗಳು ಜುಲೈ 13ರಂದು ಶುಕ್ರ ಗ್ರಹವು ರಾಶಿ ಬದಲಾವಣೆ ಮಾಡುವ ಮೂಲಕ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗ್ರಹಗಳ ರಾಜ ಸೂರ್ಯ ಹಾಗೂ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧನು ಈಗಾಗಲೇ ಮಿಥುನ ರಾಶಿಯಲ್ಲಿ ನೆಲೆಸಿದ್ದಾರೆ. ಇದೀಗ ಇದೇ ರಾಶಿಯಲ್ಲಿ ಭೌತಿಕ ಸುಖಗಳಿಗೆ ಕಾರಣಕರ್ತ ಎಂದೇ ಪರಿಗಣಿಸಲಾಗಿರುವ ಶುಕ್ರನ ಪ್ರವೇಶವಾಗಲಿದೆ. ಇದರೊಂದಿಗೆ ಮಿಥುನ ರಾಶಿಯಲ್ಲಿ ಬುಧ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ತ್ರಿಗ್ರಾಹಿ ಯೋಗವನ್ನು ರೂಪಿಸುತ್ತದೆ. 

ತ್ರಿಗ್ರಾಹಿ ಯೋಗವು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ಈ ಯೋಗವು ಅದೃಷ್ಟವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ತ್ರಿಗ್ರಾಹಿ ಯೋಗವು ಈ ಜನರಿಗೆ ಅವರ ವೃತ್ತಿಜೀವನದಲ್ಲಿ ದೊಡ್ಡ ಸಾಧನೆ, ಪ್ರಚಾರ ಮತ್ತು ಹಣವನ್ನು ನೀಡುತ್ತದೆ ಎನ್ನಲಾಗುತ್ತಿದ್ದು, ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ. 

ಇದನ್ನೂ ಓದಿ- Shukra Gochar 2022: ಜುಲೈ ತಿಂಗಳಲ್ಲಿ ಈ 3 ರಾಶಿಯವರಿಗೆ ವಿಶೇಷ ಲಾಭ ನೀಡಲಿದ್ದಾನೆ ಶುಕ್ರ

ತ್ರಿಗ್ರಾಹಿ ಯೋಗವು ಈ ಜನರ ಅದೃಷ್ಟವನ್ನು ಬೆಳಗಿಸುತ್ತದೆ :
ಜುಲೈ 13ರಂದು ಶುಕ್ರ ಗ್ರಹವು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯಲ್ಲಿ ಸಾಗಲಿದ್ದಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ತ್ರಿಗ್ರಾಹಿ ಯೋಗವು ಈ ರಾಶಿಚಕ್ರ ಜನರ ಅದೃಷ್ಟವನ್ನು ಬೆಳಗಿಸುತ್ತದೆ.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಬಹಳಷ್ಟು ಲಾಭವನ್ನು ನೀಡುತ್ತದೆ. ವಿಶೇಷವಾಗಿ ಹಣಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯುತ್ತವೆ. ಇದ್ದಕ್ಕಿದ್ದಂತೆ ನೀವು ಹಣ ಪಡೆಯುತ್ತೀರಿ. ಇದುವರೆಗೆ ಬಾಕಿ ಇದ್ದ ಹಣವೂ ಸಿಗಲಿದೆ. ಒಟ್ಟಾರೆಯಾಗಿ, ಈ ಸಮಯದಲ್ಲಿ ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ. ಮಾಧ್ಯಮ, ಚಲನಚಿತ್ರೋದ್ಯಮ ಅಥವಾ ಮಾರ್ಕೆಟಿಂಗ್‌ನೊಂದಿಗೆ ಸಂಬಂಧ ಹೊಂದಿರುವ ಅಂತಹ ಜನರು ಹೊಸ ಉದ್ಯೋಗವನ್ನು ಪಡೆಯಬಹುದು. ಆದಾಯದ ಹೊಸ ಮೂಲಗಳು ದೊರೆಯಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಲಾಭ ಗಳಿಸುವ ಅವಕಾಶವೂ ದೊರೆಯಲಿದೆ. 

ಸಿಂಹ ರಾಶಿ:
ತ್ರಿಗ್ರಾಹಿ ಯೋಗದಿಂದ ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ. ಹೊಸ ರೀತಿಯಲ್ಲಿ ಧನಲಾಭ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಇರುತ್ತದೆ. ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ-ವ್ಯವಹಾರದಲ್ಲಿ ದೊಡ್ಡ ಸಾಧನೆ ಮಾಡಬಹುದು. ಗೌರವ-ಪ್ರಶಸ್ತಿ ಪಡೆಯಬಹುದು. ವೆಚ್ಚಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ನೀವು ಹಣ ಉಳಿಸಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ- Bathing with Salt Water: ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಬಹುದು. ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯನ್ನು ನೀಡುತ್ತದೆ. ಸಂಬಳ ಹೆಚ್ಚಳದ ಜೊತೆಗೆ ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ವ್ಯಾಪಾರಿಗಳಿಗೆ ಬಹಳ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ. ಅದರಲ್ಲೂ ವಿದೇಶೀ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವವರು ಹೆಚ್ಚು ಲಾಭ ಪಡೆಯಬಹುದು. ಒಟ್ಟಾರೆಯಾಗಿ ನಿಮ್ಮ ಸರ್ವತೋಮುಖ ಪ್ರಗತಿಯ ದೃಷ್ಟಿಯಿಂದ ಇದು ತುಂಬಾ ಶುಭ ಯೋಗವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News