ಭಾರೀ ಮಳೆ ಹಿನ್ನೆಲೆ ವಿವಿಧೆಡೆ KSRTC ಬಸ್ ಸಂಚಾರ ರದ್ದು

ಚಾಮರಾಜನಗರ ಜಿಲ್ಲೆಯಿಂದ ಊಟಿಗೆ 13 ಮತ್ತು ಕ್ಯಾಲಿಕಟ್ ಗೆ 7 ರಾಜ್ಯ ಸಾರಿಗೆ ಬಸ್ ಸಂಚಾರ ರದ್ದು.

Last Updated : Aug 16, 2018, 11:39 AM IST
ಭಾರೀ ಮಳೆ ಹಿನ್ನೆಲೆ ವಿವಿಧೆಡೆ KSRTC ಬಸ್ ಸಂಚಾರ ರದ್ದು title=

ಚಾಮರಾಜನಗರ: ಭಾರೀ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯಿಂದ ತಮಿಳುನಾಡಿನ ಊಟಿ ಮತ್ತು ಕೇರಳದ ಕೊಚ್ಚಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಿಂದ ಊಟಿಗೆ 13 ಮತ್ತು ಕ್ಯಾಲಿಕಟ್ ಗೆ 7 ರಾಜ್ಯ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮತ್ತೊಂದೆಡೆ ಕರಾವಳಿ, ಗಡಿಭಾಗದ ಕಾಸರಗೋಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದ ರಸ್ತೆಗಳು ಜಲಾವೃತಗೊಂಡಿವೆ.  ರಾಜ್ಯದ ಕರಾವಳಿ ಹಾಗೂ ನೆರೆಯ ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಬಸ್ ಸಂಚಾರವನ್ನು ರದ್ದುಗೊಳಿಸಿದೆ.

ಆದರೆ, ಸೇಲಂ ಮೂಲಕ ಕೇರಳಕ್ಕೆ ತಲುಪುವ ಕೆಎಸ್‌ಆರ್‌ಟಿಸಿ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಕೇರಳ ಸಾರಿಗೆ ಸಂಸ್ಥೆಯು ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸುವ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
 

Trending News