Bigg Boss Kannada: ಶುರುವಾಗಲಿದೆ ಮಿನಿ ಬಿಗ್​ಬಾಸ್! ಯಾರಿಗೆಲ್ಲ ಅವಕಾಶ?

Bigg Boss mini season: ಕನ್ನಡದಲ್ಲಿ ಅನೇಕ ರಿಯಾಲಿಟಿ ಶೋಗಳಿವೆ. ಅವುಗಳಲ್ಲಿ ಜನರ ಹಾಟ್‌ ಫೆವರೇಟ್‌ ಶೋ ಅಂದ್ರೆ ಅದು ಬಿಗ್‌ ಬಾಸ್‌. ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್‌ ಬಾಸ್‌ ಕನ್ನಡದಲ್ಲಿ ಬರಲಿವೆ. 

Written by - Chetana Devarmani | Last Updated : Jul 11, 2022, 10:54 AM IST
  • ಶುರುವಾಗಲಿದೆ ಬಿಗ್‌ ಬಾಸ್‌ ಮಿನಿ ಸೀಸನ್‌
  • ವೂಟ್‌ ಸೆಲೆಕ್ಟ್ ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರ
  • 42 ದಿನಗಳ ಕಾಲ ಪ್ರಸಾರವಾಗಲಿರುವ ಮಿನಿ ಬಿಗ್‌ ಬಾಸ್‌
Bigg Boss Kannada: ಶುರುವಾಗಲಿದೆ ಮಿನಿ ಬಿಗ್​ಬಾಸ್! ಯಾರಿಗೆಲ್ಲ ಅವಕಾಶ?  title=
ಮಿನಿ ಬಿಗ್‌ ಬಾಸ್‌

Mini Bigg Boss Kannada: ಕನ್ನಡದಲ್ಲಿ ಅನೇಕ ರಿಯಾಲಿಟಿ ಶೋಗಳಿವೆ. ಅವುಗಳಲ್ಲಿ ಜನರ ಹಾಟ್‌ ಫೆವರೇಟ್‌ ಶೋ ಅಂದ್ರೆ ಅದು ಬಿಗ್‌ ಬಾಸ್‌. ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್‌ ಬಾಸ್‌ ಕನ್ನಡದಲ್ಲಿ ಬರಲಿವೆ. ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ನೋಡಲು ಜನರು ಕಾದು ಕುಳಿತಿರುತ್ತಾರೆ. ಬಿಗ್ ಬಾಸ್ ಸೀಸನ್ 9 ಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಅದಕ್ಕೂ ಮುನ್ನ ಮಿನಿ ಬಿಗ್ ಬಾಸ್ ಶುರುವಾಗಲಿದ್ದು, ಇದು ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: Vikrant Rona: ಆಪರೇಷನ್‌ ಥಿಯೇಟರ್‌ನಲ್ಲೂ ರಕ್ಕಮ್ಮನದ್ದೇ ಹವಾ!

ಈ ವರ್ಷವೂ ಬಿಗ್‌ಬಾಸ್‌ ಮಿನಿ ಸೀಸನ್ ಇರಲಿದೆ ಎಂಬ ವಿಚಾರ ಹೊರಬಿದ್ದಿದೆ. ಕಲರ್ಸ್‌ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆರಂಭವಾಗುವ ಮೊದಲೇ ವೂಟ್‌ ಸೆಲೆಕ್ಟ್ ನಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ಪ್ರಸಾರವಾಗಲಿದೆ. ಬಿಗ್‌ ಬಾಸ್‌ ಮಿನಿ ಸೀಸನ್‌ 42 ದಿನಗಳ ಕಾಲ ಪ್ರಸಾರವಾಗಲಿದೆ. 

