SBI ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಇಂದು ಮಧ್ಯ ರಾತ್ರಿಯಿಂದ ಈ ದರಗಳು ಹೆಚ್ಚಾಗಲಿವೆ

SBI Interest Rate:ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ MCLR ದರಗಳಲ್ಲಿ 10 ಬೇಸಿಸ್ ಪಾಯಿಂಟ್ ನಷ್ಟು ಹೆಚ್ಚಳ ಮಾಡಿದೆ. ಹೊಸ ದರಗಳು ಜುಲೈ 15 ಅಂದರೆ, ನಾಳೆಯಿಂದ ಅನ್ವಯಿಸಲಿವೆ. ಬ್ಯಾಂಕ್ ನ ಹೊಸ ಎಂಸಿಎಲ್ಆರ್ ದರಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jul 14, 2022, 08:13 PM IST
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಸಾಲ ತೆಗೆದುಕೊಳ್ಳುವುದು ದುಬಾರಿಯಾಗಲಿದೆ.
  • ಬ್ಯಾಂಕ್ ಮತ್ತೊಮ್ಮೆ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ.
  • ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ವಿವಿಧ ಅವಧಿಗಳಿಗೆ ಎಂಸಿಎಲ್‌ಆರ್ ದರಗಳನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.
SBI ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಇಂದು ಮಧ್ಯ ರಾತ್ರಿಯಿಂದ ಈ ದರಗಳು ಹೆಚ್ಚಾಗಲಿವೆ title=
SBI Interest Rate

SBI Interest Rate: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಸಾಲ ತೆಗೆದುಕೊಳ್ಳುವುದು ದುಬಾರಿಯಾಗಲಿದೆ. ಬ್ಯಾಂಕ್ ಮತ್ತೊಮ್ಮೆ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬ್ಯಾಂಕ್ ವಿವಿಧ ಅವಧಿಗಳಿಗೆ ಎಂಸಿಎಲ್‌ಆರ್ ದರಗಳನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಹೊಸ ದರಗಳು ನಾಳೆಯಿಂದ ಅಂದರೆ ಜುಲೈ 15 ರಿಂದ ಅನ್ವಯಿಸಲಿವೆ ಎಂದು ಬ್ಯಾಂಕ್ ತಿಳಿಸಿದೆ. MCLR ದರಗಳ ಹೆಚ್ಚಳವು ಗ್ರಾಹಕರ EMI ಮೇಲೆ ನೇರ ಪರಿಣಾಮ ಬೀರುತ್ತದೆ. ಬ್ಯಾಂಕಿನ ಹೊಸ MCLR ದರಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,

ಇತ್ತೀಚಿನ ದರಗಳು ಯಾವುವು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ರಾತ್ರಿಯೇ ಜಾರಿಗೆ ಬರುವಂತೆ 3 ತಿಂಗಳವರೆಗೆ ಬ್ಯಾಂಕಿನ MCLR ದರ ಇದೀಗ ಶೇ. 7.05 ರ ಬದಲಿಗೆ ಶೇ.7.15ರಷ್ಟು ಇರಲಿದೆ. ಇದೇ ವೇಳೆ 6 ತಿಂಗಳ ಎಂಸಿಎಲ್‌ಆರ್‌ ದರ ಶೇ. 7.35 ರ ಬದಲಿಗೆ ಶೇ 7.45 ರಷ್ಟು ಇರಲಿದೆ ಮತ್ತು 1 ವರ್ಷದ ಎಂಸಿಎಲ್‌ಆರ್‌ ಶೇ.7.40 ರ ಬದಲಿಗೆ ಶೇ.7.50 ರಷ್ಟು ಇರಲಿದೆ.

ಬ್ಯಾಂಕ್ ಪ್ರಕಾರ, ಜುಲೈ 15 ರಿಂದ, ಗ್ರಾಹಕರು 2 ವರ್ಷಗಳ ಎಂಸಿಎಲ್‌ಆರ್‌ಗೆ ಶೇ.7.60 ರ ಬದಲು ಶೇ.7.70 ಮತ್ತು 3 ವರ್ಷಗಳ ಎಂಸಿಎಲ್‌ಆರ್‌ಗೆ ಶೇ. 7.70 ರ ಬದಲಿಗೆ ಶೇ.7.80 ರಷ್ಟು ಪಾವತಿಸಬೇಕಾಗಲಿದೆ.

ಕಳೆದ ತಿಂಗಳೂ ಹೆಚ್ಚಿಸಲಾಗಿದೆ
ಕಳೆದ ಒಂದು ತಿಂಗಳಲ್ಲಿ ಎಸ್‌ಬಿಐ ಎರಡನೇ ಬಾರಿಗೆ ತನ್ನ ಎಂಸಿಎಲ್‌ಆರ್ ದರಗಳನ್ನು ಪರಿಷ್ಕರಿಸಿದೆ. ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್, ಈ ಹಿಂದೆ ಜೂನ್ 15 ರಂದು ತನ್ನ MCLR ಅನ್ನು ಪರಿಷ್ಕರಿಸಿತ್ತು. ಎಂಸಿಎಲ್‌ಆರ್‌ನಲ್ಲಿ ಈ ಹೆಚ್ಚಳದಿಂದ, ಇದೀಗ ಬ್ಯಾಂಕ್‌ನ ಗ್ರಾಹಕರು ಮೊದಲಿಗಿಂತ ಹೆಚ್ಚು ಇಎಂಐ ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Maruti Altoಗಿಂತಲೂ ಹೆಚ್ಚು ಮೈಲೇಜ್ ಕೊಡುವ ಕಾರಿದು.! ಬೆಲೆ ಕೂಡಾ ಕಡಿಮೆ

ಕಠಿಣ ನಿಲುವು ತೆಗೆದುಕೊಂಡ ಆರ್‌ಬಿಐ
ದೇಶದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಠಿಣ ನಿಲುವು ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ತನ್ನ ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ನೀತಿ ದರಗಳನ್ನು ಪರಿಷ್ಕರಿಸುವುದಾಗಿ ಸೆಂಟ್ರಲ್ ಬ್ಯಾಂಕ್ ಸೂಚಿಸಿದೆ. ಇದಕ್ಕೂ ಮೊದಲು, ಆರ್‌ಬಿಐ ಎರಡು ಬಾರಿ ಅಂದರೆ, ಮೇ ಹಾಗೂ ಜೂನ್ ನಲ್ಲಿ ಬಡ್ಡಿದರಗಳನ್ನು ಹೆಚ್ಚಿಸಿದೆ. 

ಇದನ್ನೂ ಓದಿ-Petrol Diesel Price: ಈ ರಾಜ್ಯದಲ್ಲಿ ಪೆಟ್ರೋಲ್ 5, ಡೀಸೆಲ್ 3 ರೂ. ಇಳಿಕೆ..!

ಆರ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸಿದ ನಂತರ, ಎಲ್ಲಾ ಪ್ರಮುಖ ಬ್ಯಾಂಕ್‌ಗಳು ತಮ್ಮ ಬಡ್ಡಿದರಗಳನ್ನು ಹೆಚ್ಚಿಸುತ್ತಲೇ ಇವೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News