ಈ ಬಿಗ್‌ ಬಾಸ್‌ ಮಿನಿ ಸೀಸನ್‌ ಮುಗಿದ ಬಳಿಕ ಬಿಗ್‌ಬಾಸ್ ಸೀಸನ್ 9 ಶುರುವಾಗಲಿದೆ. ಇಂಟರ್‌ನೆಟ್‌ ಸ್ಟಾರ್‌ಗಳು, ಇನ್‌ಫ್ಲುಯೆನ್ಸರ್‌ಗಳು ಈ ಬಾರಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ. ವೂಟ್ ಸೆಲೆಕ್ಟ್‌ನಲ್ಲಿ 15 ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಇಲ್ಲಿ ದೊಡ್ಡ ದೊಡ್ಡ ಸೆಲಿಬ್ರಿಟಿಗಳ ಬದಲು ಇಂಟರ್‌ನೆಟ್‌ ಸ್ಟಾರ್‌ಗಳು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದವರು, ಇನ್‌ಫ್ಲುಯೆನ್ಸರ್‌ಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಈ ಪೈಕಿ ಯಾರು ಜನರಿಗೆ ಹೆಚ್ಚು ಮನರಂಜನೆ ನೀಡ್ತಾರೋ, ಯಾರು ಜನರನ್ನ ಹೆಚ್ಚು ಸೆಳೆಯುವ ಇಬ್ಬರನ್ನು ಬಿಗ್‌ಬಾಸ್‌ ಮೈನ್ ಶೋಗೆ ಸೆಲೆಕ್ಟ್‌ ಮಾಡಲಿದ್ದಾರಂತೆ.  

ಪ್ರತಿ ಬಾರಿಯಂತೆ ಈ ಸಲವೂ ಕಿಚ್ಚ ಸುದೀಪ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಿನಿ ಬಿಗ್‌ ಬಾಸ್‌ ಸೀಸನ್‌ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಗಳು, ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಸೀಸನ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. 90 ದಿನಗಳ ಕಾಲ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಪ್ರಸಾರವಾಗಲಿದೆ. ಒಟಿಟಿಯಲ್ಲಿ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಮಿನಿ ಸೀಸನ್‌ ಅನ್ನು ಸಹ ಕಿಚ್ಚ ಸುದೀಪ್ ಅವರೆ ನಡೆಸಿಕೊಡಲಿರುವುದು ವಿಶೇಷವಾಗಿದೆ. ಬಳಿಕ ಮೇನ್‌ ಬಿಗ್ ಬಾಸ್ ಜವಾಬ್ದಾರಿ ಸಹ ಕಿಚ್ಚನದ್ದೇ ಆಗಿದೆ.  

ಇದನ್ನೂ ಓದಿ: ಈ ಬಾರಿ ಎರಡೆರಡು Bigg Boss! ಶೀಘ್ರದಲ್ಲೇ ಆರಂಭ.. ಸಾರಥಿ ಯಾರು ಗೊತ್ತೇ?

ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಚಿರ ಪರಿಚಿತರಾಗಿರುವ ಶಿವ ಪುತ್ರ, ರೂರಲ್‌ ರಂಜನ್‌, ಡ್ರೋನ್‌ ಪ್ರತಾಪ್‌ ಸೇರಿದಂತೆ ಇನ್ನೂ ತಮ್ಮ ಆಕ್ಟಿಂಗ್‌, ಡಿಫರಂಟ್‌ ಕಂಟೆಂಟ್‌ ಮೂಲಕ ಜನರನ್ನು ಸೋಶಿಯಲ್‌ ಮೀಡಿಯಾದಲ್ಲಿ ರಂಜಿಸುತ್ತಿರುವ ಜನರ ಪಟ್ಟಿ ಸಿದ್ಧವಾಗಿದ್ದು, ಇನ್ನಷ್ಟೇ ಅಂತಿಮವಾಗಬೇಕಿದೆ. ಈಗಾಗಲೇ ಬಿಗ್‌ ಬಾಸ್‌ ಮಿನಿ ಸೀಸನ್‌ ಸ್ಪರ್ಧಿಗಳ ಆಯ್ಕೆಗೆ ತಂಡವೊಂದು ಕೆಲಸ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಮಿಂಚಿರುವ ವ್ತಕ್ತಿಗಳ ಜೊತೆಮಾತನಾಡುತ್ತಿದ್ದಾರಂತೆ. ಆದರೆ ಇವರಲ್ಲಿ ಯಾರೆಲ್ಲ ಮಿನಿ ಬಿಗ್‌ ಬಾಸ್‌ನಲ್ಲಿರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News